ರಾಷ್ಟ್ರೀಯ

ದೆಹಲಿಯಲ್ಲಿ ಆಮ್‌ ಆದ್ಮಿ ಪಕ್ಷ ಸ್ಪಷ್ಟ ಬಹುಮತದತ್ತ ದಾಪುಗಾಲು; ಮೂರನೇ ಬಾರಿ ದೆಹಲಿ ಗದ್ದುಗೆಯತ್ತ ಆಮ್​ ಆದ್ಮಿ

Pinterest LinkedIn Tumblr

ಹೊಸದಿಲ್ಲಿ: ರಾಷ್ಟ್ರ ರಾಜಧಾನಿಯ ವಿಧಾನಸಭೆ ಗದ್ದುಗೆಗಾಗಿ ನಡೆದ ಹಣಾಹಣಿಯಲ್ಲಿ ಗೆಲುವಿನ ನಗೆ ಬೀರುವವರು ಯಾರು ಎನ್ನುವುದು ಇಂದು ತಿಳಿಯಲಿದೆ. ಶನಿವಾರ ನಡೆದಿದ್ದ ಚುನಾವಣೆಯ ಮತ ಎಣಿಕೆ ಬಿಗಿ ಭದ್ರತೆ ನಡುವೆ ನಡೆಯಲಿದೆ. ನಗರದ 21 ಕಡೆ ಮತ ಎಣಿಕೆ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಆಡಳಿತರೂಢ ಆಮ್‌ ಆದ್ಮಿ ಪಾರ್ಟಿಯು 2015ರ ಫಲಿತಾಂಶ ಮರುಕಳಿಸಲಿದೆ ಎಂಬ ವಿಶ್ವಾಸದಲ್ಲಿದೆ.

ಮತ ಎಣಿಕೆಯ ಆರಂಭವಾದ ಒಂದೂವರೆ ಗಂಟೆಯ ಅವಧಿಯಲ್ಲೇ ಹೊಸದಿಲ್ಲಿಯ ಚುನಾವಣಾ ಫಲಿತಾಂಶ ಚಿತ್ರಣ ಲಭ್ಯವಾಗಿದ್ದು, ಆಮ್‌ ಆದ್ಮಿ ಪಕ್ಷ ನಿಚ್ಚಳ ಬಹುಮತ ಪಡೆಯುವಲ್ಲಿ ಯಶಸ್ವಿಯಾಗಿದೆ. 50 ಕ್ಷೇತ್ರಗಳಲ್ಲಿ ಮುನ್ನಡೆ ಪಡೆಯುವ ಮೂಲಕ ಅರವಿಂದ್‌ ಕೇಜ್ರಿವಾಲ್‌ ನೇತೃತ್ವದ ಪಕ್ಷ ಮತ್ತೆ ಅಧಿಕಾರ ಕೈ ಹಿಡಿಯುವ ಹಾದಿಯಲ್ಲಿ ಸಾಗಿದೆ. ಬಿಜೆಪಿ 20 ಸ್ಥಾನದಲ್ಲಿ ಮುನ್ನಡೆಯಲ್ಲಿದ್ದರೆ, ಕಾಂಗ್ರೆಸ್ ಮಾತ್ರ ಮುಖಭಂಗ ಅನುಭವಿಸಿದೆ.

ಹೊಸದಿಲ್ಲಿಯಲ್ಲಿ ವಿವಿಐಪಿ ಸಂಸ್ಕೃತಿಯನ್ನು ಬದಿಗಿಟ್ಟು, ಆಮ್‌ ಆದ್ಮಿಗಳ ಪರವಾಗಿ ಅಧಿಕಾರ ನೀಡಿದ್ದು ಹಾಗೂ ಅಗತ್ಯ ವಿಷಯಗಳಿಗೆ ಸಂಬಂಧಿಸಿದಂತೆ ಕೇಜ್ರಿವಾಲ್‌ ಸರಕಾರ ಸಬ್ಸಿಡಿ ಘೋಷಣೆ ಮಾಡಿದ್ದು, ಆಮ್‌ ಆದ್ಮಿ ಪಕ್ಷಕ್ಕೆ ಗೆಲುವು ತಂದುಕೊಟ್ಟಿದೆ.

ಕಳೆದ ಬಾರಿಯ ಚುನಾವಣೆಯಲ್ಲಿ ಶೂನ್ಯ ಸಂಪಾದನೆ ಮಾಡಿದ್ದ ಕಾಂಗ್ರೆಸ್‌ ಈ ಬಾರಿಯೂ ಮತದಾರರಿಂದ ತಿರಸ್ಕೃತವಾಗುವ ಸಾಧ್ಯತೆ ಇದೆ. ಒಂದೆರಡು ಕ್ಷೇತ್ರದಲ್ಲಿ ಮುಂದಿದ್ದ ಕಾಂಗ್ರೆಸ್‌ ಅಭ್ಯರ್ಥಿಗಳು ಈಗ ಹಿನ್ನಡೆ ಅನುಭವಿಸಿದ್ದಾರೆ.

2015ರ ವಿಧಾನಸಭಾ ಚುನಾವಣೆಗಿಂತ ಈ ಬಾರಿ ತುಸು ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಪಡೆದುಕೊಂಡಿರುವುದೇ ಬಿಜೆಪಿಗೆ ತೃಪ್ತಿ ಪಟ್ಟುಕೊಳ್ಳುವಂಥ ವಿಷಯವಾಗಿದೆ.

ರಾಷ್ಟ್ರ ರಾಜಧಾನಿಯಲ್ಲಿ ಆಮ್‌ ಆದ್ಮಿ ಪಕ್ಷ ಸ್ಪಷ್ಟ ಬಹುಮತದತ್ತ ದಾಪುಗಾಲಿಟ್ಟಿದೆ. ಕಳೆದ ಬಾರಿ ವಿಧಾನಸಭಾ ಚುನಾವಣೆಯ ಫಲಿತಾಂಶದ ಮಾದರಿಯಲ್ಲಿಯೇ ಅರವಿಂದ್ ಕೇಜ್ರಿವಾಲ್‌ ಪಕ್ಷ ಮತದಾರರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ.

ಅರ್ಧ ಗಂಟೆಯ ಮತದಾನದ ಅವಧಿಯಲ್ಲಿ ಆಮ್‌ ಆದ್ಮಿ ಪಕ್ಷ ಅರ್ಧ ಶತಕ ಕ್ಷೇತ್ರದಲ್ಲಿ ಮುನ್ನಡೆ ಪಡೆದುಕೊಂಡಿದೆ. ಮುಖ್ಯಮಂತ್ರಿ ಅರವಿಂದ್‌ ಕೇಜ್ರಿವಾಲ್‌ ಭಾರಿ ಮುನ್ನಡೆ ಪಡೆದುಕೊಂಡಿದ್ದಾರೆ.

Comments are closed.