ರಾಷ್ಟ್ರೀಯ

ಶೀಘ್ರವೇ 10 ರೂಪಾಯಿಗೆ ’ಮೋದಿ ಇಡ್ಲಿ’…?

Pinterest LinkedIn Tumblr


ಕೊಯಂಬತ್ತೂರ್​: ತಮಿಳುನಾಡಿನಲ್ಲಿ ಅಮ್ಮ ಉಣವುಗಂ (ಕ್ಯಾಂಟೀನ್)​ ಫೇಮಸ್​. ಕಡಿಮೆ ಬೆಲೆಗೆ ಹೆಚ್ಚು ಹಾಗೂ ಉತ್ತಮ ಗುಣಮಟ್ಟದ ಆಹಾರ ಸಿಗುತ್ತದೆ. ಜಯಲಲಿತಾ ಅವರು 2013ರಲ್ಲಿ ಇದನ್ನು ಪ್ರಾರಂಭಿಸುವ ಮೂಲಕ ಬಡವರಿಗೆ ಅನುಕೂಲ ಮಾಡಿಕೊಟ್ಟಿದ್ದರು.

ಹಾಗೇ ಇದೀಗ ಬಿಜೆಪಿ ಮುಖಂಡನೋರ್ವ ಸೇಲಂನಲ್ಲಿ ‘ಮೋದಿ ಇಡ್ಲಿ’ ಮಾರಾಟಕ್ಕೆ ಮುಂದಾಗಿದ್ದಾರೆ. ಇಡ್ಲಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಹೆಸರನ್ನು ಇಟ್ಟಿರುವ ಅವರು, 10 ರೂಪಾಯಿಗೆ 4 ಇಡ್ಲಿ ನೀಡುವುದಾಗಿ ತಿಳಿಸಿದ್ದಾರೆ.
ಇದು ತಮಿಳುನಾಡಿನ ಬಿಜೆಪಿ ಪ್ರಚಾರ ಘಟಕದ ಉಪಾಧ್ಯಕ್ಷ ಮಹೇಶ್​ ಅವರ ಯೋಜನೆಯಾಗಿದ್ದು, ಮೋದಿ ಇಡ್ಲಿ ಸಂಬಂಧಪಟ್ಟ ಪೋಸ್ಟರ್​​ಗಳು ಸೇಲಂನಲ್ಲಿ ಎಲ್ಲ ಕಡೆ ರಾರಾಜಿಸುತ್ತಿವೆ. ಇದನ್ನೂ ಓದಿ: ಯಶ್​-ರಾಧಿಕಾ ಮಗನ ಹೆಸರು ಕೊನೆಗೂ ಬಹಿರಂಗ …
ಪೋಸ್ಟರ್​ನಲ್ಲಿ ಎಡಗಡೆ ಪ್ರಧಾನಿ ಮೋದಿಯವರ ಫೋಟೋ ಇದೆ..ಬಲಗಡೆ ಮಹೇಶ್ ಚಿತ್ರವಿದೆ. ಹಾಗೇ ಇಡ್ಲಿ, ಸಾಂಬಾರ್​ ಚಿತ್ರಗಳನ್ನೂ ಹಾಕಲಾಗಿದ್ದು, 10 ರೂಪಾಯಿಗೆ ನಾಲ್ಕು ಇಡ್ಲಿಗಳು ಎಂದು ಮಧ್ಯದಲ್ಲಿ ಬರೆಯಲಾಗಿದೆ.
ಕಮಲದ ನಾಯಕ ಮಹೇಶ್​ ಅವರು ಶೀಘ್ರದಲ್ಲೇ ಸೇಲಂನಲ್ಲಿ ಮೋದಿ ಇಡ್ಲಿ ಮಾರಾಟ ಪ್ರಾರಂಭ ಮಾಡಲಿದ್ದಾರೆ. ಆಧುನಿಕ ಅಡುಗೆ ಸಾಮಗ್ರಿಗಳಿಂದ ಇದನ್ನು ತಯಾರಿಸಲಾಗುತ್ತದೆ. ರುಚಿಕರವಾಗಿ ಇರಲಿದ್ದು, ಆರೋಗ್ಯಕ್ಕೂ ಒಳ್ಳೆಯದು ಎಂದು ಪೋಸ್ಟರ್​​​ನಲ್ಲಿ ಉಲ್ಲೇಖಿಸಲಾಗಿದೆ.

ಪ್ರಾರಂಭದಲ್ಲಿ 22 ಇಡ್ಲಿ ಮಾರಾಟ ಅಂಗಡಿಗಳನ್ನು ತೆರೆಯಲಾಗುವುದು. ವ್ಯಾಪಾರ ಚೆನ್ನಾಗಿ ನಡೆದರೆ ಸಂಖ್ಯೆ ಹೆಚ್ಚಿಸಲಾಗುವುದು ಎಂದು ಬಿಜೆಪಿ ಕಾರ್ಯದರ್ಶಿ ಭರತ್​ ಆರ್​.ಬಾಲಸುಬ್ರಹ್ಮಣಿಯನ್​ ತಿಳಿಸಿದ್ದಾರೆ.

Comments are closed.