ರಾಷ್ಟ್ರೀಯ

ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮಿತ್‌ ರಾಮ್‌ ರಹೀಮ್‌ ಸಿಂಗ್‌‌ಗೆ ರಹಸ್ಯ ಪೆರೋಲ್!

Pinterest LinkedIn Tumblr


ಚಂಡೀಗಢ: ಅತ್ಯಾಚಾರ ಮತ್ತು ಕೊಲೆ ಆರೋಪದಲ್ಲಿ ಶಿಕ್ಷೆ ಅನುಭವಿಸುತ್ತಿರುವ ಡೇರಾ ಸಚ್ಚಾ ಸೌಧಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ಗೆ ಒಂದು ದಿನದ ಪೆರೋಲ್‌ ಮಂಜೂರು ಮಾಡಿದ್ದ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.

“ಹೃದ್ರೋಗದಿಂದ ಬಳಲುತ್ತಿರುವ ಗುರ್ಮೀತ್‌ ತಾಯಿ ನಾಸೀಬ್‌ ಕೌರ್‌ (85) ದೇಹಸ್ಥಿತಿ ಗಂಭೀರವಾಗಿದೆ, ಹೀಗಾಗಿ ಅವರನ್ನು ನೋಡಲು ಪತಿಗೆ ಪೆರೋಲ್‌ ನೀಡಬೇಕು,” ಎಂದು ಗುರ್ಮೀತ್‌ ಪತ್ನಿ ಹರ್ಜಿತ್‌ ಕೌರ್‌ ಮನವಿ ಮಾಡಿದ್ದರು. ಅದಕ್ಕೆ ಸ್ಪಂದಿಸಿದ ರಾಜ್ಯ ಸರಕಾರ ಒಂದು ದಿನ ಪೆರೋಲ್‌ ಮಂಜೂರು ಮಾಡಿತ್ತು.

ಬಿಗಿ ಭದ್ರತೆಯಲ್ಲಿ ಸುನಾರಿಯಾ ಕಾರಾಗೃಹದಿಂದ ಗುರುಗ್ರಾಮದ ಆಸ್ಪತ್ರೆಗೆ ತೆರಳಿದ ಗುರ್ಮೀತ್‌, ಸಂಜೆಯವರೆಗೂ ತಾಯಿಯ ಜತೆಯಲ್ಲಿದ್ದ ಎಂದು ಮಾಧ್ಯಮಗಳು ವರದಿ ಮಾಡಿವೆ. ಪೆರೋಲ್‌ ನೀಡಿರುವ ಸಂಗತಿ ಮುಖ್ಯಮಂತ್ರಿ ಮನೋಹರ ಲಾಲ್‌ ಖಟ್ಟರ್‌ ಹಾಗೂ ಬೆರಳೆಣಿಕೆ ಸಂಖ್ಯೆಯ ಉನ್ನತ ಅಧಿಕಾರಿಗಳಿಗೆ ಮಾತ್ರ ತಿಳಿದಿತ್ತು. ಗುರ್ಮೀತ್‌ ಭದ್ರತೆಗೆ ಸುಮಾರು 100 ಪೊಲೀಸರನ್ನು ನಿಯೋಜಿಸಲಾಗಿತ್ತು ಎಂದು ಮೂಲಗಳು ತಿಳಿಸಿವೆ.

Comments are closed.