ರಾಷ್ಟ್ರೀಯ

ಕಾರಿನೊಳಗೆ ಆಟವಾಡುತ್ತಿದ್ದಾಗ ಉಸಿರುಗಟ್ಟಿ ಇಬ್ಬರು ಮಕ್ಕಳು ಸಾವು; ಇನ್ನಿಬ್ಬರ ಸ್ಥಿತಿ ಗಂಭೀರ

Pinterest LinkedIn Tumblr

ನವದೆಹಲಿ: ಆಟ ಆಡುವ ಉತ್ಸಾಹದಲ್ಲಿ ಕಾರಿನೊಳಗೆ ಸಿಲುಕಿಕೊಂಡು ಇಬ್ಬರು ಮಕ್ಕಳು ದುರಂತವಾಗಿ ಸಾವನ್ನಪ್ಪಿರುವ ಘಟನೆ ಉತ್ತರ ಪ್ರದೇಶದ ಮೊರದಾಬಾದ್​ನಲ್ಲಿ ನಡೆದಿದೆ.

ಕಾರಿನ ಕಿಟಕಿ ಹಾಕಿಕೊಂಡು ಒಳಗೆ ಕುಳಿತು ನಾಲ್ಕು ಮಕ್ಕಳು ಆಟವಾಡುತ್ತಿದ್ದರು. ಈ ವೇಳೆ ಕಾರಿನ ಡೋರ್ ಕೂಡ ಲಾಕ್ ಆದ ಪರಿಣಾಮ ಉಸಿರುಕಟ್ಟಿ ಮಕ್ಕಳು ಸಾವನ್ನಪ್ಪಿದ್ದಾರೆ.

ಮೊರದಾಬಾದ್​ನ ಮುಂದ ಪಾಂಡೆ ಏರಿಯಾದಲ್ಲಿ ಮನೆ ಎದುರು ನಿಲ್ಲಿಸಲಾಗಿದ್ದ ಕಾರಿನೊಳಗೆ ಹತ್ತಿದ್ದ ನಾಲ್ಕು ಮಕ್ಕಳು ಕಿಟಕಿ ಕ್ಲೋಸ್ ಮಾಡಿಕೊಂಡು ಆಟವಾಡುತ್ತಿದ್ದರು. ಎಲ್ಲರೂ 4ರಿಂದ 7 ವರ್ಷದೊಳಗಿನ ಮಕ್ಕಳಾಗಿದ್ದು, ಕಾರಿನ ಕಿಟಕಿ ಮುಚ್ಚಿಕೊಂಡ ಮೇಲೆ ಡೋರ್ ಕೂಡ ಲಾಕ್ ಆಗಿತ್ತು. ಇದರಿಂದ ಹೊರಗೆ ಬರಲಾಗದೆ ಉಸಿರುಗಟ್ಟಿ ಒದ್ದಾಡಿದ ಮಕ್ಕಳು ಸಹಾಯಕ್ಕಾಗಿ ಕಿರುಚಾಡಿದರೂ ಯಾರಿಗೂ ಕೇಳಿಸಿಲ್ಲ.

ಸೋಮವಾರ ಬೆಳಗ್ಗೆ 8 ಗಂಟೆಗೆ ಈ ಘಟನೆ ನಡೆದಿದೆ. ಮನೆಯವರಿಗೆ ವಿಷಯ ತಿಳಿಯುವಷ್ಟರಲ್ಲಿ ಮಕ್ಕಳು ಅರೆಪ್ರಜ್ಞಾವಸ್ಥೆಗೆ ತಲುಪಿದ್ದರು. ಪೋಷಕರು ಮಕ್ಕಳನ್ನು ಸ್ಥಳೀಯ ಆಸ್ಪತ್ರೆಗೆ ಸೇರಿಸಿದರು. ಆದರೆ, ನಾಲ್ವರ ಪೈಕಿ ಇಬ್ಬರು ಮಕ್ಕಳು ಸಾವನ್ನಪ್ಪಿದ್ದು, ಇನ್ನಿಬ್ಬರಿಗೆ ಚಿಕಿತ್ಸೆ ಮುಂದುವರಿಯುತ್ತಿದೆ ಎಂದು ಮೊರದಾಬಾದ್ ಎಸ್.ಪಿ. ಅಮಿತ್ ಕುಮಾರ್ ಹೇಳಿದ್ದಾರೆ.

Comments are closed.