ನವದೆಹಲಿ: ಭಾರತದಲ್ಲಿ ಕೋವಿಡ್-19 ಸೋಂಕಿತ ಪ್ರಕರಣಗಳು ನಿನ್ನೆ ಶನಿವಾರದ ಹೊತ್ತಿಗೆ 30 ಲಕ್ಷ ಗಡಿ ದಾಟಿದೆ. ಗುಣಮುಖರಾಗುತ್ತಿರುವವರ ಸಂಖ್ಯೆ ಸಹ ಹೆಚ್ಚಾಗುತ್ತಿದ್ದು ಇದುವರೆಗೆ 22 ಲಕ್ಷದ 71 ಸಾವಿರ ಮಂದಿ ಗುಣಮುಖರಾಗಿದ್ದಾರೆ.
ನಿನ್ನೆ ಬೆಳಗ್ಗೆ 8 ಗಂಟೆ ಹೊತ್ತಿಗೆ ಕೇಂದ್ರ ಆರೋಗ್ಯ ಸಚಿವಾಲಯ ಬಿಡುಗಡೆ ಮಾಡಿರುವ ಅಂಕಿಅಂಶ ಪ್ರಕಾರ, ಒಂದೇ ದಿನ ದೇಶದಲ್ಲಿ 69 ಸಾವಿರದ 874 ಸೋಂಕಿತರು ಕಂಡುಬಂದಿದ್ದು ನಿನ್ನೆಯ ಹೊತ್ತಿಗೆ ಒಟ್ಟು ಸೋಂಕಿತರ ಸಂಖ್ಯೆ 29 ಲಕ್ಷದ 75 ಸಾವಿರದ 701 ಆಗಿತ್ತು. ಸಾವಿನ ಸಂಖ್ಯೆ 55 ಸಾವಿರದ 794 ಆಗಿತ್ತು. ಕಳೆದ 24 ಗಂಟೆಗಳಲ್ಲಿ 945 ಮಂದಿ ಮೃತಪಟ್ಟಿದ್ದಾರೆ.
ನಿನ್ನೆ ರಾತ್ರಿಯ ಹೊತ್ತಿಗೆ ಕೋವಿಡ್-10 ಸೋಂಕಿತರ ಸಂಖ್ಯೆ 30 ಲಕ್ಷದ 37 ಸಾವಿರದ 657 ಆಗಿದ್ದು ಸಾವಿನ ಸಂಖ್ಯೆ 56 ಸಾವಿರದ 762 ಆಗಿದೆ. ಮತ್ತು ಗುಣಮುಖ ಹೊಂದಿದವರ ಸಂಖ್ಯೆ ಇದುವರೆಗೆ 22 ಲಕ್ಷದ 71 ಸಾವಿರದ 054 ಆಗಿದೆ.ಇಂದು ಬೆಳಗಿನ ಹೊತ್ತಿಗೆ ಸೋಂಕಿತರ ಸಂಖ್ಯೆ 30 ಲಕ್ಷದ 44 ಸಾವಿರದ 941 ಆಗಿದ್ದು 7 ಲಕ್ಷದ 07 ಸಾವಿರದ 668 ಸಕ್ರಿಯ ಕೇಸುಗಳು, 22 ಲಕ್ಷದ 80 ಸಾವಿರದ 567 ಗುಣಮುಖ ಹೊಂದಿದ ಮತ್ತು 56 ಸಾವಿರದ 706 ಮಂದಿ ಮೃತಪಟ್ಟ ವರದಿಗಳಾಗಿವೆ.
ಅಮೆರಿಕ, ಬ್ರೆಜಿಲ್ ನಂತರ ಕೋವಿಡ್-19 ಸೋಂಕಿತರ ಸಂಖ್ಯೆಯಲ್ಲಿ ಭಾರತ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ.
Comments are closed.