ರಾಷ್ಟ್ರೀಯ

ಇಲ್ಲಿ ಮದುಮಗಳಿಗೆ 10 ಗ್ರಾಂ ಚಿನ್ನ ಉಚಿತ

Pinterest LinkedIn Tumblr


ನವದೆಹಲಿ: ಕಡಿಮೆ ಆದಾಯದ ಕೆಟಗರಿಗೆ ಸೇರಿದ ಕುಟುಂಬದವರಾಗಿದ್ದರೆ, ಮದುವೆಯ ಸಮಯದಲ್ಲಿ, ಯುವತಿಗೆ ಸರ್ಕಾರದಿಂದ 10 ಗ್ರಾಂ ಚಿನ್ನವನ್ನು ನೀಡುವ ಯೋಜನೆಯನ್ನು ಅಸ್ಸಾಂ ಸರ್ಕಾರವು ಜಾರಿಗೆ ತಂದಿದೆ.

ಈ ಯೋಜನೆಗಾಗಿ ರಾಜ್ಯ ಸರ್ಕಾರ ತನ್ನ ಬಜೆಟ್ ನಲ್ಲಿ ಪ್ರತ್ಯೇಕವಾಗಿ ರೂ.300 ಕೋಟಿ ರೂ.ಗಳನ್ನು ಮೀಸಲಿರಿಸಿದೆ. ಆದರೆ, ಅರುಂಧತಿ ಗೋಲ್ಡ್ ಸ್ಕೀಮ್ ನಲ್ಲಿ ಪ್ರತಿ ಕುಟುಂಬದ ಮೊದಲ ಇಬ್ಬರು ಮಕ್ಕಳಿಗೆ ಮಾತ್ರ ಅನ್ವಯಿಸಲಿದೆ. ವಧು ಹಾಗು ವರನಿಗೆ ಕ್ರಮಶಃ 18 ಮತ್ತು 21 ವರ್ಷ ವಯಸ್ಸಿದ್ದರೆ ಮಾತ್ರ ಈ ಸ್ಕೀಮ್ ಗೆ ಅವರು ಅರ್ಹರಾಗಿರುತ್ತಾರೆ.

ಈ ರೀತಿಯ ಸಂಪ್ರದಾಯವಿರುವ ಸಮುದಾಯಗಳ ವಧುಗಳಿಗೆ ಮಾತ್ರ ಒಂದು ತೊಲೆ ಬಂಗಾರ ಸಿಗಲಿದೆ. ಇದರ ಜೊತೆಗೆ ಅರ್ಜಿ ಸಲ್ಲಿಸುವವರ ವಿವಾಹ ವಿಶೇಷ ವಿವಾಹ ಕಾಯ್ದೆ 1954 ರ ಅಡಿ ನೋಂದಣಿಯಾಗಬೇಕು. ಜನನ ಪ್ರಮಾಣಪತ್ರದ ಸತ್ಯಾಸತ್ಯತೆ ಹಾಗೂ ವೈದ್ಯಕೀಯ ಪರೀಕ್ಷೆಯ ಮಾಧ್ಯಮದ ಮೂಲಕ ವಯಸ್ಸಿನ ಮಾನದಂಡವನ್ನು ಕಠಿಣವಾಗಿ ಅನ್ವಯಿಸಲಾಗುವುದು.

ಹೀಗೆ ಅರ್ಜಿ ಸಲ್ಲಿಸಬೇಕುಅರ್ಜಿ ಸಲ್ಲಿಕೆಗಾಗಿ ಮ್ಯಾರೇಜ್ ಆಫೀಸರ್ ಎದುರು ಅರ್ಜಿ ನಮೂನೆಯನ್ನು ಭರ್ತಿ ಮಾಡಬೇಕು. ಇದಕ್ಕಾಗಿ revenueassam.nic.in ನಲ್ಲಿ ಅರ್ಜಿ ನಮೂನೆಯನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಈ ಫಾರ್ಮ್ ಅನ್ನು ಆನ್ಲೈನ್ ನಲ್ಲಿ ಭರ್ತಿ ಮಾಡಿ ಕೂಡ ಪ್ರಿಂಟ್ ಔಟ್ ಪಡೆಯಬಹುದು. ಎಲ್ಲ ಸೂಕ್ತ ದಾಖಲೆಗಳನ್ನು ಲಗತ್ತಿಸಿದ ಅರ್ಜಿಯನ್ನು ವಿವಾಹ ನೋಂದಣಿ ಅಧಿಕಾರಿಗಳ ಕಚೇರಿಯಲ್ಲಿ ಸಲ್ಲಿಸಬೇಕು.

ಎಲ್ಲ ಸೂಕ್ತ ದಾಖಲೆಗಳ ಪರಿಶೀಲನೆಯ ಬಳಿಕ SMS ಅಥವಾ ಇ-ಮೇಲ್ ಮಾಧ್ಯಮದ ಮೂಲಕ ಅರ್ಹ ಅಥವಾ ಅನರ್ಹತೆಯನ್ನು ಸೂಚಿಸಲಾಗುವುದು ಹಾಗೂ ಹಣವನ್ನು ಬ್ಯಾಂಕ್ ಖಾತೆಗೆ ವರ್ಗಾಯಿಸಲಾಗುವುದು.

Comments are closed.