ರಾಷ್ಟ್ರೀಯ

ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಪ್ರಶ್ನೆ ಇಲ್ಲ: ಚುನಾವಣಾ ಆಯುಕ್ತ

Pinterest LinkedIn Tumblr


ನವದೆಹಲಿ: ವಿದ್ಯುನ್ಮಾನ ಮತಯಂತ್ರ(ಇವಿಎಂ)ವನ್ನು ತಿರುಚಲು ಸಾಧ್ಯವಿಲ್ಲ ಮತ್ತೆ ಬ್ಯಾಲೆಟ್ ಪೇಪರ್ ಬಳಕೆ ಮಾಡುವ ಪ್ರಶ್ನೆಯೂ ಇಲ್ಲ ಎಂದು ಮುಖ್ಯ ಚುನಾವಣಾ ಆಯುಕ್ತ ಸುನೀಲ್ ಆರೋರಾ ಬುಧವಾರ ಸ್ಪಷ್ಟಪಡಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ಚುನಾವಣೆಯಲ್ಲಿ ಮತ್ತೆ ಬ್ಯಾಲೆಟ್ ಪೇಪರ್ ಉಪಯೋಗಿಸುವ ಪ್ರಶ್ನೆಯೇ ಬರುವುದಿಲ್ಲ ಎಂದರು. ಇವಿಎಂಗಳ ಬಗ್ಗೆ ದೇಶದಲ್ಲಿ ಬಹಳ ದೊಡ್ಡ ಮಟ್ಟದ ಚರ್ಚೆ, ವಿವಾದ ದೊಡ್ಡಮಟ್ಟದಲ್ಲಿ ಪ್ರಾರಂಭವಾಗಿರುವಾಗಲೇ ಅವರು ಈ ಸ್ಪಷ್ಟಣೆ ನೀಡಿದ್ದಾರೆ.

ಮುಂಬರುವ ದಿನಗಳಲ್ಲಿ ಚುನಾವಣಾ ಆಯೋಗ ರಾಜಕೀಯ ಪಕ್ಷಗಳ ಜತೆ ವಿವಿಧ ಚುನಾವಣಾ ಸುಧಾರಣೆ ಮತ್ತು ನೀತಿ ಸಂಹಿತೆ ಕುರಿತು ಚರ್ಚೆ ನಡೆಸಲಿದೆ ಎಂದು ಇಲ್ಲಿ ಹೇಳಿದರು. ದೆಹಲಿಯಲ್ಲಿ ಖಾಸಗಿ ವಾಹಿನಿ ಏರ್ಪಡಿಸಿದ್ದ ಶೃಂಗವನ್ನು ಉದ್ದೇಶಿಸಿ ಮಾತನಾಡಿದ ಅವರು, ಇವಿಎಂ ಅನ್ನು ಕಾರು ಅಥವಾ ಪೆನ್ನಿನ ರೀತಿ ಬೇಕಾದಂತೆ ತಿರುಚಲು ಆಗದು ಸಾಧ್ಯವೂ ಇಲ್ಲ.

ಹಾಲಿ ಇರುವ ಇವಿಎಂಗಳನ್ನು ಇನ್ನು ಮುಂದಿನ 20 ವರ್ಷಗಳ ಕಾಲ ಉಪಯೋಗ ಮಾಡಬಹುದಾಗಿದೆ ಅಲ್ಲದೇ ಮತ್ತೆ ಚುನಾವಣೆಯಲ್ಲಿ ಬ್ಯಾಲೆಟ್ ಪೇಪರ್ ಬಳಕೆ ಮಾಡುವ ಪ್ರಶ್ನೆಯೂ ಇಲ್ಲ ಎಂದೂ ಅವರು ಸ್ಪಷ್ಟಪಡಿಸಿದರು.

Comments are closed.