ರಾಷ್ಟ್ರೀಯ

ಸ್ಮಾರ್ಟ್​ಫೋನ್​ ಚಾರ್ಜ್ ಬೇಗನೆ​ ಖಾಲಿಯಾಗುತ್ತಿದೆಯಾ? ಇದಕ್ಕಿದೆ 5 ಟಿಪ್ಸ್​​​ಗಳ ಪರಿಹಾರ

Pinterest LinkedIn Tumblr


ಸ್ಮಾರ್ಟ್​ಫೋನ್​ ಖರೀದಿಸುವವರು ಅದರಲ್ಲಿ ಅಳವಡಿಸಿಕೊಂಡಿರುವ ಬ್ಯಾಟರಿ ಎಷ್ಟೆಂದು ಪರಿಗಣಿಸಿ ಮತ್ತೆ ಖರೀದಿಸುತ್ತಾರೆ. ಏಕೆಂದರೆ ಕೆಲವೊಮ್ಮೆ ಬ್ಯಾಟರಿ ಬಾಳಿಕೆ ದೊಡ್ಡ ಸಮಸ್ಯೆಯಾಗುತ್ತದೆ.

ಹಾಗಾಗಿ 5 ಸಾವಿರ ಅಥವಾ 6 ಸಾವಿರ mAh ಬ್ಯಾಟರಿ ನೋಡಿ ಖರೀದಿಸುತ್ತಾರೆ. ಆದರೂ ಇಂಟರ್​​​ನೆಟ್​ ಬಳಸುವ ವೇಳೆಗೆ ಇದ್ದ ಚಾರ್ಜ್​ ಕೂಡ ಖಾಲಿಯಾಗಿ ಸಮಸ್ಯೆಯಾಗುವ ಸನ್ನಿವೇಶಗಳು ಹೆಚ್ಚು.

ಸ್ಮಾರ್ಟ್​ಫೋನ್​ ಬಳಕೆದಾರರು ಕೆಲವೊಂದು ಟಿಪ್ಸ್ ಬಳಸಿದರೆ ಬ್ಯಾಟರಿಯನ್ನು ಉಳಿಸಿಕೊಳ್ಳಬಹುದಾಗಿದೆ. ಅದಕ್ಕಾಗಿ ಇಲ್ಲಿ 5 ಟಿಪ್ಸ್​​​ಗಳನ್ನು ನೀಡಲಾಗಿದೆ.

ಬ್ಯಾಟರಿ ಬಳಕೆ ಹೆಚ್ಚಿಸಬೇಕಾದರೆ ಮೊದಲು ಸ್ಮಾರ್ಟ್​ಫೋನ್​​ನಲ್ಲಿ ಅನಾವಶ್ಯಕವಾಗಿ ಆನ್ ಆಗಿರುವ ಬ್ಲೂಟೂತ್ ಮತ್ತು ಲೊಕೇಷನ್ ಆಯ್ಕೆಯನ್ನು ಆಫ್ ಮಾಡಿ. ಕೆಲಮೊಮ್ಮೆ ಬ್ಲೂಟೂತ್​ಗೆ ಹೆಚ್ಚಿನ ಬ್ಯಾಟರಿ ಬಳಕೆಯಾಗುವ ಸಾಧ್ಯತೆಯಿದೆ. ಹಾಗಾಗಿ ಅದನ್ನು ಆಫ್ ಮಾಡಿದರೆ ಸ್ಮಾರ್ಟ್​ಫೋನ್​ ಚಾರ್ಜ್ ಉಳಿಸಿಕೊಳ್ಳಬಹುದಾಗಿದೆ.

ಸ್ಮಾರ್ಟ್​ಫೋನ್​ ಡಿಸ್​​ಪ್ಲೇ ಬ್ರೇಟ್​ನೆಸ್​ ಬಗ್ಗೆ ಗಮನಹರಿಸಿ. ಸ್ಮಾರ್ಟ್​ಫೋನ್​ ಬ್ಯಾಟರಿ ಖಾಲಿಯಾಗಲು ಇದು ಕೂಡ ಪರೋಕ್ಷ ಕಾರಣವಾಗಬಹುದು.

ಕೆಲವೊಮ್ಮೆ ಆ್ಯಪ್​ಗಳನ್ನು ಡೌನ್ಲೋಡ್ ಮಾಡುತ್ತೇವೆ. ಆದರೆ ಬಳಕೆ ಮಾಡುವುದಿಲ್ಲ. ಹಾಗಾಗಿ ಸ್ಮಾರ್ಟ್​ಫೋನ್​ನಲ್ಲಿ ಯಾವೆಲ್ಲ ಆ್ಯಪ್​ಗಳಿವೆ ಎಂದು ಪರೀಕ್ಷಿಸಿ. ನಂತರ ಬೇಡವಾದ ಅಪ್ಲಿಕೇಶನ್ ಅನ್ನು ಡಿಲೀಟ್ ಮಾಡಿ.

ಡಿಸ್​ಪ್ಲೇ ಫೀಚರ್ ಬಗ್ಗೆ ಗಮನಹರಿಸಿ. ಅಂದರೆ ದಿನಾಂಕ, ಸಮಯ, ವಾತಾವರಣದ ಮಾಹಿತಿ ಇವುಗಳಿಗಾಗಿ ಸ್ಮಾರ್ಟ್​ಫೋನ್​ನಲ್ಲಿರುವ ಬ್ಯಾಟರಿ ಹೆಚ್ಚು ಖಾಲಿಯಾಗುವ ಪ್ರಸಂಗವಿದೆ. ಕೊಂಚ ಆ ಬಗ್ಗೆ ಗಮನಹರಿಸುವ ಮೂಲಕ ಬ್ಯಾಟರಿ ಖಾಲಿಯಾಗುವುದನ್ನು ತಡೆಯಬಹುದು.

ಸ್ಮಾರ್ಟ್​ಫೋನ್​ಗೆ ಸೂಕ್ತವಾದ ವಾಲ್​ಪೇಪರ್ ಬಳಸಿ. ಸ್ಮಾರ್ಟ್​ಫೋನ್​ ಬ್ಯಾಟರಿಯನ್ನು ಹೀರಿಕೊಳ್ಳುವ ವಾಲ್​​​ಪೇಪರ್ ಬಳಸುತ್ತಿದ್ದರೆ ಕಿತ್ತೆಸೆಯಿರಿ.

Comments are closed.