ರಾಷ್ಟ್ರೀಯ

ಐಸಿಎಸ್ಇ 10ನೇ ತರಗತಿ ಪರೀಕ್ಷೆಯಲ್ಲಿ ಶೇ. 99.33, ಐಎಸ್​ಸಿ 12ನೇ ತರಗತಿ ಪರೀಕ್ಷೆಯಲ್ಲಿ ಶೇ. 96.84 ಫಲಿತಾಂಶ

Pinterest LinkedIn Tumblr


ನವದೆಹಲಿ(ಜುಲೈ 10): ಸಿಐಎಸ್​ಸಿಇ ಮಂಡಳಿಯ ಐಸಿಎಸ್​ಇ ಮತ್ತು ಐಎಸ್​ಸಿ ಪಠ್ಯಕ್ರಮದ 10 ಮತ್ತು 12ನೇ ತರಗತಿ ಫಲಿತಾಂಶ ಪ್ರಕಟವಾಗಿದೆ. ಐಸಿಎಸ್​ಇಯ 10ನೇ ತರಗತಿ ಪರೀಕ್ಷೆ ಹಾಗೂ ಐಎಸ್​ಸಿಯ 12ನೇ ತರಗತಿ ಪರೀಕ್ಷೆಯ ಫಲಿತಾಂಶಗಳು ಪ್ರಕಟವಾಗಿವೆ. 10ನೇ ತರಗತಿ ಪರೀಕ್ಷೆ ಬರೆದವರಲ್ಲಿ ಶೇ. 99.33 ಮಂದಿ ತೇರ್ಗಡೆಯಾಗಿದ್ದಾರೆ. ಇನ್ನು, 12ನೇ ತರಗತಿ ಪರೀಕ್ಷೆಯಲ್ಲಿ ಶೇ. 96.84 ಫಲಿತಾಂಶ ಬಂದಿದೆ.

ಐಸಿಎಸ್​ಇಯ 10ನೇ ತರಗತಿಯ ಪರೀಕ್ಷೆಯನ್ನ ದೇಶಾದ್ಯಂತ 2,07,902 ಮಕ್ಕಳು ಬರೆದಿದ್ದರು. ಇವರ ಪೈಕಿ 2,06,525 ವಿದ್ಯಾರ್ಥಿಗಳು ಉತ್ತೀರ್ಣಗೊಂಡಿದ್ದಾರೆ. 1377 ಮಂದಿ ಫೇಲ್ ಆಗಿದ್ದಾರೆ.

ಇನ್ನು, ಐಎಸ್​ಸಿಯ 12ನೇ ತರಗತಿ ಪರೀಕ್ಷೆಯನ್ನ ಬರೆದ ಒಟ್ಟು 88,409 ವಿದ್ಯಾರ್ಥಿಗಳ ಪೈಕಿ 85,611 ಮಂದಿ ಪಾಸ್ ಆಗಿದ್ದಾರೆ. ಉಳಿದ 2,798 ಮಕ್ಕಳು ಅನುತ್ತೀರ್ಣಗೊಂಡಿದ್ದಾರೆ. ಇದರೊಂದಿಗೆ 12ನೇ ತರಗತಿ ಪರೀಕ್ಷೆಯಲ್ಲಿ ಪಾಸಿಂಗ್ ಪರ್ಸೆಂಟೇಜ್ ಶೇ. 96.84 ಇದೆ.

ಫಲಿತಾಂಶ ವೀಕ್ಷಿಸುವ ಮಾರ್ಗಗಳು:
1) ಈ ಮಂಡಳಿಗಳ ಪರೀಕ್ಷೆ ಬರೆದ 10 ಮತ್ತು 12ನೇ ತರಗತಿ ವಿದ್ಯಾರ್ಥಿಗಳು cisce.org ಮತ್ತು results.cisce.org ವೆಬ್ ಸೈಟ್​ಗಳಿಗೆ ಭೇಟಿ ನೀಡಬಹುದಾಗಿದೆ.
2) ಎಸ್ಸೆಮ್ಮೆಸ್ ಮೂಲಕವೂ ರಿಸಲ್ಟ್ ಪಡೆಯಬಹುದು. ವಿದ್ಯಾರ್ಥಿಗಳು ತಮ್ಮ ರೋಲ್ ನಂಬರ್ ಅನ್ನು ಟೈಪ್ ಮಾಡಿ 9248082883ಗೆ ಮೆಸೇಜ್ ಕಳುಹಿಸಿದರೆ ಫಲಿತಾಂಶದ ವಿವರ ಸಿಗುತ್ತದೆ.

ಅತ್ಯಧಿಕ ಪ್ರಮಾಣದಲ್ಲಿ ಜನರು ಭೇಟಿ ನೀಡುವುದರಿಂದ ಈ ಎರಡು ವೆಬ್​ಸೈಟ್​ಗಳು ಕ್ರ್ಯಾಷ್ ಆಗುವ ಸಾಧ್ಯತೆಯೂ ಇರುತ್ತದೆ. ಆದ್ದರಿಂದ ವೆಬ್​ಸೈಟ್ ಕ್ರ್ಯಾಷ್ ಆದಲ್ಲಿ ಆತಂಕಪಡದಿರಿ ಎಂದು ಮಂಡಳಿ ತನ್ನ ಪ್ರಕಟಣೆಯಲ್ಲಿ ಮನವಿ ಮಾಡಿದೆ.ಇದನ್ನೂ ಓದಿ: Gold Price: ಮೂರೇ ದಿನದಲ್ಲಿ 1 ಸಾವಿರ ರೂಪಾಯಿ ಏರಿಕೆ ಕಂಡ ಚಿನ್ನ, ಒಂದೇ ದಿನದಲ್ಲಿ 2 ಸಾವಿರ ರೂ ಜಿಗಿತ ಕಂಡ ಬೆಳ್ಳಿ

10ನೇ ತರಗತಿ ಪರೀಕ್ಷೆಯಲ್ಲಿ ಪ್ರತಿ ಸಬ್ಜೆಕ್ಟ್​ನಲ್ಲೂ ಪಾಸ್ ಆಗಲು ವಿದ್ಯಾರ್ಥಿಗಳು ಕನಿಷ್ಠ 33 ಅಂಕ ಪಡೆಯಬೇಕು. 12ನೇ ತರಗತಿ ಪರೀಕ್ಷೆ ತೇರ್ಗಡೆಯಾಗಲು ಪ್ರತಿಯೊಂದು ವಿಷಯದಲ್ಲೂ ಕನಿಷ್ಠ 40 ಅಂಕ ಪಡೆಯಬೇಕು.

ಈ ವರ್ಷ ಅನಿರೀಕ್ಷಿತ ಬಿಕ್ಕಟ್ಟು ಎದುರಾಗಿದ್ದರಿಂದ 10 ಮತ್ತು 12ನೇ ತರಗತಿ ಪರೀಕ್ಷೆಗಳಿಗೆ ಮೆರಿಟ್ ಲಿಸ್ಟ್ ಪ್ರಕಟಿಸುವುದಿಲ್ಲ ಎಂದು ದಿ ಕೌನ್ಸಿಲ್ ಫಾರ್ ಇಂಡಿಯನ್ ಸ್ಕೂಲ್ ಸರ್ಟಿಫಿಕೇಟ್ ಎಕ್ಸಾಮಿನೇಶನ್ಸ್ (ಸಿಐಎಸ್​ಸಿಇ) ಮಂಡಳಿ ಸ್ಪಷ್ಟಪಡಿಸಿದೆ.

ಇನ್ನು ಕರ್ನಾಟಕದ ರಾಜ್ಯ ಮಂಡಳಿಗಳ ಎಸ್ಸೆಸ್ಸೆಲ್ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷೆಗಳ ಫಲಿತಾಂಶಗಳ ಪ್ರಕಟಕ್ಕೆ ದಿನಗಣನೆ ಇದೆ. ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಜುಲೈ 3ನೇ ವಾರ ಪ್ರಕಟಗೊಳ್ಳುವ ಸಾಧ್ಯತೆ ಇದೆ. ಎಸ್ಸೆಸ್ಸೆಲ್ಸಿ ಪರೀಕ್ಷೆಯ ರಿಸಲ್ಟ್ ಆಗಸ್ಟ್ ತಿಂಗಳ ಮೊದಲಾರ್ಧದಲ್ಲಿ ಬಹಿರಂಗಗೊಳ್ಳುವ ನಿರೀಕ್ಷೆ ಇದೆ.

ವಿದ್ಯಾರ್ಥಿಗಳು ಮರುಮೌಲ್ಯಮಾಪನ (Revaluation) ಬಯಸಿದರೆ ಪ್ರತಿ ವಿಷಯಕ್ಕೆ 1 ಸಾವಿರ ರೂಪಾಯಿ ಶುಲ್ಕ ಪಾವತಿಸಬೇಕು. ಜುಲೈ 10-16ರವರೆಗೆ ಆನ್​ಲೈನ್​ನಲ್ಲಿ ರೀವ್ಯಾಲುಯೇಷನ್​ಗೆ ಅರ್ಜಿ ಸಲ್ಲಿಸಲು ಅವಕಾಶ ನೀಡಲಾಗಿದೆ.

Comments are closed.