ರಾಷ್ಟ್ರೀಯ

ಬರ್ತ್ ಡೇ ಗಿಫ್ಟ್ ಏನು ಬೇಕು ಎಂದವರಿಗೆ ಪ್ರಧಾನಿ ಮೋದಿ ಕೇಳಿದ್ದೇನು?

Pinterest LinkedIn Tumblr

ನವದೆಹಲಿ: ತಮ್ಮ ಹುಟ್ಟುಹಬ್ಬಕ್ಕೆ ಶುಭಾಶಯ ಕೋರಿದ ಎಲ್ಲರಿಗೂ ಧನ್ಯವಾದ ಹೇಳಿರುವ ಪ್ರಧಾನಿ ನರೇಂದ್ರ ಮೋದಿ, ಕೊರೋನಾ ವೈರಸ್ ನ್ನು ಆದಷ್ಟು ತಡೆಗಟ್ಟಲು ಎಲ್ಲರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಇದುವೇ ನನಗೆ ನೀವು ನನ್ನ ಹುಟ್ಟುಹಬ್ಬಕ್ಕೆ ನೀಡುವ ಕೊಡುಗೆ ಎಂದು ಕೇಳಿದ್ದಾರೆ.

ನಿನ್ನೆ ತಡರಾತ್ರಿ ಟ್ವೀಟ್ ಮಾಡಿದ ಅವರು, ನನ್ನ ಹುಟ್ಟುಹಬ್ಬಕ್ಕೆ ಏನು ಬೇಕು ಎಂದು ಹಲವರು ಕೇಳಿದ್ದು ಅವರಲ್ಲಿ ನಾನು ಈ ಕ್ಷಣದಲ್ಲಿ ಕೇಳುವುದೇನೆಂದರೆ ಮಾಸ್ಕ್ ಕಡ್ಡಾಯವಾಗಿ ಧರಿಸುವುದನ್ನು ಮರೆಯಬೇಡಿ, ಅದನ್ನು ಸರಿಯಾಗಿ ಧರಿಸಿಕೊಳ್ಳಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ, ಜನದಟ್ಟಣೆ ಸೇರುವಲ್ಲಿ ಸೇರಬೇಡಿ, ನಿಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಿಕೊಳ್ಳಿ ಎಂದು ಕೇಳಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.

ನಿನ್ನಯಷ್ಟೆ ಪ್ರಧಾನಿ ಮೋದಿಯವರು 70ನೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ.

Comments are closed.