ರಾಷ್ಟ್ರೀಯ

ಕೊರೊನಾ ವೈರಸ್‌ ಗೆ ಮೃತಪಟ್ಟವರ ಸಂಖ್ಯೆ 1400ಕ್ಕೆ ಏರಿಕೆ: ಮೂವರು ಭಾರತೀಯರಲ್ಲಿ ಸೋಂಕು ಪತ್ತೆ

Pinterest LinkedIn Tumblr


ಹೊಸದಿಲ್ಲಿ: ಕೊರೊನಾ ವೈರಸ್‌ಗೆ ಸಂಬಂಧಿಸಿದಂತೆ ಹೆಚ್ಚಿನ ನಿಗಾ ವಹಿಸುವಂತೆ ಕೇಂದ್ರ ಸರಕಾರ ಎಲ್ಲ ಇಲಾಖೆಗಳಿಗೆ ಪ್ರಮುಖವಾಗಿ ನಾಗರಿಕ ವಿಮಾಯಾನ ಸಚಿವಾಲಯಕ್ಕೆ ಸೂಚನೆ ನೀಡಿದೆ.

ಕೊರೊನಾ ವೈರಸ್‌ ದಿನದಿಂದ ದಿನಕ್ಕೆ ಎಲ್ಲೆಡೆ ಹಬ್ಬುತ್ತಿದ್ದು, ಸಾವಿನ ಸಂಖ್ಯೆ ಕೂಡ ಹೆಚ್ಚಾಗುತ್ತಿದೆ. ಇದುವರೆಗೆ ಹೆಚ್ಚುವರಿಯಾಗಿ 218 ಮಂದಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಈ ಪೈಕಿ ಮೂವರು ಭಾರತೀಯರಿಗೆ ಸೋಂಕು ಇರುವುದು ದೃಢಪಟ್ಟಿದೆ. ಜಪಾನ್‌ ನೌಕೆ ಡೈಮಂಡ್‌ ಪ್ರಿನ್ಸಸ್‌ನಲ್ಲಿ ಬಂದ ಮೂವರು ನೌಕಾ ಸಿಬ್ಬಂದಿಗೆ ಈ ಸೋಂಕು ತಗುಲಿದೆ ಎಂದು ಮೂಲಗಳು ತಿಳಿಸಿವೆ.

ಕೊರೊನಾ ವೈರಸ್‌ನಿಂದಾಗಿ ಇದುವರೆಗೆ ಮೃತಪಟ್ಟವರ ಸಂಖ್ಯೆ 1400 ತಲುಪಿದೆ.

ಪ್ರಮುಖವಾಗಿ ಚೀನಾ, ಜಪಾನ್‌, ದಕ್ಷಿಣ ಕೊರಿಯಾದಿಂದ ಆಗಮಿಸುವ ಪ್ರಯಾಣಿಕರನ್ನು ತೀವ್ರ ತಪಾಸಣೆಗೊಳಪಡಿಸಬೇಕು ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ಅಧಿಕಾರಿಗಳಿಗೆ ಸೂಚಿಸಲಾಗಿದೆ.

ಕೊರೊನಾ ವೈರಸ್ ಸಂಬಂಧ ಈಗಾಗಲೇ ಕೈಗೊಳ್ಳಲಾಗಿರುವ ಮುನ್ನೆಚ್ಚರಿಕಾ ಕ್ರಮಗಳ ಕುರಿತು ನಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಖುದ್ದು ಮಾಹಿತಿ ಪಡೆಯುತ್ತಿದ್ದಾರೆ.

ಚೀನಾ, ಜಪಾನ್ ರಾಷ್ಟ್ರಗಳಿಂದ ಆಗಮಿಸಿರುವವರಿಂದ ಆರೋಗ್ಯಕ್ಕೆ ಸಂಬಂಧಿಸಿದಂತೆ ವಿಮಾನ ನಿಲ್ದಾಣಗಳಲ್ಲಿ ತಪಾಸಣೆಗೊಳಪಡಿಸಬೇಕು ಎಂದು ಹೇಳಲಾಗಿದೆ.

Comments are closed.