ರಾಷ್ಟ್ರೀಯ

ದಿಲ್ಲಿಯಲ್ಲಿ ಮತ್ತೊಮ್ಮೆ ಲಾಕ್ ಡೌನ್ ಜಾರಿ ಸಾಧ್ಯತೆ!

Pinterest LinkedIn Tumblr


ನವದೆಹಲಿ: ವಿಶ್ವಾದ್ಯಂತ ಭಾರಿ ಭೀತಿ ಹುಟ್ಟಿಸಿರುವ ಕೊರೊನಾ ವೈರಸ್ ಎದುರು ಇಡೀ ವಿಶ್ವವೇ ಮಂಡಿಯೂರಿದೆ. ಇನ್ನೊಂದೆಡೆ ಕೊರೊನಾ ಪ್ರಕರಣಗಳ ಸಂಖ್ಯೆಯಲ್ಲಿ ನಿರಂತರ ಏರಿಕೆಯಾಗುತ್ತಿದ್ದು, ಜನರ ಚಿಂತೆ ಹೆಚ್ಚಿಸಿವೆ. ಈ ನಡುವೆ ಸರ್ಕಾರ ಮತ್ತೊಮ್ಮೆ ರಾಷ್ಟ್ರರಾಜಧಾನಿ ದೆಹಲಿಯಲ್ಲಿ ಲಾಕ್ ಡೌನ್ ವಿಧಿಸುವ ಶಾಧ್ಯತೆ ಇದೆ. ಹೌದು, ದೆಹಲಿಯೇಲ್ಲಿ ಬೇಕಾಬಿಟ್ಟಿ ಏರಿಕೆಯಾಗುತ್ತಿರುವ ಕೊವಿಡ್ 19 ಪ್ರಕರಣಗಳ ಹಿನ್ನೆಲೆ ಮತ್ತೊಮ್ಮೆ ಅತ್ಯಂತ ಕಠಿಣ ಲಾಕ್ ಡೌನ್ ವಿಧಿಸುವ ಸಿದ್ಧತೆಯನ್ನು ನಡೆಸಲಾಗುತ್ತಿದೆ. ಕೊರೊನಾ ಪ್ರಕೋಪದ ಹಿನ್ನೆಲೆ ದೆಹಲಿಯಲ್ಲಿ ಬಿಗಡಾಯಿಸುತ್ತಿರುವ ಪರಿಸ್ಥಿತಿ ಹಾಗೂ ಸಂಭವನೀಯ ಲಾಕ್ ಡೌನ್ ಕುರಿತಂತೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಇಂದು ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರೊಂದಿಗೆ ಭೇಟಿ ನಡೆಸಿದ್ದಾರೆ.

ಮೂಲಗಳು ನೀಡಿರುವ ಮಾಹಿತಿ ಪ್ರಕಾರ Unlock-1 ಕಾಲಾವಧಿಯಲ್ಲಿ ದೆಹಲಿಯಲ್ಲಿ ಕೊರೊನಾ ಗ್ರಾಫ್ ಭಾರಿ ಏರಿಕೆಯಾಗಿದೆ. ಒಂದೇ ದಿನದಲ್ಲಿ ಸುಮಾರು 10000 ಪ್ರಕರಣಗಳು ಬೆಳಕಿಗೆ ಬಂದಿವೆ. ಕೈತಪ್ಪುತ್ತಿರುವ ಸ್ಥಿತಿಯನ್ನು ಪರಿಗಣಿಸಿ ದೆಹಲಿ-NCR ಪ್ರಾಂತ್ಯದಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ಘೋಷಣೆಯಾಗುವ ಸಾಧ್ಯತೆ ಇದೆ. ವರದಿಗಳ ಪ್ರಕಾರ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೆಜ್ರಿವಾಲ್ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಈ ಕುರಿತು ಮಾತುಕತೆ ನಡೆಸಿದ್ದು, ದೆಹಲಿಯಲ್ಲಿ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬರಲಿದೆ ಎಂಬ ಚರ್ಚೆಗಳು ನಡೆಯುತ್ತಿವೆ. ಆದರೆ, ಇದುವರೆಗೆ ಅಧಿಕೃತವಾಗಿ ಈ ಕುರಿತು ಯಾವುದೇ ಘೋಷಣೆಯಾಗಿಲ್ಲ.

ದೆಹಲಿಯಲ್ಲಿ ವೇಗವಾಗಿ ಬೆಳೆಯುತ್ತಿದೆ ಗ್ರಾಫ್
ದೆಹಲಿಯಲ್ಲಿ ಕೊರೊನಾ ಸೋಂಕಿತರ ಶಂಖ್ಯೆ 32000 ಗಡಿ ದಾಟಿದೆ. ಕಳೆದ 24 ವರ್ಷಗಳಲ್ಲಿ 1500ಕ್ಕೂ ಅಧಿಕ ಪಾಸಿಟಿವ್ ಪ್ರಕರಣಗಳು ಬೆಳಕಿಗೆ ಬಂದಿವೆ. ಕಳೆದ 24 ಗಂಟೆಗಳಲ್ಲಿ ಮತ್ತೋರ್ವ ವ್ಯಕ್ತಿ ಕೊರೊನಾ ಸೋಂಕಿನಿಂದ ಮೃತಪಟ್ಟಿದ್ದಾರೆ. ಇದರಿಂದ ದೆಹಲಿಯಲ್ಲಿ ಈ ವೈರಸ್ ದಾಳಿಗೆ ತುತ್ತಾದವರ ಸಂಖ್ಯೆ 984ಕ್ಕೆ ತಲುಪಿದೆ. ಕಳೆದ 7 ದಿನಗಳಲ್ಲಿ 9500 ಕ್ಕೂ ಅಧಿಕ ಕೊರೊನಾ ಪಾಸಿಟಿವ್ ಪ್ರಕರಣಗಳು ದೆಹಲಿಯಲ್ಲಿ ದಾಖಲಾಗಿವೆ. ಜುಲೈ 31ರವರೆಗೆ ದೆಹಲಿಯಲ್ಲಿ 5.5 ಲಕ್ಷಕ್ಕೂ ಅಧಿಕ ಪ್ರಕರಣಗಳು ದಾಖಲಾಗುವ ಶಂಕೆಯನ್ನು ವ್ಯಕ್ತಪಡಿಸಲಾಗುತ್ತಿದೆ.

ಮಹಾರಾಷ್ಟ್ರದಲ್ಲಿಯೂ ಕೂಡ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬರುವ ಸಾಧ್ಯತೆ ಇದೆ
ಮಹಾರಾಷ್ಟ್ರದಲ್ಲಿಯೂ ಕೂಡ ಮತ್ತೊಮ್ಮೆ ಸಂಪೂರ್ಣ ಲಾಕ್ ಡೌನ್ ಜಾರಿಗೆ ಬರುವ ಸಾಧ್ಯತೆ ಇದೆ. ಈ ಕುರಿತು ಹೇಳಿಕೆ ನೀಡಿರುವ ಸಿಎಂ ಉದ್ಧವ್ ಠಾಕ್ರೆ, ಒಂದು ವೇಳೆ ಇದೆ ರೀತಿ ನಿಯಮಗಳ ಉಲ್ಲಂಘನೆಯಾದರೆ ಮತ್ತೊಮ್ಮೆ ಕಠಿಣ ನಿರ್ಬಂಧನೆಗಳನ್ನು ವಿಧಿಸಲಾಗುವುದು ಹಾಗೂ ಸಂಪೂರ್ಣ ಲಾಕ್ ಡೌನ್ ಜಾರಿಗೆ ತರಲಾಗುವುದು. ಸದ್ಯ ಅನ್ ಲಾಕ್-1 ಹಿನ್ನೆಲೆ ಸದ್ಯ ಸ್ವಲ್ಪ ಸಡಿಲಿಕೆ ನೀಡಲಾಗಿದೆ. ರಾಜ್ಯ ಸದ್ಯ ಸಾಮಾನ್ಯ ಸ್ಥಿತಿಗೆ ಮರಳುತ್ತಿದೆ. ಒಂದು ವೇಳೆ ಲಾಕ್ ಡೌನ್ ತೆರವುಗೊಳಿಸುವುದು ರಿಸ್ಕಿ ಆದರೆ ನಾವು ಮತ್ತೊಮ್ಮೆ ಲಾಕ್ ಡೌನ್ ಜಾರಿಗೆ ತರುವ ಕುರಿತು ಯೋಚಿಸುವೆವು. ಕೊರೊನಾ ಭೀತಿ ಇನ್ನೂ ದೂರವಾಗಿಲ್ಲ. ಕೇವಲ ನಿಮಗೋಸ್ಕರ ಸಡಿಲಿಕೆ ನೀಡಲಾಗಿದೆ, ಇದನ್ನು ಸದುಪಯೋಗಪಡಿಸಿಕೊಳ್ಳಿ ಎಂದು ಅಲ್ಲಿನ ಸಿಎಂ ಹೇಳಿದ್ದಾರೆ.

ಸದ್ಯ ಮಹಾರಾಷ್ಟ್ರದಲ್ಲಿ ಜೂನ್ 30ರವರೆಗೆ ಲಾಕ್ ಡೌನ್ ಮುಂದುವರೆಸಲಾಗಿದೆ. ಹಲವು ರೀತಿಯ ಸಡಿಲಿಕೆಗಳನ್ನು ಘೋಷಿಸಲಾಗಿದ್ದು, ಜನರು ತಮ್ಮ ತಮ್ಮ ಮನೆಗಳಿಂದ ಹೊರಗೆ ಬರುತ್ತಿದ್ದಾರೆ. ವಾಹನ ಕೂಡ ಚಲಾಯಿಸುತ್ತಿದ್ದಾರೆ. ಹಲವು ಮಾರುಕಟ್ಟೆಗಳೂ ಕೂಡ ನಿಧಾನಕ್ಕೆ ತಮ್ಮ ಕಾರ್ಯಗತಿಗೆ ಮರಳುತ್ತಿವೆ. ಮಹಾರಾಷ್ಟ್ರ ರಾಜ್ಯದಲ್ಲಿ ಕೊರೊನಾ ರೋಗಿಗಳ ಸಂಖ್ಯೆ ಒಂದು ಲಕ್ಷದ ಗಡಿ ದಾಟಿದೆ. ಕೇವಲ ಮುಂಬೈನಲ್ಲಿ ಮಾತ್ರವೇ 51 ಸಾವಿರಕ್ಕೂ ಅಧಿಕ ಪ್ರಕರಣಗಳು ದಾಖಲಾಗಿವೆ.

Comments are closed.