ಕರ್ನಾಟಕ

ಆರತಕ್ಷತೆಯಿಂದ ಹರಡಿದ ಕೊರೋನಾ ಸೋಂಕು; ನವ ವಿವಾಹಿತ, ತಂದೆ, ಮಾವನ ವಿರುದ್ಧ ದೂರು!

Pinterest LinkedIn Tumblr


ಬಾಗಲಕೋಟೆ: ಆರತಕ್ಷತೆ ವೇಳೆ ಕೊವೀಡ್ ನಿಯಮ ಉಲ್ಲಂಘಿಸಿದ ಹಿನ್ನೆಲೆ ನವ ವಿವಾಹಿತ ಹಾಗೂ ಆತನ ತಂದೆ ವಿರುದ್ಧ ಕೇಸ್ ದಾಖಲಾಗಿದೆ. ನವ ವಿವಾಹಿತನಿಂದಾಗಿ ಬಾಗಲಕೋಟೆಯ ಕಲಾದಗಿಯಲ್ಲಿ ಕೊರೊನಾ ಸೋಂಕು ಹೆಚ್ಚಿದೆ ಅನ್ನುವುದೇ ಪ್ರಮುಖ ಆರೋಪವಾಗಿದೆ. ಕಲಾದಗಿ ಗ್ರಾಮದ ನವ ವಿವಾಹಿತನಾಗಿರುವ ಯುವಕ, ಈಗ ಹಾವೇರಿಯಲ್ಲಿ ಅಬಕಾರಿ ಇಲಾಖೆ ನೌಕರನಾಗಿ ಕೆಲಸ ಮಾಡುತ್ತಿದ್ದಾನೆ.

ಈತನ ವಿವಾಹ ಜೂ. 12 ರಂದು ಬಾಗಲಕೋಟೆಯಲ್ಲಿ ನಡೆದಿತ್ತು. ಜೂನ್ 13ರಂದು ಕಲಾದಗಿಯಲ್ಲಿ ಆರತಕ್ಷತೆ ನಡೆದಿತ್ತು. ಆರತಕ್ಷತೆ ಕಾರ್ಯಕ್ರಮದಿಂದಾಗಿ ಸೋಂಕು ಹರಡಿದೆ. ಸದ್ಯ ವಿವಾಹಿತನಿಗೆ ಕೊರೊನಾ ಸೋಂಕು ದೃಢಪಟ್ಟಿದ್ದು, ಕಾರ್ಯಕ್ರಮದಿಂದ ಕಲಾದಗಿಯಲ್ಲಿ 30ಕ್ಕೂ ಅಧಿಕ ಜನರಿಗೆ ಸೋಂಕು ತಗುಲಿದೆ. ಈ ಹಿನ್ನೆಲೆ ವಿವಾಹಿತ ಹಾಗೂ ಆತನ ತಂದೆ ವಿರುದ್ಧ ಕಲಾದಗಿ ಪೊಲೀಸ್ ಠಾಣೆಯಲ್ಲಿ ವಿಪತ್ತು ನಿರ್ವಹಣಾ ಕಾಯ್ದೆ-2005 ಹಾಗೂ ಸಾಂಕ್ರಾಮಿಕ ರೋಗ ತಡೆ ಕಾಯ್ದೆ ಅನ್ವಯ ದೂರು ದಾಖಲಾಗಿದೆ.

ಅಲ್ಲದೇ ಜೂನ್ 17ರಂದು ವಿವಾಹ ಆಯೋಜಿಸಿದ ವಧುವಿನ ತಂದೆ ವಿರುದ್ಧವೂ ಕೇಸ್‌ ದಾಖಲಾಗಿದೆ. ಸದ್ಯ ಸೋಂಕಿತ ನವವಿವಾಹಿತನಿಗೆ ಬಾಗಲಕೋಟೆ ಕೋವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಕಳೆದ ಕೆಲವು ದಿನಗಳಿಂದ ಈ ರೀತಿಯ ಕಾರ್ಯಕ್ರಮ ಆಯೋಜಿಸಿ ಹಲವು ವರ, ವಧುಗಳು ಪೇಚಿಗೆ ಸಿಲುಕುತ್ತಿದ್ದಾರೆ. ಅನೇಕ ಕಡೆ ಕೇಸ್‌ ದಾಖಲು ಆದ ಉದಾಹರಣೆಯು ಇದೆ.

Comments are closed.