ರಾಷ್ಟ್ರೀಯ

ಭಾರತದಲ್ಲಿ ಕಳೆದ 24 ಗಂಟೆಯಲ್ಲಿ 83 ಸಾವು, 2644 ಹೊಸ ಕೊರೊನಾ ವೈರಸ್ ಪ್ರಕರಣಗಳು!

Pinterest LinkedIn Tumblr


ನವದೆಹಲಿ: ಮೂರನೇ ಹಂತದ ಲಾಕ್‌ಡೌನ್‌ ಜಾರಿಯಾಗಲು ದೇಶ ಸಜ್ಜಾಗುತ್ತಿರುವ ನಡುವೆಯೇ ಕೊರೊನಾ ಸೋಂಕಿತರ ಸಂಖ್ಯೆ ಪ್ರತಿನಿತ್ಯ ಏರುತ್ತಲೇ ಇದೆ. ಕಳೆದ 24 ಗಂಟೆಯಲ್ಲಿ ಭಾರತದಲ್ಲಿ ಒಟ್ಟು 2,644 ಕೊರೊನಾ ಪ್ರಕರಣ ದೃಢಪಟ್ಟಿದೆ. ಅಲ್ಲದೆ ಇದೇ ಸಮಯದಲ್ಲಿ ಒಟ್ಟು 83 ಕೊರೊನಾ ರೋಗಿಗಳು ಸಾವನಪ್ಪಿದ್ದಾರೆ ಎಂದು ಕೆಂದ್ರ ಆರೋಗ್ಯ ಸಚಿವಾಲಯ ಮಾಹಿತಿ ನೀಡಿದೆ.

ಸದ್ಯ ದೇಶದಲ್ಲಿ ಒಟ್ಟು 39,980 ಸೋಂಕು ಪ್ರಕರಣ ದೃಢಪಟ್ಟಿದ್ದು, 28046 ಸಜೀವ ಪ್ರಕರಣಗಳಿವೆ. 10,663 ರೋಗಿಗಳು ಈವರೆಗೆ ಗುಣಮುಖರಾಗಿದ್ದಾರೆ. ಹಾಗೇ 1301 ರೋಗಿಗಳು ಇಷ್ಟರವರೆಗೆ ಸಾವನಪ್ಪಿದ್ದಾರೆ. ಆರಂಭಕ್ಕೆ ಹೋಲಿಸಿದರೆ ಸೋಂಕಿತರು ಹಾಗೂ ಸಾವನಪ್ಪುವವರ ಸಂಖ್ಯೆ ಭಾರತದಲ್ಲಿ ಕಡಿಮೆ ಇದೆ. ಆದರೂ ಕೂಡ ಪ್ರತಿ ನಿತ್ಯ ಸೋಂಕು ಪ್ರಕರಣ ಬೆಳಕಿಗೆ ಬರುತ್ತಲೇ ಇದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೊರೊನಾ ನಿಯಂತ್ರಣಕ್ಕೆ ಹರಸಾಹಸ ಪಡುತ್ತಿವೆ.

ಅತೀ ಹೆಚ್ಚು ಕೊರೊನಾ ಪ್ರಕರಣ ದೃಢಪಟ್ಟಿರುವ ರಾಜ್ಯವಾದ ಮಹಾರಾಷ್ಟ್ರದಲ್ಲಿ ಒಟ್ಟು 12,296 ಪ್ರಕರಣಗಳು ದಾಖಲಾಗಿದ್ದು, ಈವರೆಗೆ 521 ಜನ ಸಾವನಪ್ಪಿದ್ದಾರೆ. ಹಾಗೇ ಗುಜರಾತ್‌ನಲ್ಲಿ 5054, ದೆಹಲಿ 3738, ರಾಜಸ್ತಾನ 2720, ತಮಿಳುನಾಡು 2757, ಮಧ್ಯ ಪ್ರದೇಶ 2788, ಆಂಧ್ರಪ್ರದೇಶ 1525, ತೆಲಂಗಾಣ 1044 ಸೋಂಕಿತ ಪ್ರಕರಣಗಳಿವೆ.

Comments are closed.