ರಾಷ್ಟ್ರೀಯ

ಚಿನ್ದದ ದರದಲ್ಲಿ ಭಾರಿ ಕುಸಿತ

Pinterest LinkedIn Tumblr


ನವದೆಹಲಿ: ಇಂದು (ಸೋಮವಾರ) ಚಿನ್ನದ ದರ ಮಾರುಕಟ್ಟೆಯಲ್ಲಿ ಭಾರಿ ಕುಸಿತ ಕಂಡಿದೆ.

ಸುಮಾರು 105.00 ರೂ. ಗಳ ಕುಸಿತ ದಾಖಲಿಸಿದೆ. ಇನ್ನೊಂದೆಡೆ ಬೆಳ್ಳಿ ಬೆಲೆಯೂ(Silver Price) ಕೂಡ ಕೆ.ಜಿಗೆ 214 ರೂ.ಗಳ ಕುಸಿತ ಕಂಡು 67663.00ರೂ.ಗಳಲ್ಲಿ ತನ್ನ ವಹಿವಾಟು ಮುಂದುವರೆಸಿದೆ.

ಮಾರುಕಟ್ಟೆ ತಜ್ಞ ಕೋಟಕ್ ಸೆಕ್ಯುರಿಟೀಸ್ ರವೀಂದ್ರ ರೈ ಅವರ ಪ್ರಕಾರ, ಮುಂಬರುವ ಸಮಯದಲ್ಲಿ ಹೂಡಿಕೆದಾರರು ಚಿನ್ನದ ಇಟಿಎಫ್‌ಗಳಲ್ಲಿ ದೊಡ್ಡ ಪ್ರಮಾಣದಲ್ಲಿ ಹೂಡಿಕೆ ಮಾಡುವುದನ್ನು ಮುಂದುವರೆಸಲಿದ್ದಾರೆ. ಇದಕ್ಕೂ ಮೊದಲು ಹೂಡಿಕೆದಾರರು ಭೌತಿಕ ಚಿನ್ನದಲ್ಲಿ ಮಾತ್ರ ಹೂಡಿಕೆ ಮಾಡಲು ಆದ್ಯತೆ ನೀಡುತ್ತಿದ್ದರು. ಆದರೆ ಈಗ ಚಿನ್ನದ ಇಟಿಎಫ್‌ಗಳು ಚಿನ್ನದಲ್ಲಿ ಹೂಡಿಕೆ ಮಾಡಲು ಉತ್ತಮ ಆಯ್ಕೆಯಾಗಿವೆ. ಅದರಲ್ಲಿ ಹೂಡಿಕೆ ಮಾಡುವುದು ಮತ್ತು ಹಣವನ್ನು ಹಿಂಪಡೆಯುವುದು ತುಂಬಾ ಸುಲಭ. ಕಳೆದ ಎರಡು ವರ್ಷಗಳಲ್ಲಿ ಚಿನ್ನದ ಇಟಿಎಫ್‌ಗಳಲ್ಲಿನ ಹೂಡಿಕೆ ಹೆಚ್ಚಾಗಿದೆ. ಜನರು ಈಗ ತಮ್ಮ ಬಂಡವಾಳದ ಶೇಕಡಾ 10 ರಿಂದ 15 ರಷ್ಟು ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಮಾಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.

ಕ್ವಾಂಟಮ್ ಗೋಲ್ಡ್ ಇಟಿಎಫ್‌ ನ ಚಿರಾಗ್ ಮೆಹ್ತಾ ಹೇಳುವ ಪ್ರಕಾರ, ಚಿನ್ನದ ಇಟಿಎಫ್‌ಗಳನ್ನು ಷೇರು ವಿನಿಮಯ ಕೇಂದ್ರದಲ್ಲಿ ಪಟ್ಟಿ ಮಾಡಲಾಗಿದೆ. ಅದರಲ್ಲಿ ಅರ್ಧ ಗ್ರಾಂ,ನಿಂದ ಹೂಡಿಕೆ ಪ್ರಾರಂಭಿಸಬಹುದು. ಇದರಲ್ಲಿ ಶುದ್ಧತೆಯ ಬಗ್ಗೆ ಚಿಂತೆ ಮಾಡುವ ಅಗತ್ಯವಿಲ್ಲ. ಭೌತಿಕ ಚಿನ್ನದಲ್ಲಿ ಶುದ್ಧತೆ ದೊಡ್ಡ ಸವಾಲಾಗಿದೆ. ಮುಂಬರುವ ಸಮಯದಲ್ಲಿ ಚಿನ್ನದ ಇಟಿಎಫ್‌ಗಳಲ್ಲಿ ಹೂಡಿಕೆ ಹೆಚ್ಚಾಗಲಿದೆ. ಬಳಸಬೇಕಾದ ಚಿನ್ನವನ್ನು ಭೌತಿಕ ಚಿನ್ನವಾಗಿ ಇಡಬೇಕು ಎಂದು ಜನರು ಈಗ ಅರ್ಥಮಾಡಿಕೊಂಡಿದ್ದಾರೆ. ಜನರು ಹೂಡಿಕೆಗಾಗಿ ಚಿನ್ನದ ಇಟಿಎಫ್‌ಗಳನ್ನು ಆಯ್ಕೆ ಮಾಡುತ್ತಿದ್ದಾರೆ. ಇಟಿಎಫ್‌ಗಳಲ್ಲಿ ಹೂಡಿಕೆ ಮಾಡಲು ಡಿಮ್ಯಾಟ್ ಖಾತೆಯ ಅಗತ್ಯವಿದೆ. ಡಿಮ್ಯಾಟ್ ಖಾತೆ ಇಲ್ಲದವರು ಮ್ಯೂಚುಯಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡಬಹುದು

Comments are closed.