ಕರ್ನಾಟಕ

ಈರುಳ್ಳಿ ದರದಲ್ಲಿ ಭಾರೀ ಇಳಿಕೆ

Pinterest LinkedIn Tumblr


ಭಾರೀ ಮಳೆಯಿಂದ ದೇಶದ ಹಲವು ಬೆಳೆದ ಈರುಳ್ಳಿ ಪೂರೈಕೆ ಇಲ್ಲದೆ ಕೆಜಿ ಈರುಳ್ಳಿ ಬೆಲೆ 100 ರೂಪಾಯಿ ದಾಟಿತ್ತು. ಇದೀಗ ಕೇಂದ್ರವು ಈರುಳ್ಳಿ ಸಂಗ್ರಹಣೆ ಮೇಲೆ ಮಿತಿ ಹೇರಿದ ಕಾರಣ ಬೆಲೆ ಇಳಿಕೆ ಆಗಿದೆ.

ಏಷ್ಯಾದ ಅತಿ ದೊಡ್ಡ ಹೋಲ್​ಸೇಲ್ ಈರುಳ್ಳಿ ಮಾರುಕಟ್ಟೆ ಲಸಲ್​ಗಾಂವ್​ನಲ್ಲಿ ಕೆಜಿ ಈರುಳ್ಳಿಗೆ 5 ರೂಪಾಯಿ ಇಳಿಕೆ ಕಂಡಿದೆ. ಈ ಮೂಲಕ ಈ ಮಾರುಕ್ಟೆಯಲ್ಲಿ ಈರುಳ್ಳಿ ಬೆಲೆ 51 ರೂಪಾಯಿ ಆಗಿದೆ.

ಬೆಂಗಳೂರು, ಮುಂಬೈ ಸೇರಿ ಅನೇಕ ಪ್ರಮುಖ ನಗರಗಳಲ್ಲಿ ಈರುಳ್ಳಿ ಬೆಲೆ ಕಡಿಮೆ ಆಗಿದೆ. ಬೆಂಗಳೂರಲ್ಲಿ ಕೆಜಿ ಈರುಳ್ಳಿಗೆ 5-6 ರೂಪಾಯಿ ಕುಸಿತ ಕಂಡಿದೆ. ಈ ಮೂಲಕ ಕೆಜಿ ಈರುಳ್ಳಿಗೆ 64 ರೂಪಾಯಿ ಆಗಿದೆ. ಇದು ಹೋಲ್​ ಸೇಲ್​ ದರ ಆಗಿದ್ದು, ಚಿಲ್ಲರೆ ವ್ಯಾಪಾರಿಗಳ ಬಳಿ ಈ ದರ ಹೆಚ್ಚಿದೆ.

ಈರುಳ್ಳಿ ಕೊಯ್ಲಿಗೆ ಸಿದ್ಧಗೊಳ್ಳುತ್ತಿದೆ. ಈ ವೇಳೆ ಧಾರಾಕಾರವಾಗಿ ಮಳೆ ಆಗುತ್ತಿರುವುದರಿಂದ ಬೆಳೆ ಹಾನಿಯಾಗಿದೆ. ಎಕರೆಗೆ ಸರಾಸರಿ 250 ಚೀಲ ಈರುಳ್ಳಿ ಬೆಳೆ ಬರುತ್ತಿತ್ತು. ಆದರೆ, ಇದು ಈಗ 70 ಚೀಲಗಳಿಗೆ ಇಳಿಕೆ ಆಗಿದೆ.

Comments are closed.