ರಾಷ್ಟ್ರೀಯ

ಮಾರ್ಚ್ ನಂತರ ತೆರೆದ ತಾಜ್ ಮಹಲ್: ಭೇಟಿ ನೀಡುವ ಮುನ್ನ ಈ ವಿಷಯ ತಿಳಿದಿರಲಿ

Pinterest LinkedIn Tumblr


ಆಗ್ರಾ: ಕರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮಾರ್ಚ್ನಲ್ಲಿ ಮುಚ್ಚಲಾಗಿದ್ದ ತಾಜ್ ಮಹಲ್ ಅನ್ನು ಇಂದು (ಸೋಮವಾರ) ಪ್ರವಾಸಿಗರಿಗೆ ತೆರೆಯಲಾಗಿದೆ.

ಸಾಮಾಜಿಕ ಅಂತರದಂತಹ ನಿಯಮಗಳ ಅಡಿಯಲ್ಲಿ ಪ್ರವಾಸಿಗರಿಗೆ ತಾಜ್‌ಗೆ ಭೇಟಿ ನೀಡಲು ಅವಕಾಶವಿರುತ್ತದೆ. ಇದಲ್ಲದೆ ಪ್ರತಿದಿನ 5000 ಪ್ರವಾಸಿಗರಿಗೆ ಮಾತ್ರ ಪ್ರವೇಶ ಸಿಗಲಿದೆ. ಅಧಿಕಾರಿಗಳ ಪ್ರಕಾರ ಪ್ರವೇಶ ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಮಾತ್ರ ಖರೀದಿಸಬಹುದು.

ಪ್ರತಿ ವರ್ಷ ಸುಮಾರು ಏಳು ಮಿಲಿಯನ್ ಜನರು ಈ ಪ್ರೇಮ ಸೌಧಕ್ಕೆ ಭೇಟಿ ನೀಡುತ್ತಾರೆ. ಕಳೆದ ಕೆಲವು ದಿನಗಳಲ್ಲಿ ದೇಶದಲ್ಲಿ ಕರೋನಾವೈರಸ್ (Coronavirus) ಪ್ರಕರಣಗಳು ಸಾಕಷ್ಟು ವೇಗವನ್ನು ಪಡೆದುಕೊಂಡಿದೆ. ಆರೋಗ್ಯ ಸಚಿವಾಲಯ ಭಾನುವಾರ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಕರೋನಾ ಸೋಂಕಿತರ ಸಂಖ್ಯೆ 54,00,619 ತಲುಪಿದೆ. ಇದರೊಂದಿಗೆ ಕರೋನಾದ ಸಾವಿನ ಸಂಖ್ಯೆಯೂ ಹೆಚ್ಚುತ್ತಿದೆ. ಇಲ್ಲಿಯವರೆಗೆ 86,000ಕ್ಕೂ ಹೆಚ್ಚು ಜನರು ಕರೋನಾ ರುದ್ರನರ್ತನಕ್ಕೆ ಬಲಿಯಾಗಿದ್ದಾರೆ.

Comments are closed.