ರಾಷ್ಟ್ರೀಯ

ಕೊರೊನಾ ಪರೀಕ್ಷೆಯ ಸ್ಯಾಂಪಲ್‌ಗಳನ್ನ ಎಳೆದೊಯ್ದ ಕೋತಿಗಳು!

Pinterest LinkedIn Tumblr


ಮೀರತ್‌: ಕೊರೊನಾ ಪರೀಕ್ಷೆಗಾಗಿ ಶಂಕಿತರಿಂದ ಸಂಗ್ರಹಿಸಿದ್ದ ಸ್ಯಾಂಪಲ್‌ಗಳನ್ನ ಕೋತಿಗಳು ಹೊತ್ತೊಯ್ದ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ ನಡೆದಿದೆ. ಲ್ಯಾಬ್ ಟೆಕ್ನಿಷಿಯನ್ ಮೇಲೆ ದಾಳಿ ಮಾಡಿದ ಮಂಗಗಳು ಸ್ಯಾಂಪಲ್‌ಗಳನ್ನ ಹೊತ್ತುಕೊಂಡು ಹೋಗಿದೆ.

ಮೀರತ್‌ ಮೆಡಿಕಲ್‌ ಕಾಲೇಜಿನಲ್ಲಿಈ ಘಟನೆ ನಡೆದಿದ್ದು, ಲ್ಯಾಬ್‌ ಟೆಕ್ನಿಷಿಯನ್‌ ಮೂರು ಕೊರೊನಾ ಶಂಕಿತರ ಸ್ಯಾಂಪಲ್‌ಗಳನ್ನ ಲ್ಯಾಪ್‌ಗೆ ತೆಗೆದುಕೊಂಡು ಹೋಗುತ್ತಿದ್ದರು. ಈ ವೇಳೆ ಗುಂಪಾಗಿ ಬಂದು ದಾಳಿ ಮಾಡಿದ ಮಂಗಗಳು ಆತನ ಕೈಯಲ್ಲಿದ್ದ ಸ್ಯಾಂಪಲ್‌‌ಗಳನ್ನ ಎಳೆದುಕೊಂಡು ಹೋಗಿವೆ. ಇನ್ನು ಈ ಘಟನೆಯಿಂದ ಸ್ಥಳೀಯರಲ್ಲಿ ಆತಂಕ ಮೂಡಿದ್ದು, ಕೊರೊನಾ ಸೋಂಕು ಹರಡುವ ಭೀತಿ ಎದುರಾಗಿದೆ.

ಇನ್ನು ಮಂಗಗಳು ಮರದ ಮೇಲೆ ಕುಳಿತು ಸ್ಯಾಂಪಲ್‌ ಕಿಟ್‌ನ್ನ ಜಗಿಯುತ್ತಿರುವ ವಿಡಿಯೋ ವೈರಲ್‌ ಆಗಿದ್ದು ಸ್ಥಳೀಯರನ್ನ ಮತ್ತಷ್ಟು ಭಯಭೀತಗೊಳಿಸಿದೆ. ಘಟನೆ ಬಳಿಕ ಶಂಕಿತರಿಂದ ಮತ್ತೆ ಸ್ಯಾಂಪಲ್ಸ್‌ಗಳನ್ನ ಕಲೆಕ್ಟ್ ಮಾಡಲಾಗಿದ್ದು ಪರೀಕ್ಷೆಗೆ ಕಳುಹಿಸಿ ಕೊಡಲಾಗಿದೆ.

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿರುವ ಮೆಡಿಕಲ್‌ ಕಾಲೇಜಿನ ವೈದ್ಯರೊಬ್ಬರು, ಈ ರೀತಿಯ ಘಟನೆ ಇದೇ ಮೊದಲೇನಲ್ಲ. ಇಲ್ಲಿ ಇಂತಹ ಘಟನೆ ಅನೇಕ ಬಾರಿ ನಡೆದಿದೆ. ಕೋತಿಗಳು ಆಸ್ಪತ್ರೆಯೊಳಗೆ ಬಂದು ಸಮಸ್ಯೆಯನ್ನ ಉಂಟು ಮಾಡುತ್ತದೆ ಎಂದು ತಿಳಿಸಿದ್ದಾರೆ. ಇನ್ನು ಜಿಲ್ಲಾ ಆರೋಗ್ಯ ಇಲಾಖೆ ಈ ಸಂಬಂಧ ತನಿಖೆಗೆ ಆದೇಶಿಸಿದ್ದು, ಕೋತಿಗಳನ್ನ ಹಿಡಿಯಲು ಅರಣ್ಯಾ ಇಲಾಖೆ ಮುಂದಾಗಿದೆ.

Comments are closed.