
ನವದೆಹಲಿ: ದೇಶದಲ್ಲೆಡೆ ಸತತ 15ನೇ ದಿನಗಳಿಂದಲೂ ಸುಮಾರು 50,000 ಕೊರೊನಾ ಪ್ರಕರಣಗಳು ವರದಿಯಾಗುತ್ತಿವೆ.ಇದರಿಂದಾಗಿ ಹಲವು ರಾಜ್ಯ ಸರ್ಕಾರಗಳು ಕೊರೊನಾ ಸೋಂಕಿನ ಏರಿಕೆಯನ್ನು ತಡೆಯಲು ಕರ್ಫ್ಯೂಗಳನ್ನು ಜಾರಿ ಮಾಡಿವೆ.
ಭಾನುವಾರ ಭಾರತದಲ್ಲಿ 45,209 ಹೊಸ ಕೊರೊನಾ ಪ್ರಕರಣಗಳೊಂದಿಗೆ 90,95,806 ಕ್ಕೆ ಏರಿದರೆ, ಚೇತರಿಕೆ ಸಂಖ್ಯೆ 85,21,617 ಕ್ಕೆ ಏರಿದೆ.ಆರೋಗ್ಯ ಸಚಿವಾಲಯದ ಅಂಕಿಅಂಶಗಳ ಪ್ರಕಾರ, 501 ಹೊಸ ಸಾವುಗಳೊಂದಿಗೆ 1,33,227 ಕ್ಕೆ ಸಾವಿನ ಸಂಖ್ಯೆ ಹೆಚ್ಚಾಗಿದೆ.
ಅನೇಕ ನಗರಗಳಲ್ಲಿ ಹಬ್ಬದ ಕಾರಣದಿಂದಾಗಿ COVID ಪ್ರಕರಣಗಳು ಹೆಚ್ಚಾಗಿದೆ, ಈಗ ದೆಹಲಿ ಮತ್ತು ಅಹ್ಮದಾಬಾದ್ ನಗರಗಳಲ್ಲಿ ಎರಡನೇ ಅಲೆ ಆರಂಭವಾಗಿದೆ. ಈಗ ಹೆಚ್ಚುತ್ತಿರುವ ಕರೋನವೈರಸ್ ಪ್ರಕರಣಗಳ ಹಿನ್ನಲೆಯಲ್ಲಿ ಹಲವಾರು ರಾಜ್ಯಗಳು ರಾತ್ರಿ ಕರ್ಫ್ಯೂ ಅಥವಾ ಸೆಕ್ಷನ್ 144 ಅನ್ನು ವಿಧಿಸಲು ನಿರ್ಧರಿಸಿವೆ.
Comments are closed.