ರಾಷ್ಟ್ರೀಯ

ಕೊರೊನಾ ದೇಶದಲ್ಲಿ ಇನ್ನೂ ಸಮುದಾಯ ಪ್ರಸರಣವಿಲ್ಲ- ಕೇಂದ್ರ ಸರ್ಕಾರ ಸ್ಪಷ್ಟನೆ

Pinterest LinkedIn Tumblr


ನವದೆಹಲಿ: ಕರೋನವೈರಸ್ (coronavirus ) ಸಾಂಕ್ರಾಮಿಕದ ಸಮುದಾಯ ಪ್ರಸರಣ ಹಂತದಲ್ಲಿ ಭಾರತವು ಖಂಡಿತವಾಗಿಯೂ ಇಲ್ಲ ಎಂದು ಕೇಂದ್ರ ಸರ್ಕಾರ ತಿಳಿಸಿದೆ. ಮುಂಬೈ ಮತ್ತು ದೆಹಲಿಯಲ್ಲಿನ ಪ್ರಕರಣಗಳ ಹೆಚ್ಚಳ ಕುರಿತು ಕಳೆದ ಕೆಲವು ದಿನಗಳಿಂದ ಊಹಾಪೋಹಗಳ ಹಿನ್ನಲೆಯಲ್ಲಿ ಈಗ ಕೇಂದ್ರ ಸರ್ಕಾರದ ಸ್ಪಷ್ಟನೆ ಬಂದಿದೆ.

‘ಈ ಪದದ ಬಗ್ಗೆ ಹೆಚ್ಚಿನ ಚರ್ಚೆ ನಡೆಯುತ್ತಿದೆ ಮತ್ತು ವಿಶ್ವ ಆರೋಗ್ಯ ಸಂಸ್ಥೆ ಕೂಡ ಇದನ್ನು ವ್ಯಾಖ್ಯಾನಿಸಿಲ್ಲ. ದೇಶದಲ್ಲಿ ಕೊರೊನಾ ಹರಡುವಿಕೆಯು ಶೇ 1 ಕ್ಕಿಂತ ಕಡಿಮೆ ಇದೆ.ನಗರ ಪ್ರದೇಶಗಳಲ್ಲಿ ಮತ್ತು ಹಲವು ಧಾರಕ ವಲಯಗಳಲ್ಲಿ ಪ್ರಕರಣದ ಸಂಖ್ಯೆ ಸ್ವಲ್ಪ ಅಧಿಕಗೊಂಡಿದೆ.ಆದರೆ ಈ ಮಧ್ಯೆ ಇದನ್ನು ಅಲ್ಲಗಳೆದಿರುವ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿಯ (ಐಸಿಎಂಆರ್) ಮಹಾನಿರ್ದೇಶಕ ಬಲರಾಮ್ ಭಾರ್ಗವ ‘ಭಾರತ ಸಮುದಾಯ ಪ್ರಸರಣ ಹಂತದಲ್ಲಿ ಇಲ್ಲ’ ಎಂದು ಹೇಳಿದ್ದಾರೆ.

ಇದುವರೆಗೆ ಸಮುದಾಯ ಪ್ರಸರಣ, ಅಥವಾ ಕೊರೊನಾ ರೋಗದ 3 ನೇ ಹಂತವನ್ನು ಯಾವುದೇ ಸೋಂಕಿನ ಮೂಲ ತಿಳಿಯದಿರುವ ಪ್ರಕರಣಗಳಿಂದ ಗುರುತಿಸಲಾಗಿದೆ. ದೆಹಲಿ ಮತ್ತು ಮುಂಬೈನಂತಹ ನಗರಗಳಲ್ಲಿ COVID-19 ಪ್ರಕರಣಗಳು ಹೆಚ್ಚಾಗುವುದರೊಂದಿಗೆ ಸಮುದಾಯ ಹರಡುವಿಕೆಯ ಬಗ್ಗೆ ಊಹಾಪೋಹಗಳು ತೀವ್ರ ಗೊಂಡಿವೆ.

ದೆಹಲಿಯಲ್ಲಿನ ಸಮುದಾಯ ಪ್ರಸರಣದ ವಿಚಾರವಾಗಿ ಮಾತನಾಡಿರುವ ಆರೋಗ್ಯ ಸಚಿವ ಸತ್ಯೇಂದರ್ ಜೈನ್ ದೆಹಲಿಯಲ್ಲಿ ಹೆಚ್ಚಿನ ಸಂಖ್ಯೆಯ ಪ್ರಕರಣಗಳ ಮೂಲಗಳು ತಿಳಿದಿಲ್ಲ ,ನಗರವು ಸಮುದಾಯ ಪ್ರಸರಣ ಹಂತದಲ್ಲಿದೆ ಎನ್ನುವುದನ್ನು ಕೇಂದ್ರ ಸರ್ಕಾರ ಮಾತ್ರ ಘೋಷಿಸಲು ಸಾಧ್ಯ ಎಂದು ಹೇಳಿದರು.

ಸಾಮಾನ್ಯವಾಗಿ ಯಾವಾಗ ಜನರಿಗೆ ತಮಗೆ ಸೋಂಕು ತಗುಲಿರುವ ಬಗೆ ತಿಳಿದಿರುವುದಿಲ್ಲವೋ ಆಗ ಸಮುದಾಯ ಪ್ರಸರಣದ ಸಾಧ್ಯತೆ ಬಗ್ಗೆ ಊಹಿಸಬಹುದು ಎಂದರು. ದೆಹಲಿಯಲ್ಲಿ ಶೇ 50 ರಷ್ಟು ಪ್ರಕರಣಗಳಲ್ಲಿ ಸೋಂಕಿನ ಮೂಲ ತಿಳಿದಿಲ್ಲ,

ಇನ್ನೊಂದೆಡೆಗೆ ಏಮ್ಸ್ ನಿರ್ದೇಶಕ ರಂದೀಪ್ ಗುಲೇರಿಯಾ ದೆಹಲಿಯಲ್ಲಿ ಸಮುದಾಯ ಪ್ರಸರಣವಿದೆ ಎಂದು ಈಗಾಗಲೇ ಹೇಳಿದ್ದಾರೆ, ಆದರೆ ಕೇಂದ್ರ ಸರ್ಕಾರವು ಇದನ್ನು ಇನ್ನೂ ಒಪ್ಪುತ್ತಿಲ್ಲ. ನಾವು ಇದನ್ನು ಘೋಷಿಸಲು ಸಾಧ್ಯವಿಲ್ಲ, ಏಕೆಂದರೆ ಇದನ್ನು ಕೇಂದ್ರ ಸರ್ಕಾರ ಮಾತ್ರ ಘೋಷಿಸಬಹುದಾಗಿದೆ ಎಂದು ಸ್ಪಷ್ಟಪಡಿಸಿದರು.ಸಮುದಾಯ ಪ್ರಸರಣ ಎನ್ನುವುದು ತಾಂತ್ರಿಕ ಪದವಾಗಿದೆ ಮತ್ತು ಅದನ್ನು ಸ್ವೀಕರಿಸುತ್ತಾರೆಯೇ ಇಲ್ಲವೇ ಎನ್ನುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟ ಸಂಗತಿ ಎಂದು ಸಚಿವ ಜೈನ ತಿಳಿಸಿದರು.

Comments are closed.