ರಾಷ್ಟ್ರೀಯ

ಸದ್ಯ ಗೋವಾ ಪ್ರವಾಸದ ಯೋಚನೆ ಮಾಡಬೇಡಿ!

Pinterest LinkedIn Tumblr


ಪಣಜಿ: ನೀವು ಈ ವಾರಾಂತ್ಯದಲ್ಲಿ ಗೋವಾಕ್ಕೆ (Goa) ಹೋಗಿ ರಜಾದಿನಗಳನ್ನು ಆನಂದಿಸುವ ಬಗ್ಗೆ ಯೋಚಿಸುತ್ತಿದ್ದರೆ ಸ್ವಲ್ಪ ತಡೆಯಿರಿ. ಗೋವಾದಲ್ಲಿ ಹೆಚ್ಚುತ್ತಿರುವ ಕೊರೊನಾವೈರಸ್ ಪ್ರಕರಣಗಳನ್ನು ಗಮನದಲ್ಲಿಟ್ಟುಕೊಂಡು ತಕ್ಷಣದಿಂದ ಜಾರಿಗೆ ಬರುವಂತೆ ಲಾಕ್‌ಡೌನ್‌ (Lockdown) ಮಾಡಲು ರಾಜ್ಯ ಸರ್ಕಾರ ನಿರ್ಧರಿಸಿದೆ. ರಾಜ್ಯದ ಎಲ್ಲ ಸ್ಥಳಗಳಲ್ಲಿ ಪೊಲೀಸ್ ಪಡೆ ಹೆಚ್ಚಿಸಲಾಗಿದೆ.

ಮೂರು ದಿನಗಳವರೆಗೆ ಲಾಕ್‌ಡೌನ್ :
ಗೋವಾದಲ್ಲಿ ವಾರಾಂತ್ಯದ ವಿಪರೀತ ಮತ್ತು ಹೆಚ್ಚುತ್ತಿರುವ ಕರೋನಾವೈರಸ್ ಸೋಂಕಿನ ದೃಷ್ಟಿಯಿಂದ ರಾಜ್ಯ ಸರ್ಕಾರ ಲಾಕ್ ಡೌನ್ ಘೋಷಿಸಿದೆ. ಗೋವಾದಲ್ಲಿ ಕೋವಿಡ್-19 (COVID-19) ಹರಡುವುದನ್ನು ತಡೆಗಟ್ಟಲು ಜಾರಿಗೆ ತಂದ ಮೂರು ದಿನಗಳ ಲಾಕ್‌ಡೌನ್‌ನ ಮೊದಲ ದಿನ ರಸ್ತೆಗಳಲ್ಲಿ ಜನರ ಅನಗತ್ಯ ಸಂಚಾರವನ್ನು ತಡೆಯಲು ಹೆಚ್ಚಿನ ಸಂಖ್ಯೆಯ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.

ಗೋವಾದಲ್ಲಿ ಈವರೆಗೆ 3,108 ಕೋವಿಡ್ -19 ಪ್ರಕರಣಗಳು ವರದಿಯಾಗಿದ್ದು 19 ರೋಗಿಗಳು ಸಾವನ್ನಪ್ಪಿದ್ದಾರೆ. ಸತತವಾಗಿ ಒಂದು ವಾರದಿಂದ ಕರೋನಾವೈರಸ್ (Coronavirus) ಸೋಂಕಿನ ಪ್ರಕರಣಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಅನಿವಾರ್ಯವಲ್ಲದ ಸೇವೆಗಳನ್ನು ನಿಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿತು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ಇದುವರೆಗೆ ಲಾಕ್‌ಡೌನ್‌ ಉಲ್ಲಂಘನೆಯ ಹೆಚ್ಚಿನ ಪ್ರಕರಣಗಳು ಕಂಡುಬಂದಿಲ್ಲ. ಜನರು ಮನೆಯೊಳಗೆ ಇರಬೇಕೆಂದು ಪೊಲೀಸರು ಒತ್ತಾಯಿಸಿದರು.

ಉದ್ಯಮ ಸೇರಿದಂತೆ ಅಗತ್ಯ ಸೇವೆಗಳಿಗೆ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಲಾಗಿದೆ. ಆಗಸ್ಟ್ 10 ರವರೆಗೆ ಪ್ರತಿದಿನ ಬೆಳಿಗ್ಗೆ 8 ರಿಂದ ಬೆಳಿಗ್ಗೆ 6 ರವರೆಗೆ ಸಾರ್ವಜನಿಕ ಕರ್ಫ್ಯೂ ವಿಧಿಸುವುದಾಗಿ ರಾಜ್ಯ ಸರ್ಕಾರ ಘೋಷಿಸಿದೆ.

Comments are closed.