ರಾಷ್ಟ್ರೀಯ

ಕ್ವಾರಂಟೈನ್ ಕೇಂದ್ರದಲ್ಲಿರುವ ವಲಸೆ ಕಾರ್ಮಿಕನಿಗೆ ಹೊತ್ತಿಗೆ 40 ರೋಟಿ, 10 ಪ್ಲೇಟ್‌ ಅನ್ನ ಬೇಕು!

Pinterest LinkedIn Tumblr


ಪಟನಾ: ಊಟ ಇಲ್ಲದೇ ವಲಸೆ ಕಾರ್ಮಿಕರು ಸತ್ತ ಸುದ್ದಿಗಳು ಸದ್ದು ಮಾಡುತ್ತಿರುವಾಗಲೇ ಬಿಹಾರದ ಕ್ವಾರಂಟೈನ್‌ ಕೇಂದ್ರದಲ್ಲಿ23 ವರ್ಷದ ಕಾರ್ಮಿಕನೊಬ್ಬ ಪ್ರತಿ ದಿನ ಬೆಳಗಿನ ಉಪಾಹಾರಕ್ಕೆ 40 ರೋಟಿ ಮತ್ತು ಮಧ್ಯಾಹ್ನ ಬರೋಬ್ಬರಿ 10 ಪ್ಲೇಟ್‌ ಅನ್ನ ಊಟ ಮಾಡುತ್ತಿರುವ ಸೋಜಿಗದ ಪ್ರಕರಣ ವರದಿಯಾಗಿದೆ.

ರಾಜಸ್ಥಾನದಿಂದ ಮರು ವಲಸೆ ಬಂದು ಬಿಹಾರದ ಬಕ್ಸರ್‌ನ ಮಂಝ್ವಾರಿ ಕ್ವಾರಂಟೇನ್‌ ಕೇಂದ್ರದಲ್ಲಿಇರುವ ಅನುಪ್‌ ಓಝಾ ಅಧಿಧಿಕಾರಿಗಳನ್ನು ದಿಕ್ಕೆಡಿಸಿರುವ ಕಾರ್ಮಿಕ.

ಹತ್ತು ಕಾರ್ಮಿಕರು ತಿನ್ನುವ ಅನ್ನವನ್ನು ಈತ ಒಬ್ಬನೇ ಸೇವಿಸುತ್ತಿದ್ದು ಈತನಿಗೆ ಆಹಾರ ಪೂರೈಸುವವರು ಬಸವಳಿದಿದ್ದಾರೆ.

”ಓಝಾ ತಿನ್ನುವ ದೈತ್ಯ ಸ್ವರೂಪದ ಬಗ್ಗೆ ಕ್ವಾರಂಟೈನ್‌ ಕೇಂದ್ರದ ಅಧಿಕಾರಿಗಳು ತಿಳಿಸಿದಾಗ ಮೊದಲು ನಮಗೆ ನಂಬಿಕೆಯೇ ಬರಲಿಲ್ಲ. ಖುದ್ದು ನೋಡೋಣ ಎಂದು ಕೇಂದ್ರಕ್ಕೆ ಬಂದಾಗ ಆ ದಿನ ಒಂದೇ ಊಟಕ್ಕೆ 85 ರೋಟಿ ತಿಂದು ಮುಗಿಸಿದ. ಆಗ ನಮ್ಮ ಕಣ್ಣುಗಳನ್ನೇ ನಾವು ನಂಬಲು ಸಾಧ್ಯವಾಗಲಿಲ್ಲ. ಒಬ್ಬ ವ್ಯಕ್ತಿಗೆ ಅಷ್ಟೊಂದು ಸಂಖ್ಯೆಯ ರೊಟ್ಟಿ ಲಟ್ಟಿಸುವ ಶ್ರಮದಿಂದ ಅಡುಗೆ ಭಟ್ಟರು ಕೂಡ ಬಸವಳಿದಿದ್ದಾರೆ,” ಎಂದು ಬಿಡಿಒ ಎಕೆ ಸಿಂಗ್‌ ಹೇಳಿದ್ದಾರೆ.

ಕೊರೊನಾ ವೈರಸ್ ಲಾಕ್‌ಡೌನ್‌ನಿಂದಾಗಿ ವಲಸೆ ಕಾರ್ಮಿಕರು ಅತಿ ಹೆಚ್ಚು ತೊಂದರೆಯನ್ನು ಅನುಭವಿಸುತ್ತಿದ್ದಾರೆ. ಈ ಮಧ್ಯೆ ಇಂತಹ ಸುದ್ದಿ ಬಿತ್ತರಿಸಿದೆ.

ಅಧಿಕಾರಿಗಳು ಈಗ ಪ್ರಸಂಗವನ್ನು ವಿಚಾರಿಸುತ್ತಿದ್ದಾರೆ. 10 ದಿನಗಳ ಹಿಂದೆ ಅನುಪ್‌ ಓಝಾ ಕ್ವಾರಂಟೈನ್ ಕೇಂದ್ರಕ್ಕೆ ಆಗಮಿಸಿದ್ದರು ಜೀವನೋಪಾಯಕ್ಕಾಗಿ ರಾಜಸ್ಥಾನಕ್ಕೆ ತೆರಳಿದ್ದರು. ಆದರೆ ನಾಲ್ಕನೇ ಹಂತದ ಲಾಕ್‌ಡೌನ್‌ ವೇಳೆ ಬಿಹಾರಕ್ಕೆ ಮರಳಿದ್ದರು.

Comments are closed.