ರಾಷ್ಟ್ರೀಯ

ಇಂದಿನಿಂದ ಹಣ ವಿತ್​ಡ್ರಾ ಮಾಡಲು ಹೊಸ ನಿಯಮ ಜಾರಿ!

Pinterest LinkedIn Tumblr


ಲಾಕ್​ಡೌನ್​ ಅವಧಿ ವೇಳೆ ಜನರು ಬ್ಯಾಂಕ್​ಗೆ ಬರುವುದನ್ನು ತಡೆಯಲು ಭಾರತೀಯ ಬ್ಯಾಂಕ್​ಗಳ ಸಂಘ ಹೊಸ ನಿಯಮ ಜಾರಿಗೆ ತಂದಿದೆ. ಹೊಸ ನಿಯಮ ಸೋಮವಾರದಿಂದ ಜಾರಿಗೆ ಬರಲಿದೆ.

ಹೊಸ ನಿಯಮದ ಅಡಿಯಲ್ಲಿ ಎಲ್ಲರಿಗೂ ಹಣ ತೆಗೆಯಲು ಅವಕಾಶ ಇರುವುದಿಲ್ಲ. ಬ್ಯಾಂಕ್​ ಖಾತೆ ಸಂಖ್ಯೆ ಕೊನೆಯಲ್ಲಿ 0 ಅಥವಾ 1 ಇದ್ದರೆ ಅವರು ಮೇ 4ರಂದು ಬ್ಯಾಂಕ್​ನಲ್ಲಿ ಹಣ ತೆಗೆಯಬಹುದು. 2 ಮತ್ತು 3 ನಂಬರ್​ ಇದ್ದರೆ ಮೇ 5ರಂದು ಹಣ ತೆಗೆಯಬಹುದು. 4 ಮತ್ತು 5 ಸಂಖ್ಯೆ ಇದ್ದರೆ ಮೇ 6ರಂದು ಹಣ ತೆಗೆಯಬಹುದು.

ಇನ್ನು, ಬ್ಯಾಂಕ್ ಖಾತೆಯ ಕೊನೆಯಲ್ಲಿ 6 ಮತ್ತು 7 ಸಂಖ್ಯೆ ಹೊಂದಿರುವವರು ಮೇ 8ರಂದು ಹಣ ತೆಗೆಯಬಹುದು. 8 ಸಂಖ್ಯೆ ಮೇ 9ರಂದು ಹಾಗೂ 9 ನಂಬರ್​ ಹೊಂದಿರುವವರು ಮೇ 11ರಂದು ಹಣ ತೆಗೆಯಬಹುದಾಗಿದೆ.

ಕೊರೋನಾ ವೈರಸ್​ ಹರಡುತ್ತಿರುವ ಹಿನ್ನೆಲೆಯಲ್ಲಿ ಈಗಾಗಲೇ ಆನ್​ಲೈನ್​ ಪೇಮೆಂಟ್​ಗೆ ಹೆಚ್ಚು ಒತ್ತು ನೀಡುವಂತೆ ಸರ್ಕಾರ ಕೇಳಿದೆ. ಇದರ ಭಾಗವಾಗಿ ಸರ್ಕಾರ ಈ ಕ್ರಮ ಕೈಗೊಂಡಿದೆ. ಮೇ 12ರ ನಂತರ ಎಲ್ಲರೂ ಬ್ಯಾಂಕ್​ಗೆ ತೆರಳಿ ಹಣ ತೆಗೆಯಬಹುದಾಗಿದೆ.

Comments are closed.