ರಾಷ್ಟ್ರೀಯ

ರಾಮ ಮಂದಿರದ ಭೂಮಿ ಪೂಜೆಗೆ 2000 ಪುಣ್ಯ ಸ್ಥಳಗಳ ಮಣ್ಣು, 100ಕ್ಕೂ ಹೆಚ್ಚು ನದಿಗಳ ನೀರು ಬಳಕೆ!

Pinterest LinkedIn Tumblr

ಅಯೋಧ್ಯೆ: ಹಿಂದೂ ಸಮುದಾಯದ ಜನರ ದಶಕಗಳ ಆಸೆ, ಕನಸು ಇಂದು ಈಡೇರಿದೆ. ಪ್ರಧಾನಿ ನರೇಂದ್ರ ಮೋದಿ ಭವ್ಯ ರಾಮ ಮಂದಿರ ನಿರ್ಮಾಣ ಹಿನ್ನೆಲೆ ಭೂಮಿ ಪೂಜೆಯನ್ನ ಮಾಡಿದ್ದಾರೆ. ಇನ್ನು ಈ ಭೂಮಿ ಪೂಜೆ ಹಾಗೂ ಆದಕ್ಕೂ ಮುನ್ನ ನಡೆದ ಧಾರ್ಮಿಕ ಆಚರಣೆಗಳಿಗಾಗಿ 2000 ಕ್ಕೂ ಹೆಚ್ಚು ತೀರ್ಥಯಾತ್ರಾ ಸ್ಥಳಗಳು ಅಥವಾ ಪುಣ್ಯ ಸ್ಥಳಗಳ ಮಣ್ಣನ್ನ ಬಳಸಲಾಗಿದೆ. ಅಲ್ಲದೇ ದೇಶದ 100 ಕ್ಕೂ ಹೆಚ್ಚು ನದಿಗಳಿಂದ ಪುಣ್ಯ ಜಲವನ್ನ ಕೂಡ ಆಚರಣೆಗೆ ಉಪಯೋಗಿಸಲಾಗಿದೆ.

ಅನೇಕ ಪುಣ್ಯ ಸ್ಥಳದಿಂದ ಮಣ್ಣನ್ನ ಕಳುಹಿಸಿಕೊಡಲಾಗಿದೆ, ಇನ್ನು ಕೆಲವರು ರಾಮನ ಪುಣ್ಯ ಜನ್ಮ ಭೂಮಿಗೆ ತೆಗೆದುಕೊಂಡು ಹೋಗಿದ್ದಾರೆ. ಅಲ್ಲದೇ ನದಿಯ ನೀರು ಕೂಡ ಅಯೋಧ್ಯೆಗೆ ರವಾನೆಯಾಗಿದೆ. ಧಾರ್ಮಿಕ ವಿಧಿ ವಿಧಾನ ಆಚರಣೆ ವೇಳೆ ಇವುಗಳನ್ನ ಬಳಕೆ ಮಾಡಲಾಗಿದೆ.

ವಿಘ್ನ ನಿವಾರಣೆಗೆ ಹೆಸರಾದ ‘ಅಭಿಜಿನ್‌’ ಮುಹೂರ್ತದಲ್ಲಿ ಭೂಮಿ ಪೂಜೆ ನಡೆದಿದೆ. ಪ್ರಧಾನಿ ಮೋದಿ ಭೂಮಿ ಪೂಜೆ ನೆರೆವೇರಿಸಿದ್ದಾರೆ. ದೇಶದ ಉದ್ದಗಲದಿಂದ ಭಕ್ತರು ಶ್ರೀರಾಮನ ಮಂದಿರಕ್ಕೆ ಇಟ್ಟಿಗೆ, ಹಣ, ಚಿನ್ನ, ಬೆಳ್ಳಿಯನ್ನ ದೇಣಿಗೆಯಾಗಿ ನೀಡುತ್ತಿದ್ದಾರೆ. ಮುಂದಿನ ಮೂರು ವರ್ಷದೊಳಗೆ ಭವ್ಯ ರಾಮಚಂದ್ರನ ಮಂದಿರ ನಿರ್ಮಾಣವಾಗಲಿದೆ. ಇದು ದಶಕಗಳ ಕನಸು ಈಡೇರಿದ ಹಾಗೆ ಆಗಲಿದೆ.

 

Comments are closed.