ಕರಾವಳಿ

ಗಾಂಜಾ ಮಾರಾಟ: 1 ಕಿಲೋ ಗಾಂಜಾ ಸಹಿತ ಇಬ್ಬರನ್ನು ಬಂಧಿಸಿದ ಕುಂದಾಪುರ ಪೊಲೀಸರು

Pinterest LinkedIn Tumblr

ಕುಂದಾಪುರ: ಗಾಂಜಾ ಮಾರಾಟದ ಉದ್ದೇಶದಿಂದ ಒಂದು ಕೇ.ಜಿ.ಗೂ ಅಧಿಕ ಗಾಂಜಾ ಇಟ್ಟುಕೊಂಡಿದ್ದ ಇಬ್ಬರು ಆರೋಪಿಗಳನ್ನು ಕುಂದಾಪುರ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕುಂಭಾಶಿ ವಿನಾಯಕನಗರ ನಿವಾಸಿ ಗಣೇಶ್ (20), ಉಪ್ಪಿನಕುದ್ರು ದುಗ್ಗಾನಬೆಟ್ಟು ನಿವಾಸಿ ಗೌತಮ್ ಯಾನೆ ಬುದ್ದ(25) ಬಂಧಿತ ಆರೋಪಿಗಳು.

ಕುಂದಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ವಕ್ವಾಡಿ ಗ್ರಾಮದ ಅಶೋಕ ನಗರ ಎಂಬಲ್ಲಿ ಕೊಟೇಶ್ವರ ಮೇಪು ಕಡೆಗೆ ಹೋಗುವ ಮಣ್ಣು ರಸ್ತೆಯ ಪೂರ್ವಬದಿಯ ಖಾಲಿ ಜಾಗದಲ್ಲಿ ಗಣೇಶ್ ಹಾಗೂ ಗೌತಮ್ ಬೈಕ್ ನಿಲ್ಲಿಸಿಕೊಂಡು ಗಾಂಜಾ ಮಾರಾಟ ಮಾಡುತ್ತಿದ್ದ ಬಗ್ಗೆ ಕುಂದಾಪುರ ಪಿಎಸ್ಐ ಹರೀಶ್ ಆರ್. ಅವರಿಗೆ ಬಂದ ಖಚಿತ ಮಾಹಿತಿಯಂತೆ ಸಿಬ್ಬಂದಿಗಳೊಂದಿಗೆ ಸ್ಥಳಕ್ಕೆ ತೆರಳಿದ್ದು ಇಬ್ಬರು ಆರೋಪಿಗಳು ಸಮವಸ್ತ್ರದಲ್ಲಿದ್ದ ಪೊಲೀಸರನ್ನು ನೋಡಿ ಓಡಲು ಪ್ರಯತ್ನಿಸಿದ್ದು ಸಿಬ್ಬಂದಿಗಳ ಸಹಾಯದಿಂದ ಸುತ್ತವರಿದು ಅವರನ್ನು ಹಿಡಿದು ವಿಚಾರಣೆ ಮಾಡಿದಾಗ ಗಣೇಶನ ಕೈಯಲ್ಲಿರುವ ಪ್ಲಾಸ್ಟಿಕ್ ತೊಟ್ಟೆ ಸಿಕ್ಕಿದ್ದು ಅದರಲ್ಲಿ ಏನಿದೆ ಎಂಬ ಪೊಲೀಸರ ಪ್ರಶ್ನೆಗೆ ತೊದಲುತ್ತಾ ಉತ್ತರಿಸಿದ ಆತ ಮಾತ್ರೆ ಮತ್ತು ಔಷಧ ಇರುವುದಾಗಿ ತಿಳಿಸಿದ್ದು ಅನುಮಾನಗೊಂದ ಪೊಲೀಸರು ಕೂಲಂಕುಶವಾಗಿ ಪ್ರಶ್ನಿಸಿದ್ದು ಅದರಲ್ಲಿ ಗಾಂಜಾ ಇರುವುದಾಗಿ ತಿಳಿಸಿದ್ದಾನೆ. ಗಾಂಜಾವನ್ನು ಹೊಸನಗರ ಕಡೆಯ ಒಬ್ಬ ವ್ಯಕ್ತಿಯಿಂದ ಪಡೆದು ಇಬ್ಬರು ಈ ಗಾಂಜಾವನ್ನು ಅವುಗಳನ್ನು ವಕ್ವಾಡಿ ಗ್ರಾಮದ ಪರಿಸರದಲ್ಲಿ ಮಾರಾಟ ಮಾಡಿ ಹಣ ಸಂಪಾದನೆ ಮಾಡುವುದಾಗಿ ತನಿಖೆ ವೇಳೆ ತಪ್ಪೊಪ್ಪಿಕೊಂಡಿದ್ದಾರೆ.

ಆರೋಪಿಗಳಿಂದ 33 ಸಾವಿರ ಮೌಲ್ಯದ 1 ಕೆ.ಜಿ 105 ಗ್ರಾಮ್ ತೂಕದ ಗಾಂಜಾ ಹಾಗೂ ಇಬ್ಬರಿಂದಲೂ ನಗದು ಹಾಗೂ ಮೊಬೈಲ್ ವಶಕ್ಕೆ ಪಡೆಯಲಾಗಿದೆ. ಕೃತ್ಯಕ್ಕೆ ಉಪಯೋಗಿಸಿದ RX 135 ಬೈಕ್ ಕೂಡ ವಶಪಡಿಸಿಕೊಳ್ಳಲಾಗಿದೆ.

ಕಾರ್ಯಾಚರಣೆಯಲ್ಲಿ ಕುಂದಾಪುರ ಪೊಲೀಸ್ ಠಾಣೆ ಎಎಸ್ಐ ಆನಂದ ಬಿ ಹಾಗೂ ಸುಧಾಕರ್ ಸಿಬ್ಬಂದಿಗಳಾದ ಮಂಜುನಾಥ್, ಸಂತೋಷ್ ಕುಮಾರ್, ಚಂದ್ರಶೇಖರ ಶೆಟ್ಟಿ, ಅವಿನಾಶ್, ಹರೀಶ್, ರಾಘವೇಂದ್ರ, ವಿಜಯ್, ಪ್ರಸನ್ನ, ವೀರಪ್ಪ, ರವಿ, ಗೋಕುಲ, ಶಾಂತಾರಾಮ, ಸಚಿನ್ ಶೆಟ್ಟಿ, ರಾಘವೇಂದ್ರ ಮೊಗೇರ, ರಾಮ ಪೂಜಾರಿ, ಶಂಕರ್, ಅರುಣ್ ಕುಮಾರ್ ಹಾಗೂ ಜಿಪು ಚಾಲಕ ಸಂತೋಷ್ ಶೆಟ್ಟಿ ಇದ್ದರು.

Comments are closed.