ಈ ವರ್ಷ ನೀವು ಚಿನ್ನ ಖರೀದಿಸುವ ಆಲೋಚನೆಯಲ್ಲಿ ಇದ್ದೀರಾ? ಕಾರಣಾಂತರಗಳಿಂದ ಅವುಗಳನ್ನು ಮುಂದೂಡುತ್ತಿದ್ದೀರಾ? ಹಾಗಿದ್ದರೆ ಈಗಲೇ ಚಿನ್ನ ಖರೀದಿ ಮಾಡುವುದು ಉತ್ತಮ. ಏಕೆಂದರೆ ಮುಂದಿನ ದಿನಗಳಲ್ಲಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆಯಂತೆ.
ಈ ವರ್ಷಾಂತ್ಯಕ್ಕೆ ಚಿನ್ನದ ಬೆಲೆ 50-55 ಸಾವಿರ ರೂಪಾಯಿ ಆಗಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿರುವುದಾಗಿ moneycontrol ವೆಬ್ಸೈಟ್ ವರದಿಮಾಡಿದೆ. ಸದ್ಯ, ಲಾಕ್ಡೌನ್ ಪೂರ್ಣಗೊಂಡಿದೆ. ಆದರೆ, ಕೊರೋನಾ ಸೋಂಕು ಹರಡುವಿಕೆ ಹೆಚ್ಚುತ್ತಲೇ ಇದೆ. ಇದರಿಂದ ಆರ್ಥಿಕತೆ ಮೇಲೆ ಭಾರೀ ಹೊಡೆತ ಉಂಟಾಗಲಿದೆ. ಹೀಗಾಗಿ ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ ಕಾಣಲಿದೆ ಎನ್ನುವುದು ತಜ್ಞರ ಅಭಿಪ್ರಾಯ.
ಕಳೆದ 4 ತಿಂಗಳಲ್ಲಿ ಚಿನ್ನದ ಬೆಲೆ ಶೇ. 17.31 ಅಥವಾ 6,794 ರೂಪಾಯಿ ಏರಿಕೆ ಕಂಡಿದೆ. ಸದ್ಯ, ಬಂಗಾರದ ಬೆಲೆ ಏರಿಕೆ ಹಾದಿಯಲ್ಲಿ ಸಾಗುತ್ತಿದೆ. ಹೀಗಾಗಿ, ಮುಂದಿನ ದಿನಗಳಲ್ಲಿ ಚಿನ್ನದ ಬೆಲೆ ಏರಿಕೆ ಆಗುತ್ತಲೇ ಸಾಗಲಿದೆ ಎಂದು ತಜ್ಞರು ಹೇಳಿದ್ದಾರೆ.
ಕಳೆದ ಮೂರು ತಿಂಗಳಿಂದ ಜನರಿಗೆ ಚಿನ್ನದ ಖರೀದಿ ಸಾಧ್ಯವಾಗಿಲ್ಲ. ಹೀಗಾಗಿ ಮುಂದಿನ ಎರಡು ತಿಂಗಳಲ್ಲಿ ಚಿನ್ನದ ಖರೀದಿ ಕೂಡ ಹೆಚ್ಚಿರಲಿದೆ. ಇದು ಚಿನ್ನದ ಬೆಲೆಯ ಮೇಲೆ ನೇರ ಪರಿಣಾಮ ಬೀರಲಿದೆ. ಹೀಗಾಗಿ ಚಿನ್ನದ ಬೆಲೆ ಏರಿಕೆ ಗತಿಯಲ್ಲಿ ಸಾಗಲಿದೆ ಎನ್ನುತ್ತಾರೆ ಆರ್ಥಿಕ ತಜ್ಞರು.
Comments are closed.