ರಾಷ್ಟ್ರೀಯ

ಪ್ರೇಮಿಗಳನ್ನು ಹೆದರಿಸಿ, ಓಡಿಸಿಕೊಂಡು ಹೋದ ಭಜರಂಗದಳದ ಕಾರ್ಯಕರ್ತರು

Pinterest LinkedIn Tumblr


ಅಹಮದಾಬಾದ್: ಪ್ರೇಮಿಗಳ ದಿನದೊಂದು ಶಾಲಾ ಕಾಲೇಜುಗಳಿಗೆ ಹೋಗದೆ ಪಾರ್ಕ್ ಹಾಗೂ ರೋಡಿನಲ್ಲಿ ತಿರುಗುತ್ತಿದ್ದ ಯುವತಿ ಮತ್ತು ಯುವಕರನ್ನು ಭಜರಂಗದಳದ ಕಾರ್ಯಕರ್ತರು ಓಡಿಸಿಕೊಂಡು ಹೋಗಿರುವ ಘಟನೆ ಗುಜುರಾತ್‍ನ ಅಹಮದಾಬಾದ್‍ನಲ್ಲಿ ನಡೆದಿದೆ.

ಅಹಮದಾಬಾದ್ ರಿವರ್ ಫ್ರಂಟ್‍ನಲ್ಲಿ ಕುಳಿತಿದ್ದ ಯುವಕ-ಯುವತಿಯರನ್ನು ಭಜರಂಗದಳದ ಕಾರ್ಯಕರ್ತರು ಹೆದರಿಸಿ ಓಡಿಸಿದ್ದಾರೆ. ಮೂರು ಗುಂಪುಗಳಾಗಿ ಕೇಸರಿ ಶಾಲು ಮತ್ತು ಜೈ ಶ್ರೀರಾಮ್ ಘೋಷಣೆ ಕೂಗುತ್ತಾ ಬೈಕಿನಲ್ಲಿ ಬಂದ ಕಾರ್ಯಕರ್ತರು ವಾಡಜ್ ಮತ್ತು ಉಸ್ಮಾನ್‍ಪುರದಲ್ಲಿ ರಿವರ್ ಫ್ರಂಟ್‍ನಲ್ಲಿ ಕುಳಿತಿದ್ದ ಪ್ರೇಮಿಗಳನ್ನು ಓಡಿಸಿದ್ದಾರೆ.

ಈ ವಿಚಾರವಾಗಿ ಮಾತನಾಡಿರುವ ಭಜರಂಗದಳದ ಉಪಾಧ್ಯಕ್ಷ ನಿಕುಂಜ್ ಪರೇಖ್, ನಮ್ಮ ಭಾರತೀಯ ಸಂಸ್ಕೃತಿಯ ಮೇಲೆ ಪಾಶ್ಚಿಮಾತ್ಯ ಸಂಸ್ಕೃತಿ ಪ್ರಭಾವ ಬೀರಲು ನಾವು ಬಿಡುವುದಿಲ್ಲ. ಈ ಪ್ರೇಮಿಗಳ ದಿನಾಚರಣೆ ಎಂಬುದು ಪಾಶ್ಚಿಮಾತ್ಯ ಸಂಸ್ಕøತಿಯಾಗಿದೆ. ಅದೂ ಅಲ್ಲದೇ ಇದು ಲವ್ ಜಿಹಾದ್ ಜಾಸ್ತಿ ಆಗಲು ಕಾರಣವಾಗಿದೆ. ಈ ಕಾರಣಕ್ಕೆ ನಾವು ಇದನ್ನು ವಿರೋಧ ಮಾಡುತ್ತಿದ್ದೇವೆ ಎಂದು ಹೇಳಿದ್ದಾರೆ.

ಪ್ರೇಮಿಗಳ ದಿನಾಚರಣೆಯ ನಂತರ ಹಿಂದೂ ಹುಡುಗಿಯರು ಬೇರೆ ಧರ್ಮದ ಹುಡುಗರ ಜೊತೆ ಓಡಿಹೋಗಿ ಮದುವೆಯಾಗುವ ಪ್ರಕರಣಗಳು ಜಾಸ್ತಿಯಾಗಿವೆ. ಈ ಕಾರಣದಿಂದಲೇ ಭಜರಂಗದಳ ಪ್ರೇಮಿಗಳ ದಿನಾಚರಣೆಯನ್ನು ವಿರೋಧ ಮಾಡುತ್ತಿದೆ ಎಂದು ನಿಕುಂಜ್ ಪರೇಖ್ ತಿಳಿಸಿದ್ದಾರೆ.

ಭಜರಂಗದಳದ ಈ ಕೆಲಸದ ವಿರುದ್ಧ ಯುವಕರು ಆಕ್ರೋಶ ವ್ತಕ್ತಪಡಿಸಿದ್ದು, ಎಲ್ಲರಿಗೂ ಅವರ ವೈಯಕ್ತಿಕ ಜೀವನದಲ್ಲಿ ಅವರಿಗೆ ಬೇಕಾದುದ್ದನ್ನು ಆಯ್ಕೆ ಮಾಡಿಕೊಳ್ಳುವ ಹಕ್ಕು ಇದೆ. ಆದರೆ ಸಂಸ್ಕೃತಿ ಎಂಬ ಹೆಸರಿನಲ್ಲಿ ಇವರು ಈ ರೀತಿ ಗೂಂಡಾಗಿರಿ ಮಾಡುವುದು ಸರಿಯಲ್ಲ ಎಂದು ಕೆಲ ಯುವಕರ ಕಿಡಿಕಾರಿದ್ದಾರೆ.

Comments are closed.