ರಾಷ್ಟ್ರೀಯ

ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ, ಕೊರೋನಾ ಲಸಿಕೆ ಬರುವವರೆಗೂ ನಾವು ಜಾಗರೂಕರಾಗಿಬೇಕು: ಪ್ರಧಾನಿ ನರೇಂದ್ರ ಮೋದಿ

Pinterest LinkedIn Tumblr

ನವದೆಹಲಿ: ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ, ದೇಶದ ಪ್ರತಿ ನಾಗರಿಕನಿಗೂ ಕೋವಿಡ್ -19 ಲಸಿಕೆ ಲಭ್ಯವಾಗುವಂತೆ ಮಾಡಲು ಕೇಂದ್ರ ಸರ್ಕಾರ ಅಗತ್ಯ ಸಿದ್ಧತೆ ಮಾಡಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಮಂಗಳವಾರ ಹೇಳಿದ್ದಾರೆ.

ಆನ್​ಲೈನ್​ನಲ್ಲಿ ದೇಶವನ್ನುದ್ದೇಶಿಸಿ ಮಾತನಾಡಿದ ಅವರು, ಕೊರೋನಾ ವಿರುದ್ದದ ಹೋರಾಟದಲ್ಲಿ ಜನ ಕಷ್ಟಪಟ್ಟಿದ್ದಾರೆ. ನಮ್ಮಲ್ಲಿ ಜನ ಹೆಚ್ಚು ಜವಾಬ್ದಾರಿ ನಿಭಾಯಿಸಲು ಮನೆಯಿಂದ ಹೊರ ಬರುತ್ತಿದ್ದಾರೆ. ಕೊರೋನಾ ವಿರುದ್ಧದ ಹೋರಾಟದಲ್ಲಿ ನಮಗೆ ಜಯ ಸಿಕ್ಕಿದೆ. ಆರ್ಥಿಕ ಪರಿಸ್ಥಿತಿಯೂ ಸುಧಾರಿಸುತ್ತಿದೆ. ಕೊರೋನಾದಿಂದ ಗುಣಮುಖರಾಗುತ್ತಿರುವವರ ಸಂಖ್ಯೆ ಹೆಚ್ಚುತ್ತಿದೆ. ಕೊರೋನಾದಿಂದ ಏನು ಆಗಿಲ್ಲ ಎಂದು ಜನ ಓಡಾಡುತ್ತಿದ್ದಾರೆ. ಆದರೆ, ಅವರು ಸುರಕ್ಷಿತವಾಗಿಲ್ಲ. ಪ್ರತಿ 10 ಲಕ್ಷ ಜನರಲ್ಲಿ 83 ಜನ ಕೊರೋನಾಗೆ ಬಲಿಯಾಗಿದ್ದಾರೆ.

ಕೊರೋನಾ ಮಹಾಮಾರಿ ವಿರುದ್ಧದ ಹೋರಾಟದಲ್ಲಿ ಟೆಸ್ಟಿಂಗ್ ಹೆಚ್ಚಾಗಿದೆ. ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡ. ಮಾಸ್ಕ್ ಧರಿಸದೇ ಕುಟುಂಬ ಮಕ್ಕಳನ್ನು ಅಪಾಯಕ್ಕೆ ದೂಡುತ್ತಿದ್ದೀರಿ. ಕೊರೋನಾ ನಿಯಮ ಪಾಲಿಸದೇ ಇರುವುದು. ಮಾಸ್ಕ್ ಧರಿಸದೇ ಓಡಾಡುವುದು ಅಪಾಯಕಾರಿ. ಕೊರೋನಾ ಲಸಿಕೆ ಬರುವವರೆಗೂ ನಾವು ಜಾಗರೂಕರಾಗಿಬೇಕು  ಎಂದರು.

ಪ್ರತಿಯೊಬ್ಬರಿಗೂ ಲಸಿಕೆ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಎಲ್ಲಿ ನಮ್ಮ ದೇಶದ ವಿಜ್ಞಾನಿಗಳು ಕೂಡ ಜೀವ ಪಣಕ್ಕಿಟ್ಟು ಲಸಿಕೆ ಸಂಶೋಧನೆಯಲ್ಲಿದ್ದಾರೆ. ಎಲ್ಲಿವರೆಗೂ ಕೊರೋನಾ ವ್ಯಾಕ್ಸಿನ್ ಬರುವುದಿಲ್ಲವೋ ಅಲ್ಲಿವರೆಗೆ ಕೊರೋನಾ ವಿರುದ್ಧ ಹೋರಾಡಬೇಕು. ಔಷಧಿ ಸಿಗುವವರೆಗೆ ಕೊರೋನಾ ಬಗ್ಗೆ ನಿರ್ಲಕ್ಷ್ಯ ಬೇಡವೇ ಬೇಡ ಎಂದು ಪ್ರಧಾನಿ ನರೇಂದ್ರ ಮೋದಿ ಕರೆ ನೀಡಿದ್ದಾರೆ.

Comments are closed.