ರಾಷ್ಟ್ರೀಯ

ಯಾರಾದರೂ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿರುವುದನ್ನು ಹೀಗೆ ಪತ್ತೆ ಹಚ್ಚಿ

Pinterest LinkedIn Tumblr


ನವದೆಹಲಿ: ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಲಾಗಿದೆಯೆ ಅಥವಾ ಇಲ್ಲವೇ ಎಂದು ಕಂಡುಹಿಡಿಯಲು ನೀವು ಬಯಸಿದರೆ, ಕೇವಲ ಸಂದೇಶದ ಮೂಲಕ ನೀವು ಕಂಡುಹಿಡಿಯಲು ಸಾಧ್ಯವಿಲ್ಲ. ಇದಕ್ಕಾಗಿ, ನೀವು ಆ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಕರೆ ಮಾಡಬೇಕು. ಆಗ ಮಾತ್ರ ಅದು ಬಹಿರಂಗಗೊಳ್ಳುತ್ತದೆ.

ಇದಕ್ಕಾಗಿ ನಿಮಗೆ ಅನುಮಾನ ಇರುವ ವ್ಯಕ್ತಿಯ ಮೊಬೈಲ್ ಸಂಖ್ಯೆಗೆ ಒಮ್ಮೆ ಕರೆ ಮಾಡಿ. ಒಂದು ವೇಳೆ ಆತನ ಸಂಖ್ಯೆಯಿಂದ ಕಾರ್ಯನಿರತವಾಗಿರುವ ಸಂದೇಶ ಪುನಃ ಪುನಃ ಕೇಳಿಬಂದರೆ, ಆ ವ್ಯಕ್ತಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ನಿರ್ಬಂಧಿಸಿರುವ ಸಂಪೂರ್ಣ ಸಾಧ್ಯತೆ ಇದೆ.

ಹೀಗೆ ಪತ್ತೆ ಹಚ್ಚಿ
ಒಂದು ವೇಳೆ ನೀವು ನಿಮ್ಮ ಮೊಬೈಲ್ ನಿಂದ ಮಾಡುವ ಕರೆ ಪದೇ ಪದೇ ಡಿಆಕ್ಟಿವೇಟ್ ಆಗುತ್ತಿದ್ದರೆ, ಬೇರೊಬ್ಬರ ಮೊಬೈಲ್ ಪಡೆದು ಆ ವ್ಯಕ್ತಿಯ ಮೊಬೈಲ್ ಗೆ ಕರೆ ಮಾಡಿ. ಒಂದು ವೇಳೆ ನಿಮಗೆ ರಿಂಗ್ ಕೇಳಿ ಬಂದಿದ್ದೆ ಆದಲ್ಲಿ, ಆ ವ್ಯಕ್ತಿ ನಿಮ್ಮ ಸಂಖ್ಯೆ ಬ್ಲಾಕ್ ಮಾಡಿರುವುದನ್ನು ಖಚಿತಪಡಿಸಿಕೊಳ್ಳಿ.

ಹೀಗೆ ಖಚಿತಪಡಿಸಿಕೊಳ್ಳಿ
ಒಂದು ವೇಳೆ ಬೇರೆ ನಂಬರ್ ನಿಂದ ನೀವು ಕಾಲ್ ಮಾಡಿದರೆ, ಕಾಲ್ ಕನೆಕ್ಟ್ ಆಗುತ್ತಿದ್ದರೆ, ವ್ಯಕ್ತಿ ನಿಮ್ಮ ಮೊಬೈಲ್ ಸಂಖ್ಯೆಯನ್ನು ಬ್ಲಾಕ್ ಮಾಡಿದ್ದಾನೆ ಎಂಬುದು ಸ್ಪಷ್ಟವಾಗುತ್ತದೆ. ಹಲವು ಬಾರಿ ನಮ್ಮ ಅರಿವಿಲ್ಲದಂತೆ ಕೆಲ ನಂಬರ್ ಗಳು ಬ್ಲಾಕ್ ಆಗಿ ಹೋಗಿರುತ್ತವೆ. ಹೀಗಾಗಿ ಒಂದು ವೇಳೆ ನೀವು ಬಯಸಿದಲ್ಲಿ ಬೇರೆ ನಂಬರ್ ನಿಂದ ಆ ವ್ಯಕ್ತಿಯ ಮೊಬೈಲ್ ನಂಬರ್ ಗೆ ಕರೆ ಮಾಡಿ ಅಥವಾ ಸಂದೇಶ ಕಳುಹಿಸಿ ನಿಮ್ಮ ನಂಬರ್ ಅನ್ನು ಅನ್ ಬ್ಲಾಕ್ ಮಾಡಲು ನೀವು ಕೇಳಬಹುದಾಗಿದೆ.

Comments are closed.