ರಾಷ್ಟ್ರೀಯ

137 ದೇಶಗಳಿಂದ ವಂದೇ ಭಾರತ್​ ಮಿಷನ್​ನಡಿ ಹಿಂದಿರುಗಿದ 5.3 ಲಕ್ಷ ಭಾರತೀಯರು!

Pinterest LinkedIn Tumblr

ನವದೆಹಲಿ (ಜು. 4): ವಂದೇ ಭಾರತ್ ಮಿಷನ್​ನಡಿ ಇದುವರೆಗೂ 5.3 ಲಕ್ಷ ಭಾರತೀಯರು ಸ್ವದೇಶಕ್ಕೆ ವಾಪಾಸಾಗಿದ್ದಾರೆ. ಮೇ 7ರಿಂದ ಜಗತ್ತಿನ ನಾನಾ ಭಾಗಗಳಿಗೆ ವಿಶೇಷ ವಿಮಾನ ಕಳುಹಿಸಿ, ಭಾರತೀಯರನ್ನು ಸುರಕ್ಷಿತವಾಗಿ ವಾಪಾಸ್ ಕರೆಸಲಾಗಿತ್ತು. ಕಳೆದ 2 ತಿಂಗಳಲ್ಲಿ 137 ದೇಶಗಳಿಂದ 5,03,990 ಭಾರತೀಯರು ವಾಪಾಸಾಗಿದ್ದಾರೆ.

ವಿದೇಶಗಳಲ್ಲಿ ಕೊರೋನಾ ಸೋಂಕು ಉಲ್ಬಣವಾಗಿರುವ ಹಿನ್ನೆಲೆಯಲ್ಲಿ ಅಲ್ಲಿರುವ ಭಾರತೀಯರನ್ನು ಸ್ವದೇಶಕ್ಕೆ ಕರೆಸಿಕೊಳ್ಳಲಾಗಿದೆ. ಮೂರು ಹಂತದಲ್ಲಿ 137 ದೇಶಗಳಿಂದ ಭಾರತೀಯರು ವಾಪಾಸಾಗಿದ್ದಾರೆ. ಕೇರಳಕ್ಕೆ ಅತಿ ಹೆಚ್ಚು ಮಂದಿ ವಿದೇಶದಿಂದ ವಾಪಾಸ್ ಬಂದಿದ್ದಾರೆ. ಉತ್ತರ ಪ್ರದೇಶ, ಬಿಹಾರ್, ಪಶ್ಚಿಮ ಬಂಗಾಳ, ತಮಿಳುನಾಡು, ಉತ್ತರ ಪ್ರದೇಶ, ಆಂಧ್ರಪ್ರದೇಶಕ್ಕೆ ಹೆಚ್ಚು ಮಂದಿ ವಾಪಾಸ್ ಬಂದಿದ್ದಾರೆ.

ವಂದೇ ಭಾರತ್​ ಮಿಷನ್​ನಡಿ 860 ಏರ್ ಇಂಡಿಯಾ ವಿಮಾನಗಳು, 1,256 ಚಾರ್ಟರ್ಡ್ ವಿಮಾನಗಳು ಮತ್ತು ಎಂಟು ನೌಕಾ ಹಡಗುಗಳು ಮೂಲಕ ಕಾರ್ಯಚರಣೆ ನಡೆಸಲಾಗಿದೆ. ಕೇರಳಕ್ಕೆ ವಿದೇಶಗಳಿಂದ 94,085 ಜನರು ವಾಪಾಸ್ ಬಂದಿದ್ದಾರೆ. ಅರಬ್ ದೇಶಗಳಿಂದಲೇ ಅತಿಹೆಚ್ಚು ಜನರು ವಾಪಾಸ್ ಬಂದಿದ್ದಾರೆ. ಏರ್ ಇಂಡಿಯಾ ಒಂದರಿಂದಲೇ 1,64,121 ಜನರನ್ನು ವಾಪಾಸ್ ಕರೆತರಲಾಗಿದೆ. ಭಾರತೀಯ ನೌಕಾಸೇನೆಯ ಹಡಗುಗಳ ಮೂಲಕ ಮಾಲ್ಡೀವ್ಸ್​, ಇರಾನ್, ಶ್ರೀಲಂಕಾದಲ್ಲಿರುವ 3,987 ಜನರನ್ನು ವಾಪಾಸ್ ಕರೆತರಲಾಗಿದೆ. ಚಾರ್ಟರ್ಡ್​ ಫ್ಲೈಟ್​ಗಳ ಮೂಲಕ 2,30,832 ಜನರನ್ನು ಕರೆತರಲಾಗಿದೆ.

Comments are closed.