ರಾಷ್ಟ್ರೀಯ

ಚೆನ್ನೈನಲ್ಲಿ ಒಂದೇ ದಿನ 1,012 ಕೊರೋನಾ ಪ್ರಕರಣಗಳು ಪತ್ತೆ

Pinterest LinkedIn Tumblr


ಚೆನ್ನೈ (ಜೂ. 3): ಭಾರತದಲ್ಲಿ 5ನೇ ಹಂತದ ಲಾಕ್​ಡೌನ್ ಜಾರಿಗೊಳಿಸಲಾಗಿದೆ. ಆದರೆ, ಕೊರೋನಾ ಸೋಂಕಿನ ಸಂಖ್ಯೆ ಮಾತ್ರ ಹೆಚ್ಚುತ್ತಲೇ ಇದೆ. ನೆರೆಯ ರಾಜ್ಯವಾದ ತಮಿಳುನಾಡಿನಲ್ಲಿ ಇಂದು (ಬುಧವಾರ) ದಾಖಲೆಯ ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಇಂದು ಒಂದೇ ದಿನ 1,286 ಹೊಸ ಕೇಸುಗಳು ಪತ್ತೆಯಾಗುವ ಮೂಲಕ ತಮಿಳುನಾಡಿನ ಕೊರೋನಾ ಸೋಂಕಿತರ ಸಂಖ್ಯೆ 25,872ಕ್ಕೆ ಏರಿಕೆಯಾಗಿದೆ.

ತಮಿಳುನಾಡಿನ ಇಂದಿನ 1,286 ಕೊರೋನಾ ಕೇಸುಗಳ ಪೈಕಿ ಚೆನ್ನೈನಲ್ಲಿ ಅತಿಹೆಚ್ಚು ಸೋಂಕಿತ ಪ್ರಕರಣಗಳು ಪತ್ತೆಯಾಗಿವೆ. ಚೆನ್ನೈನಲ್ಲಿ ಇಂದು 1,012 ಸೋಂಕಿತ ಕೇಸ್​ಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ ಒಟ್ಟಾರೆ 2,560 ಕೊರೋನಾ ಪ್ರಕರಣಗಳು ಪತ್ತೆಯಾಗಿವೆ. ಈ ಮೂಲಕ ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 74,860ಕ್ಕೆ ಏರಿಕೆಯಾಗಿದೆ. ಭಾರತದಲ್ಲಿ ಇದುವರೆಗೂ 2.8 ಲಕ್ಷ ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದುವರೆಗೂ 5,834 ಸೋಂಕಿತರು ಕೊರೋನಾದಿಂದ ಸಾವನ್ನಪ್ಪಿದ್ದಾರೆ.

ಇಂದು ಕರ್ನಾಟಕದಲ್ಲಿ 267 ಕೊರೋನಾ ಪ್ರಕರಣಗಳು ಪತ್ತೆಯಾಗುವ ಮೂಲಕ ಸೋಂಕಿತರ ಸಂಖ್ಯೆ 4,063ಕ್ಕೆ ಏರಿಕೆಯಾಗಿದೆ. ಇಂದು ದಾವಣಗೆರೆಯ 80 ವರ್ಷದ ಕೊರೋನಾ ರೋಗಿಯ ಸಾವಿನ ಪ್ರಕರಣ ವರದಿಯಾಗುವ ಮೂಲಕ ಕೊರೋನಾದಿಂದ ಸಾವನ್ನಪ್ಪಿದವರ ಸಂಖ್ಯೆ 53ಕ್ಕೆ ಏರಿಕೆಯಾಗಿದೆ.

Comments are closed.