ರಾಷ್ಟ್ರೀಯ

ಕೊರೋನಾ ವೈರಸ್: ರೆಡ್ ಮಿ ನೋಟ್ 8 ಮೊಬೈಲ್ ದರ ಹೆಚ್ಚಳ

Pinterest LinkedIn Tumblr


ನವದೆಹಲಿ: ಚೀನಾವನ್ನು ತೀವ್ರ ಸ್ವರೂಪದಲ್ಲಿ ಬಾಧಿಸಿರುವ ಕೊರೋನಾ ವೈರಸ್ ಅಲ್ಲಿನ ಆರ್ಥಿಕ ಚಟುವಟಿಕೆಗಳ ಮೇಲೂ ಭಾರೀ ಹೊಡೆತವನ್ನು ನೀಡಿದೆ. ಚೀನಾದಲ್ಲಿ ಕಾಣಿಸಿಕೊಂಡಿರುವ ಕೊರೋನಾ ವೈರಸ್ ಬಾಧೆ ಜಗತ್ತಿನ ಮೊಬೈಲ್ ಮಾರುಕಟ್ಟೆಯ ಮೇಲೆ ತೀವ್ರ ಪರಿಣಾಮವನ್ನು ಬೀರಲು ಪ್ರಾರಂಭಿಸಿದೆ.

ಇದೀಗ ಕೊರೋನಾ ಬಿಸಿ ತಗುಲಿಸಿಕೊಂಡಿರುವ ಕಂಪೆನಿಗಳ ಪಟ್ಟಿಗೆ ಕ್ಸಿಯೋಮಿ ಸೇರ್ಪಡೆಗೊಂಡಿದೆ. ಕ್ಸಿಯೋಮಿ ತನ್ನ ಉತ್ಪನ್ನವಾಗಿರುವ ರೆಡ್ ಮಿ ನೋಟ್ 8 ಮೊಬೈಲ್ ಫೋನ್ ಗಳ ಬೆಲೆಯನ್ನು ಭಾರತದಲ್ಲಿ 500 ರೂಪಾಯಿ ಹೆಚ್ಚಿಸಿದೆ. ಆದರೆ ಈ ಬೆಲೆ ಏರಿಕೆ ತಾತ್ಕಾಲಿಕವಾಗಿದ್ದು ಪರಿಸ್ಥಿತಿ ಸರಿಹೋದ ಬಳಿಕ ಬೆಲೆ ಇಳಿಕೆ ಮಾಡುವುದಾಗಿ ಕಂಪೆನಿ ತನ್ನ ಪ್ರಕಟನೆಯಲ್ಲಿ ತಿಳಿಸಿದೆ.

ರೆಡ್ ಮಿ ನೋಟ್ 8ನ 4 ಜಿಬಿ + 64 ಜಿಬಿ ಮಾದರಿಗೆ ಮಾತ್ರವೇ ಈ ಬೆಲೆ ಏರಿಕೆ ಅನ್ವಯಿಸಲಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.

ಚೀನಾದ ವಿವಿಧ ಪ್ರಾಂತ್ಯಗಳು ಕೊರೋನಾ ಬಾಧೆಗೊಳಗಾಗಿ ಸಂಪೂರ್ಣ ಮುಚ್ಚಲ್ಪಟ್ಟ ಸ್ಥಿತಿಯಲ್ಲಿರುವುದರಿಂದ ಈ ಭಾಗಗಳಲ್ಲಿ ಯಾವುದೇ ರೀತಿಯ ಉತ್ಪಾದನೆಗಳು ಆಗುತ್ತಿಲ್ಲ. ಹಾಗಾಗಿ ಮೊಬೈಲ್ ತಯಾರಿಗೆ ಅಗತ್ಯವಿರುವ ಬಿಡಿಭಾಗಗಳು ಹಾಗೂ ಕಚ್ಛಾ ಸಾಮಾಗ್ರಿಗಳನ್ನು ಹೊಂದಿಸಿಕೊಂಡು ಬೇರೆ ಭಾಗದಲ್ಲಿ ಉತ್ಪಾದನೆ ಪ್ರಾರಂಭಿಸುವವರೆಗೆ ಈ ಸಮಸ್ಯೆ ಮುಂದುವರಿಯುವ ಸಾಧ್ಯತೆಗಳಿವೆ.

Comments are closed.