ರಾಷ್ಟ್ರೀಯ

ಅಯೋಧ್ಯಾನಗರಿಯಲ್ಲಿ ತಲೆಯೆತ್ತಲಿರುವ ರಾಮಮಂದಿರ ನಿರ್ಮಾಣಕ್ಕೆ 10 ಕೋಟಿ ರೂ. ದೇಣಿಗೆ

Pinterest LinkedIn Tumblr


ಪಟ್ನಾ: ಅಯೋಧ್ಯಾನಗರಿಯಲ್ಲಿ ತಲೆಯೆತ್ತಲಿರುವ ಭವ್ಯ ಶ್ರೀರಾಮ ಮಂದಿರ ನಿರ್ಮಾಣಕ್ಕೆ 10 ಕೋಟಿ ರೂ. ದೇಣಿಗೆ ನೀಡುವುದಾಗಿ ಪಟ್ನಾದ ಮಹಾವೀರ ದೇವಾ ಲಯ ಟ್ರಸ್ಟ್‌ ಘೋಷಿಸಿದೆ.

ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಟ್ರಸ್ಟ್‌ ರಚನೆಯನ್ನು ಘೋಷಿಸಿದ ಬೆನ್ನಲ್ಲೇ ಬಿಹಾರ ರಾಜಧಾನಿಯಲ್ಲಿನ ಮಹಾವೀರ ದೇಗುಲ ಟ್ರಸ್ಟ್‌ ಈ ದೇಣಿಗೆ ನೀಡುವುದಾಗಿ ತಿಳಿಸಿದೆ. ಅಯೋಧ್ಯೆಗೆ ತೆರಳಿ ಮೊದಲು 2 ಕೋಟಿ ರೂ. ಮೌಲ್ಯದ ಚೆಕ್‌ ನೀಡಲಿದ್ದು, ಬಳಿಕ ಹಂತ ಹಂತವಾಗಿ ಒಟ್ಟಾರೆ 10 ಕೋಟಿ ರೂ.ಗಳನ್ನು ಮಂದಿರ ನಿರ್ಮಾಣಕ್ಕೆ ನೀಡುವುದಾಗಿ ಮಹಾವೀರ ದೇವಾಲಯ ಟ್ರಸ್ಟ್‌ ನ ಕಾರ್ಯದರ್ಶಿ ಕಿಶೋರ್‌ ಕುನಾಲ್‌ ಎಎನ್‌ಐಗೆ ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.

“ಟ್ರಸ್ಟ್‌ಗೆ 1818ರ ಅವಧಿಯ 30 ನಾಣ್ಯಗಳು ದೊರೆತಿದ್ದು, ಅವುಗಳ ಒಂದು ಬದಿಯಲ್ಲಿ ಶ್ರೀರಾಮ, ಲಕ್ಷ್ಮಣ, ಸೀತಾ ಮಾತೆ ಮತ್ತು ಆಂಜನೇಯ ಸ್ವಾಮಿಯ ಚಿತ್ರಗಳಿವೆ. ಈಸ್ಟ್‌ ಇಂಡಿಯಾ ಕಂಪೆನಿಯು ಈ ನಾಣ್ಯಗಳನ್ನು ಹೊರತಂದಿತ್ತು’ ಎಂದು ಇದೇ ವೇಳೆ ಕಿಶೋರ್‌ ಮಾಹಿತಿ ನೀಡಿದ್ದಾರೆ.

Comments are closed.