ರಾಷ್ಟ್ರೀಯ

ಬಾಲ ರಾಮನಿಗೆ ಸಾಷ್ಟಾಂಗ ನಮಸ್ಕಾರ ಹಾಕಿದ ಮೋದಿ! ಪ್ರಧಾನಿ ವಿಶೇಷ ಪೂಜೆ…

Pinterest LinkedIn Tumblr

ಅಯೋಧ್ಯೆ: ರಾಮ ಜನ್ಮಭೂಮಿಯಲ್ಲಿ ಭವ್ಯ ರಾಮ ಮಂದಿರಕ್ಕೆ ಭೂಮಿ ಪೂಜೆ ನೆರವೇರಿಸಲು ಅಯೀಧ್ಯೆಗೆ ಆಗಮಿಸಿರುವ ಪ್ರಧಾನಿ ಮೋದಿ, ರಾಮಲಲ್ಲಾ ದೇಗುಲದಲ್ಲಿ ವಿಶೇಷ ಪೂಜೆ ಸಲ್ಲಿಸಿದರು.

ಬಾಲ ರಾಮನಿಗೆ ಸಾಷ್ಟಾಂಗ ನಮಸ್ಕಾರ ಹಾಕುವ ಮೂಲಕ ಗಮನ ಸೆಳೆದ ಪ್ರಧಾನಿ, ವಿಶೇಷ ಪೂಜೆ ಮಾಡುವ ಮೂಲಕ ಆಶೀರ್ವಾದ ಪಡೆದರು.

ಇದೇ ವೇಳೆ ರಾಮಲಲ್ಲಾ ದೇಗುಲ ಆವರಣದಲ್ಲಿ ಪಾರಿಜಾತ ಸಸಿ ನೆಟ್ಟ ಪ್ರಧಾನಿಗೆ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಸಾಥ್ ನೀಡಿದರು.

ರಾಮಲಲ್ಲಾ ದೇಗುಲದಿಂದ ನೇರವಾಗಿ ರಾಮ ಜನ್ಮಭೂಮಿ ಕ್ಷೇತ್ರದತ್ತ ಪ್ರಧಾನಿ ಮೋದಿ ಪ್ರಯಾಣ ಬೆಳೆಸಿದರು. ಈಗಾಗಲೇ ರಾಮ ಜನ್ಮಭೂಮಿ ತೀರ್ಥಕ್ಷೇತ್ರ ಪ್ರವೇಶಿಸಿರುವ ಪ್ರಧಾನಿ ಮೋದಿ, ಕೆಲವೇ ಕ್ಷಣಗಳಲ್ಲಿ ಭೂಮಿ ಪೂಜೆ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

Comments are closed.