ರಾಷ್ಟ್ರೀಯ

ರನ್‌ವೇಯಿಂದ ಜಾರಿದ ದುಬೈ-ಕೋಳಿಕ್ಕೋಡ್ ಏರ್ ಇಂಡಿಯಾ ವಿಮಾನ: ಸಾವಿನ ಸಂಖ್ಯೆ 15ಕ್ಕೆ ಏರಿಕೆ

Pinterest LinkedIn Tumblr

Kozhikode Flight Crash: ದುಬೈನಿಂದ 180 ಮಂದಿ ಪ್ರಯಾಣಿಕರನ್ನು ಹೊತ್ತು ಬಂದ ಇಂಡಿಯನ್ ಏರ್​ಲೈನ್​ ಇಂದು ಸಂಜೆ ಕೇರಳದ ಕೋಯಿಕ್ಕೋಡ್​ನ ಕರಿಪುರ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗುವಾಗ ರನ್​ವೇಯಿಂದ ಜಾರಿದೆ. ಈ ಅವಘಡದಲ್ಲಿ ಓರ್ವ ಪೈಲೆಟ್ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಏರ್​ ಇಂಡಿಯಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ಕೇರಳದ ಕೋಯಿಕ್ಕೋಡ್ ವಿಮಾನ ನಿಲ್ದಾಣದ ರನ್​ವೇನಲ್ಲಿ ಲ್ಯಾಂಡಿಂಗ್​ ವೇಳೆ ಏರ್​ ಇಂಡಿಯಾ ವಿಮಾನ ಅಪಘಾತಕ್ಕೆ ಈಡಾಗಿದೆ. ಈ ವಿಮಾನದಲ್ಲಿ 180 ಮಂದಿ ಪ್ರಯಾಣಿಕರು ಇದ್ದರು. ಅವಘಡದಲ್ಲಿ ಓರ್ವ ಪೈಲಟ್​ ಸೇರಿದಂತೆ 15 ಪ್ರಯಾಣಿಕರು ಮೃತಪಟ್ಟಿದ್ದಾರೆ.

ದುಬೈ- ಕೊಜಿಕೋಡ್​ ವಿಮಾನ X1344 ಬೋಯಿಂಗ್ 737 ವಿಮಾನದಲ್ಲಿ 174 ಮಂದಿ ಪ್ರಯಾಣಿಕರು ಇದ್ದರು. ಸಂಜೆ 7;41ರಲ್ಲಿ ಲ್ಯಾಂಡ್​ ಆಗಿದ್ದು, ರನ್​ವೇನಲ್ಲಿ ಅಪಘಾತಕ್ಕೆ ಈಡಾಗಿದೆ ಎಂದು ವಿಮಾನಯಾನ ಸಂಸ್ಥೆಯ ಮೂಲಗಳು ತಿಳಿಸಿವೆ. ಸ್ಥಳದಲ್ಲಿ 24 ಆ್ಯಂಬುಲೆನ್ಸ್​ಗಳು ಹಾಗೂ ಅಗ್ನಿ ಶಾಮಕ ವಾಹನಗಳು ಇದ್ದು, ರಕ್ಷಣಾ ಕಾರ್ಯಾಚರಣೆ ಆರಂಭಿಸಲಾಗಿದೆ.

ಕೇರಳ ಪೊಲೀಸ್ ಅಧಿಕಾರಿಗಳ ಪ್ರಕಾರ, ಕನಿಷ್ಠ 35 ಮಂದಿ ಗಾಯಗೊಂಡಿದ್ದು, ಅವರನ್ನು ನಗರದ ವಿವಿಧ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ. ಭಾರತದ ಉನ್ನತ ವಿಮಾನಯಾನ ಸಮಿತಿಯಾದ ಡಿಜಿಸಿಎ ಘಟನೆ ಸಂಬಂಧ ಉನ್ನತ ಮಟ್ಟದ ತನಿಖೆಗೆ ಆದೇಶಿಸಿದೆ.ದುಬೈನಿಂದ 180 ಮಂದಿ ಪ್ರಯಾಣಿಕರನ್ನು ಹೊತ್ತು ಬಂದ ಇಂಡಿಯನ್ ಏರ್​ಲೈನ್​ ಇಂದು ಸಂಜೆ ಕೇರಳದ ಕೋಯಿಕ್ಕೋಡ್​ನ ಕರಿಪುರ್​ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್​ ಆಗುವಾಗ ರನ್​ವೇಯಿಂದ ಜಾರಿದೆ. ಈ ಅವಘಡದಲ್ಲಿ ಓರ್ವ ಪೈಲೆಟ್ ಸೇರಿ ಮೂವರು ಮೃತಪಟ್ಟಿದ್ದಾರೆ ಎಂದು ಏರ್​ ಇಂಡಿಯಾ ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

Comments are closed.