ರಾಷ್ಟ್ರೀಯ

ಪಂಜಾಬ್ ಗಡಿಯಲ್ಲಿ ಶಸ್ತ್ರಾಸ್ತ್ರ ಕಳ್ಳಸಾಗಣೆ ಯತ್ನ ವಿಫಲಗೊಳಿಸಿದ ಬಿಎಸ್‍ಎಫ್‍

Pinterest LinkedIn Tumblr

ನವದೆಹಲಿ: ಭಾರತ-ಪಾಕಿಸ್ತಾನ ಗಡಿಯಲ್ಲಿ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಕಳ್ಳಸಾಗಣೆ ಮಾಡುತ್ತಿದ್ದ ಯತ್ನವನ್ನು ಗಡಿ ಭದ್ರತಾ ಪಡೆ (ಬಿಎಸ್‍ಎಫ್‍) ವಿಫಲಗೊಳಿಸಿದ ಘಟನೆ ಶನಿವಾರ ಪಂಜಾಬ್‌ನ ಫಿರೋಜ್‌ಪುರ ಜಿಲ್ಲೆಯ ಅಬೋಹಾರ್‌ನಲ್ಲಿ ನಡೆದಿದೆ.

(ಸಾಂದರ್ಭಿಕ ಚಿತ್ರ)

ಈ ಬಗ್ಗೆ ಅಧಿಕಾರಿಗಳು ನೀಡಿರುವ ಮಾಹಿತಿಯಂತೆ, ತೀವ್ರ ಎಚ್ಚರವಹಿಸಿದ್ದ ಬಿಎಸ್‍ಎಫ್‍ ಪಡೆಗಳು ಕಳ್ಳಸಾಗಾಣೆ ಯತ್ನವನ್ನು ವಿಫಲಗೊಳಿಸಿ, ಆರು ಮ್ಯಾಗಜೀನ್‍ಗಳೊಂದಿಗೆ ಮೂರು ಎಕೆ-47 ರೈಫಲ್‌ಗಳು, 91 ಜೀವಂತ ಗುಂಡುಗಳು ಒಳಗೊಂಡ ಎರಡು ಎಂ-16 ರೈಫಲ್‌ಗಳೊಂದಿಗೆ ನಾಲ್ಕು ಮ್ಯಾಗಜೀನ್‍ಗಳು, 57 ಮದ್ದುಗುಂಡುಗಳು, ನಾಲ್ಕು ಮ್ಯಾಗಜೀನ್‍ಗಳು ಮತ್ತು 20 ಸಜೀವ ಮದ್ದುಗುಂಡುಗಳ ಸಹಿತ ಎರಡು ಪಿಸ್ತೂಲ್‌ಗಳನ್ನು ವಶಪಡಿಸಿಕೊಂಡಿವೆ.

ಈ ಶಸ್ತ್ರಾಸ್ತ್ರ ಮತ್ತು ಮದ್ದುಗುಂಡುಗಳನ್ನು ಫಿರೋಜ್‌ಪುರದ ಅಬೋಹಾರ್ ಮೂಲಕ ಕಳುಹಿಸಲಾಗಿದೆ. ಅಬೋಹಾರ್ ಸೆಕ್ಟರ್‌ನಲ್ಲಿ ಬೀಡುಬಿಟ್ಟಿರುವ 124 ಬೆಟಾಲಿಯನ್‌ನ ಬಿಎಸ್‌ಎಫ್ ಯೋಧರು ದೇಶ ವಿರೋಧಿ ಕೃತ್ಯ ವಿಫಲಗೊಳಿಸಿದರು.

Comments are closed.