ರಾಷ್ಟ್ರೀಯ

ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾದ ಅಯೋಧ್ಯೆ

Pinterest LinkedIn Tumblr

ಅಯೋಧ್ಯೆ (ಜು.5): ಹಲವು ವರ್ಷಗಳ ಕಾಲ ವಿವಾವದ ಸುಳಿಯಲ್ಲಿ ಸಿಲುಕಿದ್ದ ರಾಮ ಜನ್ಮಭೂಮಿಯಲ್ಲಿ ಮಂದಿರ ನಿರ್ಮಾಣ ಮಾಡಲು ಕೊನೆಗೂ ಸಮಯ ಕೂಡಿ ಬಂದಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಅಯೋಧ್ಯೆಗೆ ತೆರಳಿ, ರಾಮ ಮಂದಿರ ನಿರ್ಮಾಣ ಮಾಡಲು ಶಿಲಾನ್ಯಸ ನೆರವೇರಿಸಿದ್ದಾರೆ. ಅನೇಕ ಸಾಧುಸಂತರು, ಗಣ್ಯರು ಕ್ಷಣಕ್ಕೆ ಸಾಕ್ಷಿಯಾದರು

ಬೆಳಗ್ಗೆ 10:30ಕ್ಕೆ ಲಖನೌ ವಿಮಾನ ನಿಲ್ದಾಣಕ್ಕೆ ಮೋದಿ ಆಗಮಿಸಿದರು. ಮೋದಿಯನ್ನು ಸ್ವಾಗತಿಸಲು ಆಗಮಿಸಿದ್ದ ಹಿರಿಯ ನಾಯಕರು ಜೈ ಶ್ರೀರಾಮ್​ ಎನ್ನುವ ಘೋಷಣೆ ಕೂಗಿದರು. ನಂತರ ಹೆಲಿಕಾಪ್ಟರ್​ ಮೂಲಕ ಪ್ರಧಾನಿ ಮೋದಿ ಅಯೋಧ್ಯೆಯ ಸಾಕೇತ್​ ಕಾಲನಿಗೆ ತೆರಳಿದರು. ಅಯೋಧ್ಯೆಗೆ ಕಾಲಿಡುತ್ತಿದ್ದಂತೆ ಜೈ ಶ್ರೀರಾಮ್​ ಎನ್ನುವ ಘೋಷಣೆಗಳು ಮೊಳಗಿದವು.

ಮೊದಲಿಗೆ ಹನುಮಾನ್ ಗುಡಿಗೆ ಮೋದಿ ಭೇಟಿ ನೀಡಿದರು. ನಂತರ ಹನುಮಾನ್ ಗುಡಿಯಲ್ಲಿ ಪೂಜೆ ಸಲ್ಲಿಸಿದ ಬಳಿಕ ಶಿಲಾನ್ಯಾಸ ನಡೆಯುವ ಜಾಗದತ್ತ ಮೋದಿ ಪ್ರಯಾಣ ಬೆಳೆಸಿದರು. 12:30 ಭೂಮಿ ಪೂಜೆ ಕಾರ್ಯಕ್ರಮ ಆರಂಭಗೊಂಡಿತು. 12:40ಕ್ಕೆ ಮೋದಿ ಅಡಿಗಲ್ಲು ಹಾಕಿದರು.

 • 10.30ಕ್ಕೆ ಲಖನೌ ವಿಮಾನ ನಿಲ್ದಾಣ ತಲುಪಿದ ಮೋದಿ
 • 11.30ಕ್ಕೆ ಅಯೋಧ್ಯೆಯ ಸಾಕೇತ್ ಕಾಲನಿಗೆ ಆಗಮನ
 • 11.40ಕ್ಕೆ ಹನುಮಾನ್ಗಡಿಯಲ್ಲಿ ಪ್ರಾರ್ಥನೆ
 • ಹನುಮಾನ್ ಪೂಜೆ ಬಳಿಕ ಸರಯೂ ನದಿಗೆ ಪೂಜೆ
 • ಮಧ್ಯಾಹ್ನ 12 ಗಂಟೆಗೆ ರಾಮಜನ್ಮಭೂಮಿಗೆ ಆಗಮನ
 • 12.30ಕ್ಕೆ ಭೂಮಿಪೂಜೆ ಕಾರ್ಯಕ್ರಮದಲ್ಲಿ ಭಾಗಿ
 • 12.40ಕ್ಕೆ ರಾಮಮಂದಿರಕ್ಕೆ ಅಡಿಗಲ್ಲು ಹಾಕಿದ ಮೋದಿ
 • ಶಿಲಾನ್ಯಾಸದ ಬಳಿಕ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿ
 • 1.10ಕ್ಕೆ ರಾಮಜನ್ಮಭೂಮಿ ಸಂಕೀರ್ಣ ವೀಕ್ಷಿಸಲಿರುವ ಮೋದಿ
 • ಶ್ರೀರಾಮ ಮಂದಿರ ತೀರ್ಥ ಕ್ಷೇತ್ರಟ್ರಸ್ಟ್ ಅಧ್ಯಕ್ಷ ನೃತ್ಯ ಗೋಪಾಲದಾಸ್ ಮತ್ತಿತರ ಜೊತೆ ಸಮಾಲೋಚನೆ
 • ಮಧ್ಯಾಹ್ನ 02:05ಕ್ಕೆ ಅಯೋಧ್ಯೆಯಿಂದ ಹೆಲಿಕಾಪ್ಟರ್ ಮೂಲಕ ಲಕ್ನೋಗೆ ಪ್ರಯಾಣ

ವಿಶೇಷ ಎಂದರೆ, ರಾಮ ಮಂದರಿ ನಿರ್ಮಾಣಕ್ಕಾಗಿ ಹೋರಾಡಿದವರಲ್ಲಿ ಪ್ರಮುಖರಾದ ಎಲ್​.ಕೆ ಅಡ್ವಾಣಿ ಆನ್​ಲೈನ್​ನಲ್ಲೇ ರಾಮಮಂದಿರದ ಅಡಿಗಲ್ಲು ಕಾರ್ಯಕ್ರಮ ಕಣ್ತುಂಬಿಕೊಂಡರು. ಕೊರೋನಾ ವೈರಸ್​ ಹೆಚ್ಚುತ್ತಿದೆ. ಈ ಸಂದರ್ಭದಲ್ಲಿ ಹೊರ ಬರುವುದು ಸೂಕ್ತವಲ್ಲ ಎನ್ನುವ ಕಾರಣಕ್ಕೆ ಎಲ್.ಕೆ. ಅಡ್ವಾಣಿ, ಎಂ.ಎಂ. ಜೋಶಿ ವಿಡಿಯೋ ಕಾನ್ಫರೆನ್ಸ್​ ಮೂಲಕ ಕಾರ್ಯಕ್ರಮ ವೀಕ್ಷಿಸಿದರು

 

Comments are closed.