ರಾಷ್ಟ್ರೀಯ

ಜು.31ರವರೆಗೆ 6 ನಗರಗಳಿಂದ ಕೊಲ್ಕತ್ತಾಗೆ ವಿಮಾನ ಹಾರಾಟ ನಿಷೇಧ

Pinterest LinkedIn Tumblr


ನವದೆಹಲಿ(ಜು.17): ದಿನೇ ದಿನೇ ಕೊರೋನಾ ಪ್ರಕರಣಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ, ದೆಹಲಿ, ಮುಂಬೈ, ಪುಣೆ, ಚೆನ್ನೈ, ನಾಗ್ಪುರ ಮತ್ತು ಅಹಮದಾಬಾದ್​​ ನಗರಗಳಿಂದ ಕೊಲ್ಕತ್ತಾ ವಿಮಾನ ನಿಲ್ದಾಣಕ್ಕೆ ಬರುವ ವಿಮಾನಗಳಿಗೆ ಜುಲೈ 31ರವರೆಗೆ ತಾತ್ಕಾಲಿಕ ನಿಷೇಧವನ್ನು ವಿಸ್ತರಿಸಲಾಗಿದೆ.

ಕೊಲ್ಕತ್ತಾ ವಿಮಾನ ನಿಲ್ದಾಣದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಷಯವನ್ನು ತಿಳಿಸಲಾಗಿದೆ. ಕೋರಿಕೆಯ ಮೇರೆಗೆ ವಿಮಾನ ಹಾರಾಟವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಇತ್ತೀಚಿನ ದಿನಗಳಲ್ಲಿ ಕೊರೋನಾ ಹರಡುವಿಕೆ ಹೆಚ್ಚಾಗುತ್ತಿದೆ. ಹೀಗಾಗಿ ಅತೀ ಹೆಚ್ಚಿನ ಪ್ರಮಾಣದಲ್ಲಿ ಕೊರೋನಾ ಹರಡುತ್ತಿರುವ ನಗರಗಳಿಂದ ವಿಮಾನಯಾನ ಹಾರಾಟವನ್ನು ನಿಷೇಧಿಸಲಾಗಿದೆ.

ಮೊದಲು ಪಶ್ಚಿಮ ಬಂಗಾಳ ಸರ್ಕಾರ ಜುಲೈ 4ರಂದು ವಿಮಾನಯಾನ ಹಾರಾಟ ನಿಷೇಧದ ಬಗ್ಗೆ ಪ್ರಕಟಣೆ ಹೊರಡಿಸಿತ್ತು. ಈ ಪ್ರಕಾರ ಜುಲೈ 6ರಿಂದ ಜುಲೈ 19ರವರೆಗೆ ವಿಮಾನಯಾನ ಹಾರಾಟ ನಿಷೇಧವಾಗಿತ್ತು. ಈಗಾಗಲೇ ದೆಹಲಿ, ಮುಂಬೈ, ಪುಣೆ, ಚೆನ್ನೈ, ನಾಗ್ಪುರ ಮತ್ತು ಅಹಮದಾಬಾದ್​ ನಗರಗಳಲ್ಲಿ ಹೆಚ್ಚಿನ ಕೊರೋನಾ ಪ್ರಕರಣಗಳಿವೆ. ಹೀಗಾಗಿ ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಇತ್ತೀಚೆಗೆ ಈ ನಗರಗಳಿಂದ ವಿಮಾನ ಹಾರಾಟವನ್ನು ಸ್ಥಗಿತಗೊಳಿಸುವಂತೆ ಕೇಂದ್ರಕ್ಕೆ ಪತ್ರ ಬರೆದಿದ್ದರು.

ಪಶ್ಚಿಮ ಬಂಗಾಳ ಸರ್ಕಾರವು ಮಂಗಳವಾರ ಕಂಟೈನ್ಮೆಂಟ್​ ಜೋನ್​ಗಳಲ್ಲಿನ ಲಾಕ್​ಡೌನ್​ನ್ನು ಜುಲೈ 19ರವರೆಗೆ ವಿಸ್ತರಿಸಿ ಆದೇಶ ಹೊರಡಿಸಿತ್ತು. ಈ ಕಂಟೈನ್ಮೆಂಟ್ ಜೋನ್​ಗಳು ಕೊಲ್ಕತ್ತಾ ನಗರದ ಸಮೀಪದಲ್ಲೇ ಇವೆ. ಜಲ್ಪೈಗುರಿ, ಮಾಲ್ದಾ, ಕೂಚ್​ ಬೆಹರ್, ರೈಗಂಜ್ ಮತ್ತು ಸಿಲಿಗುರಿ-ಈ ಪ್ರದೇಶಗಳನ್ನು ಕಂಟೈನ್ಮೆಂಟ್​ ಜೋನ್​ಗಳೆಂದು ಘೋಷಣೆ ಮಾಡಲಾಗಿದೆ.

Comments are closed.