ರಾಷ್ಟ್ರೀಯ

ದೇಶದಲ್ಲಿ ಮೇ 16ರ ನಂತರ ಹೊಸ ಕೊರೊನಾ ಪ್ರಕರಣಗಳಿರುವುದಿಲ್ಲ

Pinterest LinkedIn Tumblr


ನವದೆಹಲಿ: ಭಾರತದಲ್ಲಿ ಮೇ 16 ರ ನಂತರ ಕೊರೊನಾ ಹೊಸ ಪ್ರಕರಣಗಳಿರಲ್ಲ ಎಂದು ನೂತನ ಸಂಶೋಧನಾ ಅಧ್ಯಯನ ವರದಿಯೊಂದು ಹೇಳಿದೆ.ವೈದ್ಯಕೀಯ ನಿರ್ವಹಣೆ ಸಂಬಂಧಿಸಿದ ಅಧಿಕಾರಿ ವಿ.ಕೆ ಪಾಲ್ ನೇತೃತ್ವದಲ್ಲಿ ನಡೆದ ಅಧ್ಯಯನದಲ್ಲಿ ಈ ಅಂಶವನ್ನು ಪ್ರಸ್ತಾಪಿಸಲಾಗಿದೆ.

ಲಾಕ್ಡೌನ್ ಮೂಲಕ ಕೊರೊನಾ ಸೋಂಕು ಹರಡುವ ಸರಪಳಿ ಸ್ಥಗಿತಗೊಂಡಿದ್ದು , ದ್ವಿಗುಣಗೊಳ್ಳುವ ಅವಧಿ ಹೆಚ್ಚಾಗಿದೆ.ಇನ್ನು ನಿರಂತರ ಪರೀಕ್ಷೆಗಳಿಂದ ಸೋಂಕಿತರ ಪ್ರಮಾಣದ ಮೇ 16 ರೊಳಗೆ ಹೆಚ್ಚಾಗಲಿದ್ದು ಆ ಬಳಿಕ ಹೊಸ ಕೊರೊನಾ ಪ್ರಕರಣಗಳ ಪತ್ತೆ ಸಾಧ್ಯತೆ ಕಡಿಮೆ ಎನ್ನಲಾಗಿದೆ.ಈ ಅಧ್ಯಯನ ಹೇಳುವಂತೆ ಮೇ 3 ರ ನಂತರ ಪ್ರತಿದಿನಕ್ಕೆ 1500 ಹೊಸ ಪ್ರಕರಣಗಳು ಕಾಣ ಸಿಗುವ ಸಾಧ್ಯತೆ ಇದೆ,ಆದರೆ ಈ ಸಂಖ್ಯೆ ಮೇ 12 ರ ನಂತರ 1000 ಕ್ಕೆ ಇಳಿಕೆಯಾಗಲಿದೆ ಎಂದು ಅಧ್ಯಯನ ಕಂಡುಕೊಂಡಿದೆ.ಈ ಹಿನ್ನಲೆಯಲ್ಲಿ ಭಾರತದಲ್ಲಿ ಸೋಂಕಿತರ ಸಂಖ್ಯೆ 35,000 ರ ವರೆಗೆ ಏರಿಕೆಯಾಗಬಹುದು ಆದರೆ ಮೇ 16 ರ ಬಳಿಕ ಹೊಸ ಪ್ರಕರಣಗಳ ಪತ್ತೆ ಸಾಧ್ಯತೆ ಕಡಿಮೆ ಎನ್ನಲಾಗುತ್ತಿದೆ.

ಆದರೆ ಈ ವರದಿಯ ನಿಕರತೆ ಬಗ್ಗೆ ಹಲವು ತಜ್ಞರು ಅನುಮಾನ ವ್ಯಕ್ತಪಡಿಸಿದ್ದಲ್ಲದೆ, ಇದನ್ನು ಸಾರಾಸಗಟಾಗಿ ನಿರಾಕರಿಸಿದ್ದಾರೆ.ಮೇ 16 ನಂತರ ಕೊರೊನಾ ನಿಯಂತ್ರಣಕ್ಕೆ ಬರುವುದಾದರೆ ಅದರ ಲಕ್ಷಣಗಳು ಈಗಾಗಲೇ ಕಾಣಬೇಕಿತ್ತು ಬೇಕಿತ್ತು. ಆದರೆ ಈಗ ಮಹಾರಾಷ್ಟ್ರ, ದೆಹ,ಲಿ ಗುಜರಾತ್ ನಲ್ಲಿ ಕೊರೊನಾ ಸೋಂಕು ಗಣನೀಯ ಏರಿಕೆ ಕಂಡು ಬರುತ್ತಿದೆ. ಈ ಹಿನ್ನಲೆಯಲ್ಲಿ ಯಾವ ಆಧಾರದ ಮೇಲೆಈ ಸಂಶೋಧನೆ ನಡೆದಿದೆ ಗೊತ್ತಿಲ್ಲ ಎಂದು ಹೆಸರು ಹೇಳದ ತಜ್ಞರೊಬ್ಬರು ಟೀಕಿಸಿದ್ದಾರೆ.

Comments are closed.