ನವದೆಹಲಿ: ದೇಶದಾದ್ಯಂತ ಹೊಸ ಸೋಂಕು ಬೆಳಕಿಗೆ ಬರುವ ಪ್ರಮಾಣದ ನಾಗಾಲೋಟ ಮುಂದುವರೆದಿದ್ದು, ಶನಿವಾರ 22,771 ಜನರಲ್ಲಿ ಹೊಸದಾಕಿ ಕಾಣಿಸಿಕೊಂಡಿದೆ. ಇದರೊಂದಿಗೆ ಸೋಂಕಿತರ ಸಂಖ್ಯೆ 64,8,315 ಮುಟ್ಟಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.
ಇನ್ನು ನಿನ್ನೆ ಒಂದೇ ದಿನ 442 ಮಂದಿ ಮಹಾಮಾರಿ ವೈರಸ್’ಗೆ ಬಲಿಯಾಗುವುದರೊಂದಿಗೆ ಈ ವರೆಗಿನ ಸಾವನ್ನಪ್ಪಿದವರ ಸಂಖ್ಯೆ 18655ಕ್ಕೆ ತಲುಪಿದೆ.
ಇದೇ ವೇಳೆ 3,94,227 ಮಂದಿ ಸೋಂಕಿತರ ಪೈಕಿ 648315 ಮಂದಿ ಸೋಂಕಿನಿಂದ ಗುಣಮುಖರಾಗಿದ್ದು, ಇನ್ನು ದೇಶದಲ್ಲಿ 235433 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆ.
ಮಹಾರಾಷ್ಟ್ರದಲ್ಲಿ ನಿನ್ನೆ ಒಂದೇ ದಿನ 6364 ಹೊಸ ಪ್ರಕರಣ ಬೆಳಕಿಗೆ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 1.92ಲಕ್ಷಕ್ಕೆ ಏರಿಕೆಯಾಗಿದೆ. ಇನ್ನು 198 ಜನರು ನಿನ್ನೆ ಒಂದೇ ದಿನ ಸಾವನ್ನಪ್ಪುವುದರೊಂದಿಗೆ ರಾಜ್ಯದಲ್ಲಿ ಬಲಿಯಾದವರ ಸಂಖ್ಯೆ 8,376ಕ್ಕೆ ತಲುಪಿದೆ.
ಇನ್ನು ತಮಿಳುನಾಡಿನಲ್ಲಿ 4329 ಹೊಸ ಕೇಸು ದಾಖಲಾಗುವುದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 1,02ಲಕ್ಷಕ್ಕೆ ತಲುಪಿದೆ. ಜೊತೆಗೆ 64 ಜನರು ಸಾವನ್ನಪ್ಪುವುದರೊಂದಿಗೆ ಈ ವರೆಗೆ ಬಲಿಯಾದವರ ಸಂಖ್ಯೆ 1,385ಕ್ಕೆ ತಲುಪಿದೆ. ಇನ್ನು ದೆಹಲಿಯಲ್ಲಿ 2520 ಹೊಸ ಪ್ರಕರಣ ದಾಕಲಾಗಿದ್ದು, ಸೋಂಕಿತರ ಸಂಖ್ಯೆ 94,000 ಮುಟ್ಟಿದೆ. ಜೊತೆಗೆ 59 ಮಂದಿ ಸಾವನ್ನಪ್ಪಿದ್ದಾರೆ.
Comments are closed.