ರಾಷ್ಟ್ರೀಯ

ಇಂದು ನಡೆಯಲಿದೆ ಲಾಕ್‌ಡೌನ್‌ನಿಂದ ಮುಂದೂಡಲ್ಪಟ್ಟ ನೀಟ್ ಪರೀಕ್ಷೆ..!

Pinterest LinkedIn Tumblr

ಹೊಸದಿಲ್ಲಿ: ವೈದ್ಯಕೀಯ ಪ್ರವೇಶ ಪರೀಕ್ಷೆಯಾದ ನ್ಯಾಶನಲ್‌ ಎಲಿಜಿಬಿಟಿ ಕಂ ಎಂಟ್ರೆನ್ಸ್‌ ಟೆಸ್ಟ್‌ (ನೀಟ್‌) ಭಾನುವಾರ ದೇಶಾದ್ಯಂತ ನಿಗದಿತ ಪರೀಕ್ಷಾ ಕೇಂದ್ರಗಳಲ್ಲಿ ನಡೆಯಲಿದೆ. ಮೇ 3ಕ್ಕೆ ನಿಗದಿಯಾಗಿದ್ದ ಪರೀಕ್ಷೆಯನ್ನು ಕೋವಿಡ್ ಲಾಕ್‌ಡೌನ್‌ನಿಂದಾಗಿ ಜು. 26ಕ್ಕೆ ಮುಂದೂಡಿದ್ದು ಅಂತಿಮವಾಗಿ ಸೆ. 13ಕ್ಕೆ ಮುಂದೂಡಲಾಗಿತ್ತು.

ಕೋವಿಡ್ ಮುನ್ನೆಚ್ಚರಿಕೆಗಳನ್ನು ಅಳವಡಿಸಿಕೊಂಡು ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ (ಎನ್‌ಟಿಎ)ವು ಈ ಪರೀಕ್ಷೆಯನ್ನು ಆಯೋಜಿಸಿದ್ದು, ದೇಶಾದ್ಯಂತ 15.97 ಲಕ್ಷ ವಿದ್ಯಾರ್ಥಿಗಳು ಹಾಜರಾಗಲಿದ್ದಾರೆ.

ಸಾಮಾಜಿಕ ಅಂತರ ಕಾಪಾಡಿಕೊಳ್ಳುವ ದೃಷ್ಟಿಯಿಂದ ಪರೀಕ್ಷಾ ಕೇಂದ್ರಗಳನ್ನು ಹೆಚ್ಚಿಸಲಾಗಿದೆ. ಈ ಮೊದಲು 2,546 ಕೇಂದ್ರಗಳನ್ನು ನಿಗದಿಪಡಿಸಲಾಗಿತ್ತು. ಈ ಬಾರಿ ಅದನ್ನು 3,843ಕ್ಕೆ ಹೆಚ್ಚಿಸಲಾಗಿದೆ. ಪರೀಕ್ಷಾ ಕೋಣೆಯಲ್ಲಿ ಕುಳಿತುಕೊಳ್ಳುವ ಅಭ್ಯರ್ಥಿಗಳ ಸಂಖ್ಯೆಯನ್ನು 24ರಿಂದ 12ಕ್ಕೆ ಇಳಿಸಲಾಗಿದೆ.

Comments are closed.