ರಾಷ್ಟ್ರೀಯ

ಕಳೆದ 20 ದಿನಗಳಿಂದ ಹಾರ್ದಿಕ್ ಪಟೇಲ್ ಕಾಣೆಯಾಗಿದ್ದಾರೆ: ಪತ್ನಿ ಅಳಲು

Pinterest LinkedIn Tumblr


ಗುಜರಾತ್: ಪಾಟೀದಾರ್ ಸಮುದಾಯದ ನಾಯಕ ಹಾರ್ದಿಕ್ ಪಟೇಲ್ ಕಳೆದ 20 ದಿನಗಳಿಂದ ಕಾಣೆಯಾಗಿದ್ದಾರೆ ಎಂದು ಅವರ ಪತ್ನಿ ಕಿಂಜಾಲ್ ಪಟೇಲ್ ಆರೋಪಿದ್ದಾರೆ.

ಗುಜರಾತ್ ಸರ್ಕಾರವು ತನ್ನ ಗಂಡನನ್ನು ಗುರಿಯಾಗಿಸಿಕೊಂಡಿದ್ದು, ಕಳೆದ 20 ದಿನಗಳಿಂದ ಅವರು ಕಾಣೆಯಾಗಿದ್ದಾರೆ. ಅವರು ಇರುವ ಸ್ಥಳದ ಬಗ್ಗೆ ನಮಗೆ ಯಾವುದೇ ಮಾಹಿತಿಯಿಲ್ಲ ಎಂದು ಸಾಮಾಜಿಕ ಜಾಲತಾಣದಲ್ಲಿ ವಿಡಿಯೋವೊಂದನ್ನು ಶೇರ್ ಮಾಡಿದ್ದಾರೆ.

2017 ರಲ್ಲಿ ಈ ಗುಜರಾತ್ ಸರ್ಕಾರವು ಪಾಟಿದಾರ್‌ ಸಮೂದಾಯದ ಮೇಲಿನ ಎಲ್ಲಾ ಪ್ರಕರಣಗಳನ್ನು ಹಿಂದಕ್ಕೆ ತೆಗೆದುಕೊಳ್ಳಲಾಗುವುದು ಎಂದು ಹೇಳಿತ್ತು. ಆದರೂ ಅವರು ಹಾರ್ದಿಕ್‌ ನನ್ನು ಮಾತ್ರ ಏಕೆ ಗುರಿಯಾಗಿಸಿಕೊಂಡಿದ್ದಾರೆ, ಬಿಜೆಪಿಗೆ ಸೇರಿದ ಪಾಟೀದಾರ್ ಸಮೂದಾಯದ ಇತರ ಇಬ್ಬರು ನಾಯಕರನ್ನು ಏಕೆ ಗುರಿಯಾಗಿರಿಸಿಕೋಡಿಲ್ಲ ಎಂದು ಪ್ರಶ್ನಿಸಿದ್ದಾರೆ. ಹಾರ್ದಿಕ್ ಪಟೇಲ್ ಸಾರ್ವಜನಿಕರ ಸಮಸ್ಯೆಗಳನ್ನು ಮುನ್ನೆಲೆಗೆ ತರುವುದನ್ನು ಈ ಸರ್ಕಾರ ಬಯಸುವುದಿಲ್ಲ ಎಂದು ಕಿಂಜಾಲ್ ನೇರವಾಗಿ ಆರೋಪಿಸಿದ್ದಾರೆ.
ಅದಾಗ್ಯೂ ಫೆಬ್ರವರಿ 11 ರಂದು ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಜಯಗಳಿಸಿದಾಗ ಹಾರ್ದಿಕ ಪಟೆಲ್ ತಮ್ಮ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಅಭಿನಂದಿಸಿದ್ದರು.

Comments are closed.