ರಾಷ್ಟ್ರೀಯ

ಮೊಬೈಲ್ ನಲ್ಲಿ ಮಾತಾಡುತ್ತಿದ್ದ ತಂಗಿಯ ಹತ್ಯೆ!

Pinterest LinkedIn Tumblr


ತೆಲಂಗಾಣ: ಫೋನಿನಲ್ಲಿ ಮಾತನಾಡುತ್ತಿದ್ದಳೆಂದು ಸಿಟ್ಟುಗೊಂಡ ಸಹೋದರನೊಬ್ಬ ತನ್ನ 17 ವರ್ಷದ ಸಹೋದರಿಯನ್ನೇ ಕೊಲೆಗೈದ ಘಟನೆ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ.

ಆಂಧ್ರಪ್ರದೇಶದ ಗುಂಟೂರು ಜಿಲ್ಲೆಯಲ್ಲಿ ಶುಕ್ರವಾರ ರಾತ್ರಿ 17 ವರ್ಷದ ಬಾಲಕಿಯ ಶವವೊಂದು ಪತ್ತೆಯಾಗಿತ್ತು. ಈ ಬಗ್ಗೆ ತನಿಖೆ ನಡೆಸಿದಾಗ ಸಹೋದರನೇ ಸಹೋದರಿಯನ್ನು ಕೊಲೆ ಮಾಡಿರುವ ಬಗ್ಗೆ ಬಯಲಾಗಿದೆ.

ಮೃತ ದುರ್ದೈವಿಯನ್ನು ತನುಜಾ ಎಂದು ಗುರುತಿಸಲಾಗಿದೆ. ಈಕೆಯ ವರ್ಷದ ಅಣ್ಣನೇ ಕೊಲೆ ಮಾಡಿದ್ದಾನೆ. ಈ ಘಟನೆ ತನುಜಾ ಹಾಗೂ ಆರೋಪಿ ರಮೇಶ್ ಇಬ್ಬರೇ ಮನೆಯಲ್ಲಿರುವಾಗ ನಡೆದಿದೆ.

ಈ ಇಬ್ಬರು ಅಣ್ಣ-ತಂಗಿ ಕೃಷ್ಣಾ ಜಿಲ್ಲೆಯಲ್ಲಿರುವ ತಿರುವೂರಿಗೆ ಅಜ್ಜನ ಅಂತ್ಯಸಂಸ್ಕಾರೆಂದು ತೆರಳಿದ್ದರು. ಕಾರ್ಯಕ್ರಮದ ಬಳಿಕ ಪರೀಕ್ಷೆ ಇದೆ ಎಂದು ಪೋಷಕರು ಇಬ್ಬರನ್ನೂ ವಾಪಸ್ ಮನೆಗೆ ಕಳುಹಿಸಿದ್ದಾರೆ. ಆದರೆ ಪೊಲೀಸರು ತನುಜಾಳಿಗೆ ಪರೀಕ್ಷೆ ಇರಲಿಲ್ಲ ಎಂದು ತಿಳಿಸಿದ್ದಾರೆ.

ಪ್ರಕರಣ ಸಂಬಂಧ ಪೊಲೀಸರು ರಮೇಶ್ ನನ್ನು ತನಿಖೆ ನಡೆಸಿದಾಗ, ಕ್ಷುಲ್ಲಕ ವಿಚಾರ ಅಂದರೆ ಆಕೆ ತುಂಬಾ ಹೊತ್ತು ಫೋನಿನಲ್ಲಿ ಮಾತನಾಡುತ್ತಿದ್ದಳು. ಹೀಗಾಗಿ ಸಿಟ್ಟುಗೊಂಡು ತಾನೇ ಆಕೆಯನ್ನು ಕೊಲೆ ಮಾಡಿರುವುದಾಗಿ ಒಪ್ಪಿಕೊಂಡಿದ್ದಾನೆ. ಫೋನಿನಲ್ಲಿ ಮಾತಾಡೋದು ನಿಲ್ಲಿಸು ಎಂದು ಹೇಳಿದ್ದೆ. ಆದರೆ ಆಕೆ ತನ್ನ ಮಾತನ್ನು ಕೇಳಲಿಲ್ಲ. ಹೀಗಾಗಿ ಸಿಟ್ಟುಗೊಂಡು ಆಕೆಯ ಕತ್ತು ಹಿಸುಕಿ ಕೊಲೆಗೈದಿರುವುದಾಗಿ ತಿಳಿಸಿದ್ದಾನೆ.

ಮಗನಿಗೆ ಸಿಟ್ಟು ಸ್ವಲ್ಪ ಜಾಸ್ತಿ. ಕೆಲವೊಂದು ಬಾರಿ ಆತ ತಾಳ್ಮೆ ಕಳೆದುಕೊಂಡು ಮನೆ ಬಿಟ್ಟು ಹೋದ ಘಟನೆಗಳೂ ಇವೆ ಎಂದು ರಮೇಶ್ ಹೆತ್ತವರು ಪೊಲೀಸರ ಬಳಿ ಹೇಳಿದ್ದಾರೆ. ಘಟನೆಯ ಬಳಿಕ ಆರೋಪಿ ವಿರುದ್ಧ ಐಪಿಸಿ ಸೆಕ್ಷನ್ 302(ಕೊಲೆ) ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತನಿಖೆ ಮುಂದುವರಿದಿದೆ.

Comments are closed.