ರಾಷ್ಟ್ರೀಯ

ಹನುಮಾನ್‌ಗರಿ ದೇಗುಲದಲ್ಲಿ ರಾಮ ಭಕ್ತ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿದ ಮೋದಿ

Pinterest LinkedIn Tumblr

ಅಯೋಧ್ಯೆ: ಅಯೋಧ್ಯೆ ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲು ಪ್ರಧಾನಿ ಮೋದಿ ಇಂದು(ಬುಧವಾರ) ಅಯೋಧ್ಯೆ ತಲುಪಿದ್ದಾರೆ.

ಹೆಲಿಪ್ಯಾಡ್‌ನಲ್ಲಿ ಇಳಿದು ನೇರವಾಗಿ ಹನುಮಾನ್‌ಗರಿ ದೇಗುಲಕ್ಕೆ ಬಂದು ತಲುಪಿರುವ ಪ್ರಧಾನಿ ಮೋದಿ, ಇಲ್ಲಿ ರಾಮ ಭಕ್ತ ಹನುಮಂತನಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ.

ಈ ವೇಳೆ ರಾಮ ಭಕ್ತ ಹನುಮಂತನಿಗೆ ಬೆಳ್ಳಿ ಮುಕುಟವನ್ನು ಅರ್ಪಿಸಿದ ಪ್ರಧಾನಿ ಮೋದಿ, ವಿಶೇಷ ಪೂಜೆ ನೆರವೇರಿಸಿ ಆಶೀರ್ವಾದ ಪಡೆದರು.

ಇಲ್ಲಿಂದ ನೇರವಾಗಿ ರಾಮಲಲ್ಲಾ ದೇಗುಲಕ್ಕೆ ತೆರಳಲಿರುವ ಪ್ರಧಾನಿ ಮೋದಿ, ರಾಮ ಲಲ್ಲಾನಿಗೆ ವಿಶೇಷ ಪೂಜೆ ಸಲ್ಲಿಸಿ ಅಲ್ಲಿಂದ ನೇರವಾಗಿ ರಾಮ ಜನ್ಮಭೂಮಿಗೆ ತೆರಳಲಿದ್ದಾರೆ.

ಪ್ರಧಾನಿ ಮೋದಿ ಅವರ ಅಯೋಧ್ಯೆ ಆಗಮನದಿಂದ ಪುಳಕಿತರಾಗಿರುವ ಅಯೋಧ್ಯೆ ಜನತೆ, ಮೋದಿ ಸಾಗುವ ದಾರಿಯಲ್ಲಿ ಜೈ ಶ್ರೀರಾಮ್ ಘೋಷಣೆ ಕೂಗುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.

Comments are closed.