ರಾಷ್ಟ್ರೀಯ

ದೇಶದಲ್ಲಿ ಅತಿ ಹೆಚ್ಚು ಕೊರೋನಾ ಸಾವಿನ ಪ್ರಕರಣಗಳು ಗುಜರಾತಿನಲ್ಲಿ ವರದಿಯಾಗಿದ್ದು, ಇದು ಗುಜರಾತ್ ಮಾದರಿಯಾ: ಬಿಜೆಪಿ ವಿರುದ್ಧ ರಾಹುಲ್ ವಾಗ್ದಾಳಿ

Pinterest LinkedIn Tumblr

ನವದೆಹಲಿ: ದೇಶದಲ್ಲಿ ಅತಿ ಹೆಚ್ಚು ಎಂಬಂತೆ ಗುಜರಾತ್ ರಾಜ್ಯದಲ್ಲಿ ಕೋವಿಡ್-19 ಸಾವಿನ ಪ್ರಕರಣಗಳು ವರದಿಯಾಗಿದ್ದು, ಗುಜರಾತ್ ಮಾದರಿ ಬಹಿರಂಗವಾಗಿದೆ ಎಂದು ಹೇಳುವ ಮೂಲಕ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಆಡಳಿತಾರೂಢ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿನ ಕೋವಿಡ್ ಮರಣ ದರ ಕುರಿತಂತೆ ಬಿಬಿಸಿ ವರದಿಯನ್ನು ತಮ್ಮ ಟ್ವಿಟರ್ ಖಾತೆಯಲ್ಲಿ ರಾಹುಲ್ ಗಾಂಧಿ ಹಂಚಿಕೊಂಡಿದ್ದಾರೆ. ಗುಜರಾತ್ ಶೇ. 6. 25, ಮಹಾರಾಷ್ಟ್ರ- ಶೇ.3. 73, ರಾಜಸ್ಥಾನ ಶೇ. 2.32 ಪಂಜಾಬ್ ಶೇ. 2.17, ಪುದುಚೇರಿ ಶೇ. 1. 98, ಜಾರ್ಖಂಡ್ ಶೇ. 0.5, ಛತ್ತೀಸ್ ಗಢ ಶೇ. 0.35 ರಷ್ಟಿದ್ದು, ಪ್ರಧಾನಿ ನರೇಂದ್ರ ಮೋದಿ ಅವರ ತವರೂರು ಗುಜರಾತ್ ನಲ್ಲಿಯೇ ಅತಿ ಹೆಚ್ಚಿನ ಸಂಖ್ಯೆ ಸಾವಿನ ಪ್ರಕರಣಗಳು ವರದಿಯಾಗಿದ್ದು, ಗುಜರಾತ್ ಮಾದರಿ ಬಹಿರಂಗವಾಗಿದೆ ಎಂದು ರಾಹುಲ್ ಗಾಂಧಿ ವಾಗ್ದಾಳಿ ನಡೆಸಿದ್ದಾರೆ.

ದೇಶದಲ್ಲಿ ಕೊರೋನಾ ವಿರುದ್ಧದ ಹೋರಾಟದಲ್ಲಿ ಮಹಾರಾಷ್ಟ್ರ ಹೊರತುಪಡಿಸಿದರೆ ಗುಜರಾತ್ ನಲ್ಲಿ ಹೆಚ್ಚು ಜನ ಸಾವನ್ನಪ್ಪಿದ್ದಾರೆ. ತಮಿಳುನಾಡು ಮತ್ತು ದೆಹಲಿಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗಿದೆ. ಆದರೆ, ಮರಣ ಪ್ರಮಾಣ ಕಡಿಮೆಯಿದೆ. ಗುಜರಾತಿನಲ್ಲಿ ಪ್ರತಿದಿನ ಅಂದಾಜು 400 ಹೊಸ ಕೊರೋನಾ ಪ್ರಕರಣಗಳು ವರದಿಯಾಗುತ್ತಿವೆ.

Comments are closed.