ರಾಷ್ಟ್ರೀಯ

ಜುಲೈನಲ್ಲಿ ಶಾಲೆ ಆರಂಭಿಸಲು ಹರಿಯಾಣ ಸರ್ಕಾರದಿಂದ ನಿರ್ಧಾರ

Pinterest LinkedIn Tumblr


ನವದೆಹಲಿ: ಕೊರೋನಾ ವೈರಸ್ ಕಾರಣದಿಂದ ದೇಶದಾದ್ಯಂತ ಶಾಲಾ-ಕಾಲೇಜುಗಳನ್ನು ಕಳೆದು ಎರಡೂವರೆ ತಿಂಗಳಿನಿಂದ ಮುಚ್ಚಲಾಗಿದ್ದು, ಈವರೆಗೂ ಎಲ್ಲೂ ಶಾಲಾ-ಕಾಲೇಜು ಆರಂಭಗೊಂಡಿಲ್ಲ. ದಿನದಿಂದ ದಿನಕ್ಕೆ ಕೊರೋನಾ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಲೆ ಇದೆ. ಏತನ್ಮಧ್ಯೆ ಹರಿಯಾಣ ಸರ್ಕಾರ ಜುಲೈ ನಲ್ಲಿ ಶಾಲೆ ಆರಂಭಿಸಲು ಮಹತ್ವದ ನಿರ್ಧಾರ ತೆಗೆದುಕೊಂಡಿದೆ.

ಮೂರು ಹಂತಗಳಲ್ಲಿ ಶಾಲೆಗಳನ್ನು ಜುಲೈನಲ್ಲಿ ಆರಂಭಿಸಲು ಹರಿಯಾಣ ಸರ್ಕಾರ ತೀರ್ಮಾನ ತೆಗೆದುಕೊಂಡಿದೆ. ಹಾಗೂ ಆಗಸ್ಟ್​ನಲ್ಲಿ ಕಾಲೇಜು ಆರಂಭಿಸಲು ತೀರ್ಮಾನಿಸಿದೆ.

ಮೊದಲ ಹಂತದಲ್ಲಿ 10, 11, 12ನೇ ತರಗತಿಗಳು ಆರಂಭವಾಗಲಿದ್ದು, 2ನೇ ಹಂತದಲ್ಲಿ 6, 7, 8, 9ನೇ ತರಗತಿಗಳು ಹಾಗೂ 3ನೇ ಹಂತದಲ್ಲಿ 1ರಿಂದ 5ನೇ ತರಗತಿ ಶಾಲೆ ಆರಂಭಕ್ಕೆ ಸಿದ್ದತೆ ನಡೆಸಿದೆ. ಹಾಗೆಯೇ ಆಗಸ್ಟ್​ನಲ್ಲಿ ಪದವಿ ಕಾಲೇಜುಗಳು ಆರಂಭವಾಗಲಿದೆ. ಶಾಲೆಗೆ ಬರುವ ಪ್ರತಿ ಮಗು, ಶಿಕ್ಷಕರು, ಸಿಬ್ಬಂದಿಗೆ ಕೊರೋನಾ ಪರೀಕ್ಷೆ ಕಡ್ಡಾಯವಾಗಿದೆ. 30 ಮಂದಿ ವಿದ್ಯಾರ್ಥಿಗಳಂತೆ 2 ಬ್ಯಾಚ್​ನಲ್ಲಿ ತರಗತಿಗಳು ನಡೆಯಲಿವೆ. ಪ್ರತಿಯೊಬ್ಬರಿಗೂ ಮಾಸ್ಕ್, ಸ್ಯಾನಿಟೈಸೇಷನ್ ಹಾಗೂ ಸಾಮಾಜಕ ಅಂತರ ಕಡ್ಡಾಯವಾಗಿದೆ. ಈ ಎಲ್ಲ ಸಿದ್ಧತೆಗಳೊಂದಿಗೆ ಜುಲೈ ಹಾಗೂ ಆಗಸ್ಟ್​ನಲ್ಲಿ ಶಾಲಾ-ಕಾಲೇಜು ಆರಂಭಕ್ಕೆ ಹರಿಯಾಣ ಸರ್ಕಾರ ತೀರ್ಮಾನಿಸಿದೆ.

Comments are closed.