ರಾಷ್ಟ್ರೀಯ

ದೇಶದಲ್ಲಿ ಅತೀ ಕಡಿಮೆ ಕೊರೋನಾ ಸೋಂಕು ದಾಖಲಾದ ರಾಜ್ಯಗಳಾವುದು ? ಇಲ್ಲಿದೆ ಸಮಗ್ರ ಮಾಹಿತಿ….

Pinterest LinkedIn Tumblr

ನವದೆಹಲಿ: ಭಾರತದಲ್ಲಿ ಕೊರೋನಾ ಮಹಾಮಾರಿ ಆರ್ಭಟ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚುತ್ತಲೇ ಇದೆ. ಜನಜೀವನ ಎಂದಿನಂತೆ ಆಗಿದ್ದರೂ ಕೊರೋನಾ ಭೀತಿಯಿಂದ ಜನ ಇನ್ನೂ ಹೊರಬಂದಿಲ್ಲ.

ಕೊರೋನಾ ಸೋಂಕು ದೇಶದಲ್ಲಿ ಸಹ ಹಲವು ರಾಜ್ಯಗಳಲ್ಲಿ ತಲ್ಲಣವನ್ನು ಸೃಷ್ಟಿಸಿದೆ. ಇದರ ನಡುವೆ ದೇಶದ ಯಾವ ರಾಜ್ಯಗಳಲ್ಲಿ ಅತೀ ಕಡಿಮೆ ಕೊರೊನಾ ಪ್ರಕರಣಗಳು ಪತ್ತೆಯಾಗಿವೆ ಎಂಬ ಮಾಹಿತಿ ಇಲ್ಲಿದೆ.

ದೇಶದಲ್ಲಿ ಒಂದೇ ದಿನ 92,605 ಹೊಸ ಪ್ರಕರಣ ಪತ್ತೆಯಾಗಿವೆ. ಈ ಮೂಲಕ ಸೋಂಕಿತರ ಸಂಖ್ಯೆ 54 ಲಕ್ಷಕ್ಕೆ ಏರಿಕೆಯಾಗಿದೆ. 24 ಗಂಟೆಯಲ್ಲಿ 92,605 ಮಂದಿಗೆ ಕೊರೊನಾ ಪಾಸಿಟಿವ್ ದೃಢವಾಗಿದೆ. ಈ ಮೂಲಕ ದೇಶದಲ್ಲಿ ಸೋಂಕಿತರ ಸಂಖ್ಯೆ 54,00,620ಕ್ಕೆ ಏರಿಕೆಯಾಗಿದೆ. ಇನ್ನೂ ಒಂದೇ ದಿನ ಕೊರೊನಾಗೆ 1,133 ಮಂದಿಗೆ ಬಲಿಯಾಗಿದ್ದಾರೆ. ಒಟ್ಟು 86,752 ಜನ ಕೊರೊನಾಗೆ ಬಲಿಯಾಗಿದ್ದಾರೆ ಎಂದು ಕೇಂದ್ರ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಇಂತಹ ಪರಿಸ್ಥಿತಿಯಲ್ಲಿ ದೇಶದ ಕೆಲ ರಾಜ್ಯಗಳಲ್ಲಿ ಇನ್ನೂ ಅಷ್ಟೇನು ಕೊರೊನಾ ಪ್ರಕರಣಗಳು ಪತ್ತೆಯಾಗಿಲ್ಲ. ಈ ಪೈಕಿ ಮೀಜೋರಾಂನಲ್ಲಿ ಒಟ್ಟು ಕೊರೊನಾ ಸೋಂಕಿತರ ಸಂಖ್ಯೆ ಕೇವಲ 1,587 ಇದ್ದು, ಕೊರೊನಾದಿಂದ ಒಬ್ಬರೂ ಸಾವನ್ನಪ್ಪಿದ ಏಕೈಕ ರಾಜ್ಯ ಇದಾಗಿದೆ. ಭಾನುವಾರ 14 ಜನರಲ್ಲಿ ಸೋಂಕು ಕಾಣಿಸಿಕೊಂಡಿದೆ. ಮಿಜೋರಾಂನಲ್ಲಿ ಕೇವಲ 588 ಸಕ್ರಿಯ ಪ್ರಕರಣಗಳಿದ್ದು, ಒಟ್ಟು 973 ಜನ ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ.

ಕೇಂದ್ರಾಡಳಿತ ಪ್ರದೇಶವಾದ ದಾದ್ರಾ ನಗರ ಹವೇಲಿ ಹಾಗೂ ದಿಯು ದಮನ್‍ನಲ್ಲಿ ಕೇವಲ 208 ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಅತೀ ಕಡಿಮೆ ಕೊರೊನಾ ಸಾವು ಸಂಭವಿಸಿದ ಪೈಕಿ ಇದು ದೇಶದಲ್ಲಿ ಎರಡನೇ ಸ್ಥಾನದಲ್ಲಿದೆ. ದಾದ್ರಾ ನಗರ ಹವೇಲಿ ಹಾಗೂ ದಿಯು ದಮನ್‍ನಲ್ಲಿ ಈವರೆಗೆ ಇಬ್ಬರು ಸಾವನ್ನಪ್ಪಿದ್ದಾರೆ.

ಕೊರೊನಾ ಸೋಂಕು ಹಾಗೂ ಅತೀ ಕಡಿಮೆ ಕೊರೊನಾ ಸಾವು ಸಂಭವಿಸಿದ ರಾಜ್ಯಗಳ ಪೈಕಿ ಅರುಣಾಚಲ ಪ್ರದೇಶ ಮೂರನೇ ಸ್ಥಾನದಲ್ಲಿದೆ. ಇಲ್ಲಿ 13 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ಕೊರೊನಾ ಸೋಂಕು ಹಾಗೂ ಸಾವಿನ ಸಂಖ್ಯೆ ಹೋಲಿಸಿದರೆ ತುಂಬಾ ವ್ಯತ್ಯಾಸವಿದ್ದು, ಸಾವಿನ ಪ್ರಮಾಣ ತುಂಬಾ ಕಡಿಮೆ ಇದೆ. 7 ಸಾವಿರಕ್ಕೂ ಅಧಿಕ ಕೊರೊನಾ ಪ್ರಕರಣಗಳು ಅರುಣಾಚಲ ಪ್ರದೇಶದಲ್ಲಿ ದಾಖಲಾಗಿವೆ. ನಾಗಾಲ್ಯಾಂಡ್, ಲಡಾಖ್, ಮೀಜೋರಾಂ, ಸಿಕ್ಕಿಂ, ದಾದ್ರಾ ನಗರ ಹವೇಲಿ ಹಾಗೂ ದಿಯು ದಮನ್, ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳು ಹಾಗೂ ಲಕ್ಷದ್ವೀಪಕ್ಕಿಂತ ಹೆಚ್ಚು ಕೊರೊನಾ ಪ್ರಕರಣಗಳು ಪತ್ತೆಯಾಗಿವೆ. ಆದರೆ ಸಾವಿನ ಸಂಖ್ಯೆ ಕಡಿಮೆ ಇದೆ.

ಕೊರೊನಾದಿಂದ ಅತೀ ಕಡಿಮೆ ಸಾವನ್ನಪ್ಪಿದ ರಾಜ್ಯಗಳ ಪೈಕಿ ನಾಗಾಲ್ಯಾಂಡ್ ನಾಲ್ಕನೇ ಸ್ಥಾನದಲ್ಲಿದೆ. ಈ ವರಗೆ 15 ಜನ ಮಾತ್ರ ಕೊರೊನಾದಿಂದ ಸಾವನ್ನಪ್ಪಿದ್ದಾರೆ. 1,206 ಸಕ್ರಿಯ ಪ್ರಕರಣಗಳಿವೆ. ಅಲ್ಲದೆ ಕೊರೊನಾದಿಂದ ಗುಣಮುಖರಾಗುತ್ತಿರುವವರ ಪ್ರಮಾಣ ಸಹ ಶೇ.76.96ರಷ್ಟಿದೆ.

ಐದನೇ ಸ್ಥಾನವನ್ನು ಸಿಕ್ಕಿಂ ಪಡೆದಿದ್ದು, 2,342 ಕೊರೊನಾ ಪ್ರಕಣಗಳು ಪತ್ತೆಯಾಗಿವೆ. 28 ಜನ ಕೊರೊನಾದಿಂದ ಸಾವನ್ನಪ್ಪಿದ್ದಾರೆ. ರಾಜ್ಯದಲ್ಲಿ ಪ್ರಸ್ತುತ ಕೇವಲ 426 ಸಕ್ರಿಯ ಪ್ರಕರಣಗಳಿವೆ. 1,891 ಜನ ಗುಣಮುಖರಾಗಿದದ್ದಾರೆ.

Comments are closed.