ರಾಷ್ಟ್ರೀಯ

ತಿರುಪತಿ ದೇವಸ್ಥಾನದ ಮಾಜಿ ಪ್ರಧಾನ ಅರ್ಚಕ ಕೊರೋನಾಗೆ ಬಲಿ

Pinterest LinkedIn Tumblr

ತಿರುಪತಿ: ತಿರುಪತಿ, ತಿರುಮಲದ ಪ್ರಸಿದ್ದ ವೆಂಕಟೇಶ್ವರ ದೇವಾಲಯದ ತಿರುಮಲ ತಿರುಪತಿ ದೇವಸ್ತಾನಂ (ಟಿಟಿಡಿ)ಯ ಮಾಜಿ ಪ್ರಧಾನ ಅರ್ಚಕರೊಬ್ಬರು ಸೋಮವಾರ ಕೊರೋನಾವೈರಸ್‌ನಿಂದ ಮೃತಪಟ್ಟಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ತಿರುಪತಿಯಲ್ಲಿನ ಕೋವಿಡ್ ಕೇಂದ್ರವೊಂದರಲ್ಲಿ ಟಿಟಿಡಿಯ ಮಾಜಿ ಪ್ರಧಾನ ಅರ್ಚಕ ಶ್ರೀನಿವಾಸಮೂರ್ತಿ ದೀಕ್ಷಿತಲು ಇಂದು ಮುಂಜಾನೆ ವೈರಸ್‌ಗೆ ಬಲಿಯಾಗಿದ್ದಾರೆ ಎಂದು ಅಧಿಕಾರಿ ಪಿಟಿಐಗೆ ತಿಳಿಸಿದ್ದಾರೆ.

ಮೃತ ದೀಕ್ಷಿತಲು ಅವರಿಗೆ 73 ವರ್ಷ ವಯಸ್ಸಾಗಿತ್ತು. ಅವರು ಮೂರು ದಶಕಗಳಿಗಿಂತ ಹೆಚ್ಚು ಕಾಲ ಟಿಟಿಡಿಯಲ್ಲಿ ಸೇವೆ ಸಲ್ಲಿಸಿದ್ದರು.

Comments are closed.