ರಾಷ್ಟ್ರೀಯ

ನೇಪಾಳ ಪೊಲೀಸರಿಂದ ಬಿಹಾರದ ಗಡಿಯಲ್ಲಿ ಗುಂಡಿನ ದಾಳಿ; ಓರ್ವ ಸಾವು

Pinterest LinkedIn Tumblr


ಬಿಹಾರ (ಜೂನ್‌ 12); ಭಾರತ ನೇಪಾಳ ಗಡಿಭಾಗವಾದ ಬಿಹಾರದ ಸೀತಾಮಾರ್ಹಿ ಜಿಲ್ಲೆಯಲ್ಲಿ ನೇಪಾಳ ಪೊಲೀಸರು ನಡೆಸಿರುವ ಗುಂಡಿನ ದಾಳಿಗೆ ಓರ್ವ ಮೃತಪಟ್ಟಿದ್ದು, ಇಬ್ಬರು ಗಂಭೀರ ಗಾಯಕ್ಕೆ ಒಳಗಾಗಿದ್ದಾರೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಸ್ಥಳೀಯರು ಮತ್ತು ನೇಪಾಳದ ಸಶಸ್ತ್ರ ಪೊಲೀಸ್ ಪಡೆ (ಎಪಿಎಫ್) ನಡುವೆ ಈ ಘಟನೆ ನಡೆದಿದೆ ಎಂದು ಪಾಟ್ನಾ ಗಡಿನಾಡಿನ ಸಶಸ್ತ್ರ ಪಡೆಯ ಇನ್ಸ್‌ಪೆಕ್ಟರ್ ಜನರಲ್ ಸಂಜಯ್ ಕುಮಾರ್ ಪಿಟಿಐಗೆ ತಿಳಿಸಿದ್ದಾರೆ.

ಅಂತರರಾಷ್ಟ್ರೀಯ ಗಡಿಯ ಸಮೀಪವಿರುವ ಪ್ರದೇಶವನ್ನು ಪ್ರವೇಶಿಸುವ ಸೀತಾಮಾರ್ಹಿ ಜಿಲ್ಲೆಯ ಸ್ಥಳೀಯರು ಮತ್ತು ನೇಪಾಳದ ಎಪಿಎಫ್ಸಿಬ್ಬಂದಿಗಳ ನಡುವೆ ಮಾತಿನ ಚಕಮಕಿ ಶುರುವಾಗಿದೆ. ನಂತರ ಇದು ದೊಡ್ಡ ಗಲಾಟೆಯಾಗಿ ಬದಲಾಗಿದೆ. ಹೀಗಾಗಿ ನೇಪಾಳದ ಪೊಲೀಸರು ಗುಂಡಿನ ದಾಳಿ ನಡೆಸಿದ್ದಾರೆ. ಈ ದಾಳಿಯಲ್ಲಿ ಓರ್ವ ಭಾರತೀಯ ವ್ಯಕ್ತಿ ಸಾವನ್ನಪ್ಪಿದ್ದರೆ, ಇಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಅಲ್ಲದೆ, ಈ ವಿಚಾರ ಪಾಟ್ನಾ ಗಡಿನಾಡಿನ ಸೀಮಾ ಪಡೆ ಭಾಗಿಯಾಗಿಲ್ಲ ಎಂದು ಬಿಹಾರದ ಐಜಿ ತಿಳಿಸಿದ್ದಾರೆ. ಘಟನೆಯ ಬಳಿಕ ಸ್ಥಳೀಯ ಪೊಲೀಸರು ಮತ್ತು ಎಸ್‌ಎಸ್‌ಬಿಯ ಹಿರಿಯ ಅಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದಾರೆ ಎಂದು ತಿಳಿದುಬಂದಿದೆ.

Comments are closed.