ರಾಷ್ಟ್ರೀಯ

ಕೊರೋನಾ ಆರ್ಭಟಕ್ಕೆ ತಮಿಳುನಾಡಿನಲ್ಲಿ ಇಬ್ಬರು, ಪುಣೆಯಲ್ಲಿ ಓರ್ವ ಬಲಿ; ಭಾರತದಲ್ಲಿ ಒಟ್ಟು ಸಾವಿನ ಸಂಖ್ಯೆ 80ಕ್ಕೆ ಏರಿಕೆ; 3374 ಮಂದಿಗೆ ಸೋಂಕು

Pinterest LinkedIn Tumblr

ನವದೆಹಲಿ: ಭಾರತದಲ್ಲಿ ಕೊರೋನಾ ವೈರಸ್ ಆರ್ಭಟ ಎಂದಿನಂತೆ ಮುಂದುವರೆದಿದ್ದು, ತಮಿಳುನಾಡು ರಾಜ್ಯದಲ್ಲಿ ಇಬ್ಬರು ಹಾಗೂ ಪುಣೆಯಲ್ಲಿ ಒಬ್ಬರು ಸೋಂಕಿತ ವ್ಯಕ್ತಿಗಳು ಭಾನುವಾರ ಸಾವನ್ನಪ್ಪಿದ್ದಾರೆ. ಇದರಂತೆ ದೇಶದಲ್ಲಿ ವೈರಸ್ ನಿಂದಾಗಿ ಸಾವನ್ನಪ್ಪಿದವರ ಸಂಖ್ಯೆ 80ಕ್ಕೆ ಏರಿಕೆಯಾಗಿದ್ದು, 3374 ಮಂದಿ ಸೋಂಕಿನಿಂದ ಬಳಲುತ್ತಿದ್ದಾರೆಂದು ವರದಿಗಳು ತಿಳಿಸಿವೆ.

ತಮಿಳುನಾಡಿನ ಚೆನ್ನೈ ನಗರಲ್ಲಿ ಸೋಂಕಿನಿಂದ ಬಳಲುತ್ತಿದ್ದ 60 ವರ್ಷದ ಹಾಗೂ 71 ವರ್ಷದ ಇಬ್ಬರು ವ್ಯಕ್ತಿಗಳು ಸಾವನ್ನಪ್ಪಿದ್ದು, ಇದರಂತೆ ಆ ರಾಜ್ಯದಲ್ಲಿ ಸಾವನ್ನಪ್ಪಿದವರ ಸಂಖ್ಯೆ 5ಕ್ಕೆ ಏರಿಕೆಯಾಗಿದೆ ಎಂದು ತಮಿಳುನಾಡು ರಾಜ್ಯದ ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ಪುಣೆ ಸಸ್ಸೂನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ 52 ವರ್ಷದ ವ್ಯಕ್ತಿಯೊಬ್ಬರು ಭಾನುವಾರ ಕೊನೆಯುಸಿರೆಳೆದಿದ್ದಾರೆ. ಇದರಂತೆ ಪುಣೆಯಲ್ಲಿ ವೈರಸ್’ಗೆ ಬಲಿಯಾದವರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ ಎಂದು ಅಲ್ಲಿನ ಆರೋಗ್ಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ತಮಿಳುನಾಡಿನ ಇಬ್ಬರು ವ್ಯಕ್ತಿಗಳು ಹಾಗೂ ಪುಣೆಯಲ್ಲಿ ಒಬ್ಬು ಸಾವಿನ ಪ್ರಕರಣಗಳೊಂದಿಗೆ ಭಾರತದಲ್ಲಿ ಕೊರೋನಾ ವೈರಸ್ ನಿಂದ ಇದೂವರೆಗೂ 80 ಮಂದಿ ಸಾವನ್ನಪ್ಪಿದ್ದು, 3374 ಮಂದಿಯಲ್ಲಿ ಸೋಂಕು ಪತ್ತೆಯಾಗಿದೆ.

ಅತೀ ಹೆಚ್ಚು ಕೊರೋನಾ ಸೋಂಕಿತರನ್ನು ಹೊಂದಿರುವ ದೇಶಗಳ ಪೈಕಿ ಅಮೆರಿಕಾ ಮೊದಲ ಸ್ಥಾನದಲ್ಲಿದೆ. ಕೊರೋನಾ ವೈರಸ್ ಆರ್ಭಟಕ್ಕೆ ಅಮೆರಿಕಾ ಈಗಾಗಲೇ ಕಂಗಾಲಾಗಿದ್ದು. ಆ ರಾಷ್ಟ್ರದಲ್ಲಿ ದಿನದಿಂದ ದಿನಕ್ಕೆ ಸಾವಿನ ಸಂಖ್ಯೆ ಏರುತ್ತಲೇ ಇದೆ. ಅಮೆರಿಕಾದಲ್ಲಿ ಸೋಂಕಿತರ ಸಂಖ್ಯೆ 3,11,635ಕ್ಕೆ ಏರಿಕೆಯಾಗಿದೆ, ಅಲ್ಲದೆ, 8454 ಮಂದಿ ಸಾವನ್ನಪ್ಪಿದ್ದಾರೆ.

Comments are closed.